ಸಾಮಾನ್ಯವಾಗಿ ಎಲ್ಲರೂ ಎಲ್ ಪಿಜಿ ಗ್ಯಾಸ್ ಅನ್ನು ಖರೀದಿಸುತ್ತಾರೆ. ಕೆಲವು ಮನೆಗಳಿಗೆ ಗ್ಯಾಸ್ ಸಂಪರ್ಕ ಹೊಂದಿರುವುದಿಲ್ಲ ಅವರು ಎಲ್ ಪಿಜಿ ಗ್ಯಾಸ್ ಸಂಪರ್ಕ ಹೊಂದಬೇಕಾದರೆ ಕೆಲವು ನಿಯಮಗಳಲ್ಲಿ ಸುಲಭ ಮಾಡಿದ್ದಾರೆ. ಹಾಗಾದರೆ ಗ್ಯಾಸ್ ಸಂಪರ್ಕ ಹೊಂದುವ ನಿಯಮಗಳಲ್ಲಿ ಮಾಡಿರುವ ಸರಳತೆಯ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಎಲ್‌ಪಿಜಿಯ ಹೊಸ ಸಂಪರ್ಕ ತೆಗೆದುಕೊಳ್ಳಬೇಕೆಂದರೆ ಹೊಸದಾಗಿ ಎಲ್ ಪಿಜಿ ಸಂಪರ್ಕವನ್ನು ಪಡೆಯುವುದು ಈಗ ಬಹಳ ಸುಲಭವಾಗಿದೆ. ಮೊದಲು ಗ್ಯಾಸ್ ಸಂಪರ್ಕ ಪಡೆಯಬೇಕಾದರೆ ಅಡ್ರೆಸ್ ಪ್ರೂಫ್ ಗಾಗಿ ಆಧಾರ್ ಕಾರ್ಡ್ ನೀಡಬೇಕಾಗಿತ್ತು. ಮೊದಲು ಅಡ್ರೆಸ್ ಪ್ರೂಫ್ ಇದ್ದರೆ ಮಾತ್ರ ಗ್ಯಾಸ್ ಸಿಲಿಂಡರ್ ಸಿಗುತ್ತಿತ್ತು
ಆದರೆ ಈಗ ಹೊಸ ನಿಯಮದ ಪ್ರಕಾರ, ಗ್ಯಾಸ್ ಕನೆಕ್ಷನ್ ಪಡೆಯಲು ಅಡ್ರೆಸ್ಸ್ ಪ್ರೂಫ್ ನೀಡುವ ಅಗತ್ಯವಿಲ್ಲ. ಗ್ಯಾಸ್ ಸಂಪರ್ಕ ಬೇಕಾದವರು ಈಗಾಗಲೆ ಕುಟುಂಬದಲ್ಲಿ ಯಾರಾದರೂ ಎಲ್ ಪಿಜಿ ಸಂಪರ್ಕ ಹೊಂದಿದ್ದರೆ ಸುಲಭವಾಗಿ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ಈಗ ಅಡ್ರೆಸ್ ಪ್ರೂಫ್ ಒದಗಿಸುವ ಅಗತ್ಯವಿಲ್ಲ.
ತೈಲ ಕಂಪನಿಗಳು ಗ್ರಾಹಕರಿಗೆ ಈ ಸೌಲಭ್ಯವನ್ನು ಇದೀಗ ಹೊಸದಾಗಿ ನೀಡಿವೆ. ಈ ಸೌಲಭ್ಯವನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿಯೂ ಪಡೆಯಬಹುದು. ಈ ಸೌಲಭ್ಯದ ಅಡಿಯಲ್ಲಿ ಈಗಾಗಲೆ ಪೋಷಕರು, ಒಡಹುಟ್ಟಿದವರು ಅಥವಾ ಕುಟುಂಬದ ಯಾವುದೇ ಸದಸ್ಯನ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಇದ್ದರೆ ಇತರ ಕುಟುಂಬದ ಸದಸ್ಯರು ಕೂಡ ಈ ವಿಳಾಸದ ಲಾಭವನ್ನು ಪಡೆಯಬಹುದು ಇದಕ್ಕಾಗಿ ವಿಳಾಸವನ್ನು ವೆರಿಫೈ ಮಾಡಬೇಕಾಗುತ್ತದೆ.
ಯಾವ ತೈಲಕಂಪನಿಯ ಗ್ಯಾಸ್ ಅನ್ನು ಖರೀದಿಸುತ್ತಾರೊ ಅದೆ ಏಜೆನ್ಸಿಗೆ ಹೋಗಿ ಮೂಲ ಸಿಲಿಂಡರ್ ನ ದಾಖಲೆ ಪತ್ರಗಳನ್ನು ಒದಗಿಸಬೇಕು. ನಂತರ ಪರಿಶೀಲನೆಯನ್ನು ಮಾಡಿ, ಹೊಸ ಗ್ಯಾಸ್ ಸಂಪರ್ಕ ಕೊಡುತ್ತಾರೆ. ಇನ್ನು ಎಲ್ ಪಿಜಿ ಮೇಲೆ ಸಿಗುವ ಸಬ್ಸಿಡಿ ಎಲ್ಲಾ ಸಿಲಿಂಡರ್ ಗಳ ಮೇಲೆಯೂ ಸಿಗುತ್ತದೆ. ಇಂತಹ ಗ್ಯಾಸ್ ಸಂಪರ್ಕಗಳನ್ನು ಉಜ್ವಲ ಯೋಜನೆಯಡಿ ಕೂಡ ಬುಕ್ ಮಾಡಬಹುದು.
ಕೇವಲ ನಿಮ್ಮ ಆಧಾರ್ ಕಾರ್ಡ್ ಮತ್ತು ಹಳೆಯ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ಗ್ಯಾಸ್ ಏಜೆನ್ಸಿಗೆ ನೀಡಿದ ನಂತರ ಹೊಸ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬೇಕು. ಈ ಮೂಲಕ ಒಂದೆ ವಿಳಾಸದಲ್ಲಿ ಅನೇಕ ಅನಿಲ ಸಂಪರ್ಕಗಳನ್ನು ತೆಗೆದುಕೊಳ್ಳಬಹುದು.
ಎಲ್ಲಾ ಗ್ಯಾಸ್ ಸಂಪರ್ಕಗಳು ಆಧಾರ್ ಗೆ ಲಿಂಕ್ ಆಗಿರುವುದರಿಂದ ಯಾವುದೆ ರೀತಿಯ ಮೋಸಕ್ಕೆ ಅವಕಾಶವಿರುವುದಿಲ್ಲ. ಈ ಹೊಸರೀತಿಯ ಯೋಜನೆ ಉತ್ತಮವಾಗಿದೆ ಇದರಿಂದ ಎಲ್ಲರ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡುವ ಗೊಂದಲ ತಪ್ಪುತ್ತದೆ, ಗ್ರಾಹಕರಿಗೂ ಇದರಿಂದ ಬಹಳ ಪ್ರಯೋಜನವಾಗುತ್ತದೆ. ಈ ಮಾಹಿತಿ ಉಪಯೋಗವಾಗಿದ್ದು ಪ್ರತಿಯೊಬ್ಬರಿಗೂ ತಿಳಿಸಿ ಹೊಸದಾಗಿ ಗ್ಯಾಸ್ ಕನೆಕ್ಷನ್ ಮಾಡಿಕೊಳ್ಳುವವರು ಈಗಲೆ ಗ್ಯಾಸ್ ಕನೆಕ್ಷನ್ ಸುಲಭವಾಗಿ ಮಾಡಿಕೊಳ್ಳಿರಿ.