ನಮ್ಮ ದೇಶದಲ್ಲಿ ಹಲವು ಕ್ಷೇತ್ರಗಳಿವೆ ಐಟಿ, ಟೆಕ್ನಾಲಜಿ ಹೀಗೆ ಆಟೋಮೊಬೈಲ್ ಕ್ಷೇತ್ರವು ಒಂದು. ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಗಳನ್ನು ನೋಡಬಹುದು. ಆಟೋಮೊಬೈಲ್ ಕ್ಷೇತ್ರದಲ್ಲಿ ಕಾರು ಭಾರಿ ಬದಲಾವಣೆಯನ್ನು ತಂದಿದೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೊರೋನ ಕಾರಣದಿಂದ ಎಲ್ಲರಿಗೂ ಬಹಳ ನಷ್ಟವಾಗಿದೆ ಆದರೆ ಈಗ ನಿಸ್ಸಾನ್ ಮ್ಯಾಗ್ನೈಟ್ ಕಾರು ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸದೊಂದು ಸಾಧನೆ ಮಾಡಿದೆ. ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್.ಯು.ವಿ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾರಾಟದಲ್ಲಿ ನೂತನ ದಾಖಲೆ ನಿರ್ಮಾಣ ಮಾಡಿದೆ. ಈ ಕಾರು ಬಿಡುಗಡೆಯಾದ ನಂತರ ಇಲ್ಲಿಯವರೆಗೆ ನಿಸ್ಸಾನ್ ಮ್ಯಾಗ್ನೈಟ್ ಮಾದರಿಯ ಕಾರು ಬರೋಬ್ಬರಿ 36000 ಕ್ಕಿಂತ ಹೆಚ್ಚು ಮಾರಾಟವಾಗಿದೆ. ಅದರಲ್ಲೂ ಬೆಂಗಳೂರಿನ ಸೂರ್ಯ ನಿಸ್ಸಾನ್ ಡೀಲರ್ಸ್ ಮೂಲಕ ಒಂದೇ ದಿನದಲ್ಲಿ ಬರೋಬ್ಬರಿ ನೂರು ಯೂನಿಟ್ ನಿಸ್ಸಾನ್ ಮ್ಯಾಗ್ನೈಟ್ ಕಾರು ವಿತರಣೆ ಮಾಡಲಾಗಿದೆ. ಈ ಕಾರುಗಳಿಗೆ ಎಷ್ಟು ಬೇಡಿಕೆ ಹೆಚ್ಚಾಗುತ್ತಿದೆ ಎಂದರೆ ಬುಕ್ಕಿಂಗ್ ಆಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ವಿತರಣೆ ಮಾಡುವುದಕ್ಕೆ ಸಮಸ್ಯೆ ಆಗುವಷ್ಟು ಬೇಡಿಕೆ ಸೃಷ್ಠಿಯಾಗಿದೆ.
ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಾರಿಗೆ ಸಿಕ್ಕ ಬೇಡಿಕೆ ಬೇರೆ ಯಾವ ಮಾದರಿಯ ಕಾರಿಗೂ ಸಿಕ್ಕಿಲ್ಲ. ಈ ಮ್ಯಾಗ್ನೈಟ್ ಕಾರು ತನ್ನ ಪ್ರತಿ ಸ್ಪರ್ಧಿ ಕಾರಿಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು ಅಲ್ಲದೇ ಅವುಗಳಿಗಿಂತ ವಿಶೇಷ ಫ್ಯೂಚರ್ ಗಳನ್ನು ಒಳಗೊಂಡಿದೆ. ಇದರ ಬೆಲೆಯು ಆರಂಭಿಕವಾಗಿ 5.49 ಲಕ್ಷ ರೂಪಾಯಿಗಳಿಂದ 9.35 ಲಕ್ಷ ರೂಪಾಯಿವರೆಗೂ ಇದ್ದು, ಈ ಮಾದರಿಯ ಕಾರಿಗೆ 50,000 ರೂಪಾಯಿ ಹೆಚ್ಚಳ ಮಾಡಲಾಗಿದೆ. ನಿಸ್ಸಾನ್ ಮ್ಯಾಗ್ನೈಟ್ ಕಾರು ವೈಶಿಷ್ಟ್ಯ ಹೊಂದಿದೆ ಅದು ಪ್ರೀಮಿಯಂ ಫ್ಯೂಚರ್ ನಲ್ಲಿ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ ಅದಕ್ಕಾಗಿ ಐಸೋಫಿಕ್ಸನೆಟ್, ಸೆಂಟರ್ ಡೋರ್ ಲಾಕಿಂಗ್, ಅಟೋಡೋರ್ ಲಾಕ್, ರಿಮೋಟ್ ಕೀ ಲೆಸ್ ಪ್ರವೇಶದ ಸವಲತ್ತುಗಳನ್ನು ಹೊಂದಿದೆ. ಅಲ್ಲದೇ ಇದರ ಮುಂಭಾಗದಲ್ಲಿ ಏರ್ ಬ್ಯಾಗ್ ಹೊಂದಿದ್ದು, ಎಬಿಎಸ್ ಜೊತೆಗೂಡಿ ಇಬಿಡಿ ಆಂಟಿರೋಲ್ ಬಾರ್, ಟಯರ್ ಪ್ರೆಷರ್ ಮಾನಿಟರಿಂಗ್, ಬ್ರ್ಯಾಂಡ್ ಕಾಮೆಟ್ ಫ್ಯೂಚರ್ ಒಳಗೊಂಡಿದೆ. ಈ ನಿಸ್ಸಾನ್ ಮ್ಯಾಗ್ನೈಟ್ ಕಾರು 360 ಡಿಗ್ರಿಯ ಕ್ಯಾಮೆರಾ, ಲೆದರ್ ಮ್ಯಾಪ್, ಸ್ಟ್ಯಾಂಡರ್ಡ್ ಆಗಿರುವ ವೇಗದ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಪ್ರತಿಸ್ಪರ್ಧಿ ಕಾರುಗಳ ಬೆಲೆಯು ಆರಂಭಿಕವಾಗಿ 6.70 ಲಕ್ಷ ರೂಪಾಯಿಯಿಂದ 12.80 ಲಕ್ಷ ರೂಪಾಯಿಯನ್ನು ಹೊಂದಿದೆ. ಈ ಬೆಲೆಗೆ ಹೋಲಿಸಿದರೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆಯು ಉತ್ತಮವಾದ ಫ್ಯೂಚರ್ ನೊಂದಿಗೆ ಕಡಿಮೆ ದರದಲ್ಲಿ ಮಾರಾಟ ಆಗುತ್ತಿರುವುದು ಗ್ರಾಹಕರನ್ನು ಬೇಗ ಸೆಳೆಯುತ್ತಿದೆ ಎನ್ನಬಹುದಾಗಿದೆ. ಒಟ್ಟಾರೆಯಾಗಿ ಈ ಮಾದರಿಯ ಕಾರು ಮಾರುಕಟ್ಟೆಯಲ್ಲಿ ಉಳಿದ ಕಾರುಗಳನ್ನು ಹಿಂದಿಕ್ಕಿದೆ.