lucky zodiac signs in 2023: ಆಷಾಡ ಮಾಸ ಶುರುವಾಗಿದ್ದು, ಈ ಆಷಾಡ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ ಹಾಗೂ ಕೈಯಲ್ಲಿ ಕಾಸು ಇರೋದಿಲ್ಲ, ಬರಿ ಕಷ್ಟಗಳೇ ಎದುರಾಗುತ್ತೆ ಅನ್ನುವ ಮಂದಿ ಬಹಳಷ್ಟು ಜನ ಇದ್ದಾರೆ, ಆದ್ರೆ ಇದೆಲ್ಲಕ್ಕೂ ಸಂಪೂರ್ಣ ವಿರಾಮ ಕೊಡಲಿದೆ ಕುಬೇರ ಹಾಗೂ ಲಕ್ಷ್ಮೀದೇವಿ.

ಹೌದು ಪ್ರಿಯ ಓದುಗರೇ ಮನುಷ್ಯ ಎಷ್ಟೇ ಬುದ್ದಿವಂತ ಆಗಿದ್ರು ಕೂಡ ತನ್ನ ಆಚಾರ ವಿಚಾರ, ಸಂಪ್ರದಾಯ ಹಾಗೂ ಪೂಜೆ ಪುರಸ್ಕಾರ ಮರೆಯೋದಿಲ್ಲ, ದೈವದ ಮೇಲೆ ಅತಿಯಾದ ನಂಬಿಕೆ ಇದ್ದೆ ಇರುತ್ತೆ ಇವತ್ತಲ್ಲ ನಾಳೆ ಒಳ್ಳೆಯದು ಆಗೇ ಆಗುತ್ತೆ ಅನ್ನುವ ಬಲವಾದ ನಂಬಿಕೆ ಮನುಷ್ಯನಲ್ಲಿದೆ. ಆಷಾಡ ಮಾಸದಲ್ಲಿ ಈ 3 ರಾಶಿಯವರಿಗೆ ಹಣಕಾಸಿನ ಸಮಸ್ಯೆ ಇರೋದಿಲ್ಲ ಹಾಗೂ ಬಹುದಿನದ ಕಷ್ಟಗಳಿಗೆ ಬ್ರೇಕ್ ಬೀಳಲಿದೆ ಹಾಗಾದರೆ ಅದೃಷ್ಟವಂತ ರಾಶಿಗಳು (lucky zodiac) ಯಾವುವು ಅನ್ನೋದನ್ನ ಮುಂದೆ ವಿವರಿಸಲಾಗಿದೆ.

ಮೊದಲನೆಯದಾಗಿ ಕುಬೇರ ಹಾಗೂ ಲಕ್ಷ್ಮೀದೇವಿಯ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ ಧನು ರಾಶಿ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ ಹಾಗೂ ಹಣಕಾಸಿನ ಸಮಸ್ಯೆ ಇರೋದಿಲ್ಲ, ಈ ವರ್ಷದಲ್ಲಿ ಅಸ್ತಿ ಅಥವಾ ವಾಹನ ಖರೀದಿಸಬಹುದು

ಎರಡನೆಯದಾಗಿ ಮಿಥುನ ರಾಶಿ: ಈ ಮಿಥುನರಾಶಿಗೆ ಈ ವರ್ಷದಲ್ಲಿ ಹಲವು ಶುಭ ಫಲಗಳಿವೆ, ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ತಂದೆ ತಾಯಿಯರ ಬಳಿ ವಿಚಾರವನ್ನು ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಿ ಒಳ್ಳೇದಾಗುತ್ತೆ, ಇನ್ನು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಪ್ರಗತಿಯಾಗಲಿದೆ. ಸ್ನೇಹಿತರಿಂದ ಮಾಡುವ ಕೆಲಸಕ್ಕೆ ಬೆಂಬಲ ಸಿಗಲಿದೆ. ಹಣಕಾಸಿನ ತೊಂದರೆ ಇಲ್ಲ, ನಿಮ್ಮ ಬಹುದಿನದ ಕಷ್ಟಕ್ಕೆ ಬ್ರೇಕ್ ಬೀಳಲಿದೆ ಮನೆದೇವರನ್ನು ಪ್ರಾರ್ಥಿಸಿ ಶುಭವಾಗಲಿದೆ.

ಮೂರನೆಯದಾಗಿ ಮಕರ ರಾಶಿ: ಈ ಮಕರ ರಾಶಿಯವರಿಗೆ ಶನಿದೇವನ ಬೆಂಬಲ ಹೆಚ್ಚಾಗಿರುವುದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಶನಿಕಾಟ ಇರೋದಿಲ್ಲ, ಶನಿಯ ಅಪಾರ ಆಶೀರ್ವಾದ ಇರುತ್ತೆ ಹಾಗಾಗಿ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಲಾಭ ಕಾಣಲಿದೆ, ಸಂಬಂಧಿಕರಿಂದ ಸಹಕಾರ ಸಿಗಲಿದೆ, ಮದುವೆಯ ವಿಚಾರದಲ್ಲಿ ಸಿಹಿಸುದ್ದಿ ಕೇಳಲಿದ್ದೀರಿ ಇದನ್ನೂ ಓದಿ Shani Deva: ಇವತ್ತಿನಿಂದ ಈ 4 ರಾಶಿಯವರಿಗೆ ಶನಿದೆಸೆ ಶುರು, ಎಂತಹ ಕಷ್ಟ ಇದ್ರು ಕೈ ಹಿಡಿಯುತ್ತಾನೆ ಶನಿದೇವ

Leave a Reply

Your email address will not be published. Required fields are marked *