ಮಹಾಭಾರತ ಧಾರಾವಾಹಿಯಲ್ಲಿ ಕುಂತಿ ಪಾತ್ರ ಮಾಡಿದ ಶಫಕ್ ನಾಝ್ ಅವರ ಬಗ್ಗೆ ಹಾಗೂ ಅವರು ಮಹಾಭಾರತ ಧಾರಾವಾಹಿಗೆ ಆಯ್ಕೆಯಾದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶಫಕ್ ಹುಟ್ಟಿದ್ದು ಉತ್ತರ ಪ್ರದೇಶದ ಮೀರತ್ ನಲ್ಲಿರುವ ಮುಸ್ಲಿಂ ಕುಟುಂಬದಲ್ಲಿ. ಓದಿದ್ದು ಡಿಗ್ರಿ ಇಬ್ಬರು ತಮ್ಮಂದಿರು ಒಬ್ಬಳು ತಂಗಿ ಇದ್ದಾಳೆ. ಶಫಕ್ ಮನೆಯಲ್ಲಿ ದೊಡ್ಡ ಮಗಳು ಹಾಗೂ ಮುದ್ದು ಮಗಳು. ತಂದೆ ತಾಯಿ ಫ್ರೀಡಮ್ ಕೊಟ್ಟಿದ್ದರೂ ಮಿಸ್ ಯೂಸ್ ಮಾಡಿಕೊಳ್ಳಲಿಲ್ಲ. ಶಫಕ್ ಡ್ಯಾನ್ಸ್ ಕಲಿತುಕೊಂಡಳು ಅದರಲ್ಲೂ ಕಥಕ್ ಡ್ಯಾನ್ಸ್ ನಲ್ಲಿ ಪ್ರವೀಣೆಯಾಗಿದ್ದಳು. ಶಫಕ್ ಡ್ಯಾನ್ಸ್ ಮಾಡಲು ಕಾರಣ ಬಾಲಿವುಡ್ ಡ್ಯಾನ್ಸ ಡೈರೆಕ್ಟರ್ ಸರೋಜ ಖಾನ್. ಅವರು ಒಮ್ಮೆ ಶಫಕ್ ಡ್ಯಾನ್ಸ ನೋಡಿ ಶಫಕ್ ತಾಯಿಯ ಹತ್ತಿರ ನಿಮ್ಮ ಮಗಳು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ ಅವಳನ್ನು ಮುಂಬೈಗೆ ಕಳುಹಿಸಿ ಎಂದರು ಶಫಕ್ ತಾಯಿ ಒಪ್ಪಿದರು. ಕನಸುಗಳೊಂದಿಗೆ ಮುಂಬೈಗೆ ಹೋದರು ಶಫಕ್. ಸೀರಿಯಲ್ ನಲ್ಲಿ ನಟಿಸಲು ಸುಮಾರು 150 ಆಡಿಷನ್ ಕೊಟ್ಟರು. 2010 ರಲ್ಲಿ ಸಪ್ನಾ ಬಾಬುಲ್ ಕಾ ಬಿದಾಯ್ ಎನ್ನುವ ಸೀರಿಯಲ್ ನಲ್ಲಿ ಮೊದಲು ನಟಿಸಿದರು. ನಂತರ 2011 ರಲ್ಲಿ ಸಂಸ್ಕಾರ ಲಕ್ಷ್ಮೀ, ಶುಭ ವಿವಾಹ, ಅದಾಲತ್, ತೇರಿ ಮೇರಿ ಲವಸ್ಟೋರಿ ಹೀಗೆ 2014 ರವರೆಗೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದರು ಅವರಿಗೆ ಆಗ 21 ವರ್ಷ ವಯಸ್ಸಾಗಿತ್ತು.
ಮಹಾಭಾರತ ಸೀರಿಯಲ್ ಡೈರೆಕ್ಟರ್ ಶಫಕ್ ಗೆ ಕುಂತಿ ಪಾತ್ರ ಮಾಡುತ್ತೀರಾ ಎಂದು ಕೇಳಿದಾಗ ಶಫಕ್ ಶಾಕ್ ಆದರು ತಾನೊಬ್ಬ ಮುಸ್ಲಿಂ ಪೌರಾಣಿಕ ಗ್ರಂಥಗಳನ್ನು ಓದಿಲ್ಲ, ಪೌರಾಣಿಕ ಧಾರಾವಾಹಿಗಳನ್ನು ನೋಡಿಯೂ ಇಲ್ಲ ಅಲ್ಲದೇ 21 ವರ್ಷದ ನಾನು ಕುಂತಿ ಪಾತ್ರವನ್ನು ಹೇಗೆ ಮಾಡುವುದು ಎಂಬ ಭಯ ಶಫಕ್ ಗೆ ಆದರೂ ಶಫಕ್ ನೋಡೋಣ ಎಂದು ಪ್ರಯತ್ನಿಸಿದರು ಜನರು ಕುಂತಿಯನ್ನು ಒಪ್ಪಿಕೊಂಡರು. ಆನಂತರ ಹಲವು ಸೀರಿಯಲ್, ಸಿನಿಮಾಗಳಲ್ಲಿ ಅವಕಾಶ ದೊರಕಿತು. ಅವರು ಕುಂತಿ ಪಾತ್ರಕ್ಕಾಗಿ ಪೌರಾಣಿಕ ಕಥೆಗಳನ್ನು ಓದಿದರು, ತಿಳಿದುಕೊಂಡರು, ಪಾತ್ರಕ್ಕಾಗಿ ಕುದುರೆ ಸವಾರಿ, ಖಡ್ಗ ಜಳಪಿಸುವುದನ್ನು ಕಲಿತುಕೊಂಡರು. ಸೆಟ್ ನಲ್ಲಿ ಶಫಕ್ ಲವಲವಿಕೆಯಿಂದ ಇರುತ್ತಾರೆ. ಅವರಿಗೆ ಮದುವೆಯಾಗಿಲ್ಲ ಹಾಗೂ ಡೇಟಿಂಗ್ ಬಗ್ಗೆಯೂ ಎಲ್ಲೂ ಹೇಳಿಕೊಂಡಿಲ್ಲ. ಮಹಾಕಾಳಿ ಧಾರಾವಾಹಿಯಲ್ಲಿಯೂ ನಟಿಸಲಿದ್ದಾರೆ. ಇನ್ನು ಹೆಚ್ಚಿನ ಅವಕಾಶಗಳು ಶಫಕ್ ಅವರಿಗೆ ಸಿಗಲಿ ಎಂದು ಹಾರೈಸೋಣ.