ಭಾರತದಲ್ಲಿ ಮಹಾಭಾರತವನ್ನು ಬಲ್ಲವರಲ್ಲಿ ಕರ್ಣನೊಬ್ಬ ಖಳನಾಯಕನೆಂಬ ಒಂದು ಇಡೀ ಸಂಸ್ಕೃತಿಯೇ ಸೃಷ್ಟಯಾಗಿದೆ. ಅವನು ಒಂದು ಕೆಟ್ಟು ಹೋದ ಸಿಹಿ ಮಾವು. ಒಬ್ಬ ಅದ್ಭತ ಮನುಷ್ಯನಾಗಿದ್ದ ಅವನು ಕಹಿ ಭಾವನೆಯಲ್ಲಿ ಬಂಡವಾಳ ಹೂಡಿದ್ದರಿಂದ ಪೂರ್ತಿಯಾಗಿ ಕೆಟ್ಟವನಾದ. ದಾನಶೂರ ಕರ್ಣನ ಕೊನೆ ಆಸೆಯನ್ನು ಕೇಳಿ ಕೃಷ್ಣನೇ ಬೆಚ್ಚಿಬಿದ್ದದ್ದ ಹಾಗಾದರೆ ಕರ್ಣನ ಕೊನೆ ಆಸೆಗಳು ಏನಿದ್ದವು. ಮಹಾಭಾರತದ ಇಡೀ ಕಥೆಯಲ್ಲಿ ಕರ್ಣನಂತಹ ನತದೃಷ್ಟ ವ್ಯಕ್ತಿ ಮತ್ತೊಬ್ಬನಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೆ.

ಹೌದು ಕರ್ಣನ ಪಾತ್ರ ಮಹಾಭಾರತದ ದುರಂತಪಾತ್ರದಲ್ಲಿ ಒಂದಾಗಿದೆ. ಮದುವೆಗೂ ಮೊದಲು ಸೂರ್ಯನ ಪುತ್ರನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿ ಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣ ಪಡೆದು ಶಾಪವನ್ನು ಪಡೆಯುತ್ತಾನೆ. ದುರ್ಯೋಧನ ಕರ್ಣನ ಆಪ್ತ ಗೆಳೆಯ ಕೊನೆಗೆ ಮಹಾಭಾರತದ ಯುದ್ಧದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿಧ್ಯೆಯನ್ನೆಲ್ಲಾ ಮರೆತು ಹೋಗಿ ರಥ ಮಣ್ಣಿನಲ್ಲಿ ಹೂತು ಹೋಗಿದ್ದಾಗ ಅರ್ಜುನನ ಬಾಣದಿಂದ ಅವನು ಸಾಯುತ್ತಾನೆ.

ಕರ್ಣ ಅಸಾಧಾರಣ ಯೋಧನೆಂದು ಕೃಷ್ಣನಿಗೆ ಮೊದಲೇ ತಿಳಿದಿತ್ತು ಅರ್ಜುನ ಎಷ್ಟೇ ದೊಡ್ಡ ಬಿಲ್ಲುಗಾರನಾಗಿದ್ದರೂ ಕರ್ಣನನ್ನು ಸೋಲಿಸುವುದು ಅಸಾದ್ಯ ಎಂಬುದು ಅವನಿಗೆ ದೃಡವಾಗಿತ್ತು. ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟಾಗ ಕರ್ಣನಿಗೆ ಶಶ್ತ್ರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡುತ್ತದೆ. ಸೂತಪುತ್ರನಾದ ಅವನಿಗೆ ಶಶ್ತ್ರವಿದ್ಯಾಭ್ಯಾಸ ಕಲಿಸಲು ಆಚಾರ್ಯರು ಒಪ್ಪುವುದಿಲ್ಲ ಆಗ ಆತ ಪರಶುರಾಮರ ಬಳಿ ಬಂದು ತಾನು ವಿಪ್ರನೆಂದು ಸುಳ್ಳು ಹೇಳಿ ಧನೂರ್ವಿಧ್ಯೆಯನ್ನು ಪಡೆಯಲು ಬಯಸುತ್ತಾನೆ.

ಒಂದು ದಿನ ಪರಶುರಾಮರು ಕರ್ಣನ ತೊಡೆಯಮೇಲೆ ತಲೆ ಇಟ್ಟು ನಿದ್ರಿಸುತ್ತಿದ್ದಾಗ ಆಗ ಇಂದ್ರನ ಆಜ್ಞೆಯ ಮೇರೆಗೆ ಅಲರ್ಕ ಎಂಬ ದುಂಬಿಯೊಂದು ಕರ್ಣನ ತೊಡೆಯನ್ನು ಬಗೆಯಲಾರಂಭಿಸುತ್ತದೆ ಆಗ ತಾನು ಅಲುಗಾಡಿದರೆ ಗುರುವಿಗೆ ನಿದ್ರಾಭಂಗವಾಗುತ್ತದೆ ಎಂದು ಎಣಿಸಿ ಕರ್ಣ ತನಗಾದ ಅಘಾದನೋವನ್ನು ಲಕ್ಷಿಸದೆ ಹಾಗೆ ತಡೆದುಕೊಂಡಿರುತ್ತಾನೆ ಅವನ ರಕ್ತದ ಸೋಂಕಿನಿಂದ ಪರಶುರಾಮ ಎಚ್ಚೆತ್ತು ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರು ಆದರೆ ಇಂತ ಒಂದು ಕಾರ್ಯ ಸಹಿಸಿಕೊಳ್ಳಲು ವಿಪ್ರನಿಂದ ಸಾದ್ಯವಿಲ್ಲ ಅವನು ಕ್ಷತ್ರಿಯನೆ ಆಗಿರಬೇಕು ಎಂದು ಅವರಿಗೆ ಗೊತ್ತಾಗುತ್ತದೆ ಅದರಿಂದ ಕುಪಿತರಾದ ಪರಶುರಾಮರು ತಾನು ಕಲಿಸಿದ ವಿದ್ಯೆಯು ಸರಿಯಾದ ವೇಳೆಯಲ್ಲಿ ಅವನಿಗೆ ಮರೆತುಹೋಗಲಿ ಎಂದು ಶಾಪಹಾಕುತ್ತಾರೆ. ಗುರುಶಾಪದಿಂದ ಕರ್ಣ ತುಂಬಾ ದುಃಖಿತನಾಗುತ್ತಾನೆ.

ಈ ವೇಳೆಯಲ್ಲಿ ಹಸ್ತಿನಾಪುರದಲ್ಲಿ ಕೌರವರಿಗೂ ಪಾಂಡವರಿಗೂ ಗುರು ದ್ರೋಣಾಚಾರ್ಯರು ಶಶ್ತ್ರವಿದ್ಯೆಯನ್ನು ಕಲಿಸುತ್ತಿದ್ದರು. ಆ ರಾಜಪುತ್ರರ ವಿದ್ಯಾಪರಿಣಿತಿಯನ್ನು ಪ್ರದರ್ಶನಗೊಳಿಸುವಿಕೆಗಾಗಿ ಸಕಲ ಏರ್ಪಾಡುಗಳು ನಡೆಯುತ್ತಿದ್ದವು. ಅರ್ಜುನ ರಂಗಕ್ಕೆ ಪ್ರವೇಶಿಶುವುದೆ ತಡ ಆತ ಅದ್ವೀತಿಯನೆಂದು ಗುರುಗಳು ಅವನನ್ನು ಪ್ರಶಂಸಿಸಿದರು ಈ ಮಾತನ್ನು ಆಲಿಸಿದ ಕರ್ಣ ಮುಂದೆಬಂದು ಅರ್ಜುನನನ್ನು ಎದುರಿಸುವುದಾಗಿ ಸವಾಲೆಸೆಯುತ್ತಾನೆ.

ಆಗ ಅಲ್ಲಿಯೇ ಇದ್ದ ಕೃಪಾಚಾರ್ಯರು ಎದ್ದುನಿಂತು ಸೂತಪುತ್ರನಾದ ಕರ್ಣನನ್ನು ಅರ್ಜುನನ ಸರಿಸಮಾನನೆಂದು ಭಾವಿಸಲು ಸಾಧ್ಯವಿಲ್ಲವೆಂದು ವಿರೋಧಪಡಿಸುತ್ತಾರೆ. ಈ ಅಸೂಯೆ ಮಾತುಗಳನ್ನು ಕೇಳಿ ಆಗತಾನೆ ಭೀಮನಿಂದ ಪರಾಜಿತನಾದ ದುರ್ಯೋಧನನು ಮುಂದೆ ಬಂದು ಕರ್ಣನ ಪರವಾಗಿ ವಾದಿಸಿ ಅವನನ್ನು ಅಂಗ ರಾಜ್ಯದ ರಾಜನನ್ನಾಗಿ ಮಾಡಿ ಗೌರವಿಸುತ್ತಾನೆ ಈ ದುರ್ಯೋಧನ. ಆದರೆ ತನ್ನ ಪ್ರಾಣ ಸ್ನೇಹಿತನಿಗೆ ಕರ್ಣ ಮಾಡಿದ ತ್ಯಾಗ ಎಂತಹದ್ದು.

ಮಹಾಭಾರತದ ಯುದ್ಧದಲ್ಲಿ ಕರ್ಣ ಹಾಗೂ ಅರ್ಜುನರ ನಡುವೆ ನಡೆದ ಯುದ್ಧ ಹೇಗಿತ್ತು. ಯಾವ ಕಾರಣಕ್ಕಾಗಿ ಕರ್ಣ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಯಿತು ತನ್ನ ಸಾವಿನ ಅಂಚಿನಲ್ಲಿ ಕರ್ಣ ಕೃಷ್ಣನಲ್ಲಿ ಹೇಳಿಕೊಂಡ ಕೊನೆಯ ಆಸೆ ಏನು ಎಂಬುದನ್ನು ತಿಳಿದುಕೊಳ್ಳೋಣ.
ಕರ್ಣ ಸಾಯಲು ಅನೇಕ ಕಾರಣಗಳಿವೆ ಇದರಲ್ಲಿ ಒಂದು ಕಾರಣ ಕರ್ಣನು ಸೂರ್ಯನಿಂದ ಪಡೆದಂತಹ ರಕ್ಷಾ ಕವಚ. ಇದು ಕರ್ಣನ ಹತ್ತಿರ ಇರುವವರೆಗೂ ಯಾರೂ ಕೂಡ ಅವನಿಗೆ ಹಾನಿ ಮಾಡುವಂತಹ ಸಾದ್ಯತೆ ಇರಲಿಲ್ಲ.

ಆದ್ದರಿಂದ ಅರ್ಜುನ ಕರ್ಣನನ್ನು ಕೊಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಕರ್ಣನ ಪರಾಕ್ರಮ ಜನಜನಿತವಾಗಿತ್ತು ಕರ್ಣನ ದಾನದ ಗುಣಗಳು ವಿಕ್ಯಾತಿ ಆಗಿತ್ತು ಭೀಮ ದುರ್ಯೋಧನರ ಹಾಗೆ ಅರ್ಜುನ ಕರ್ಣರ ನಡುವೆ ಎಲ್ಲ ವಿಷಯದಲ್ಲಿ ಸ್ಪರ್ದೆ ನಡೆಯುತ್ತಿತ್ತು. ಅರ್ಜುನನ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಇಂದ್ರನಿಗೆ ಹೇಗಾದರೂ ಮಾಡಿ ಕರ್ಣನನ್ನು ನಿಷಕ್ತನನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡುತ್ತಾನೆ.

ಕರ್ಣನ ಉದಾರ ಗುಣಗಳನ್ನು ಅರಿತ ಆತ ಒಂದು ದಿನ ವಿಪ್ರವೇಶದಲ್ಲಿ ಬಂದು ಆತನ ಕವಚ ಕುಂಡಲಗಳನ್ನು ಬೇಡುತ್ತಾನೆ. ಈ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಿಸಿದರು ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚ ಹಾಗೂ ಕೊಂಡಲಗಳನ್ನು ಮನಪೂರ್ವಕವಾಗಿ ಇಂದ್ರನಿಗೆ ದಾನವಾಗಿ ಕೊಡುತ್ತಾನೆ .

ಮುಂದೆ ಮಹಾಭಾರತದ ಯುದ್ಧ ಪ್ರಾರಂಭವಾಗುತ್ತದೆ ಆ ಯುದ್ಧದಲ್ಲಿ ಕೃಷ್ಣನು ಪಾಂಡವರ ಪರವಾಗಿ ನಿಲ್ಲುತ್ತಾನೆ ಹಾಗೆಯೇ ಕರ್ಣನು ಕೌರವರ ಪರವಾಗಿ ನಿಲ್ಲುತ್ತಾನೆ ಈ ಘೋರವಾದ ಯುದ್ಧ ದಿನಗಟ್ಟಲೆ ನಡೆಯುತ್ತದೆ ಘಟಾನು ಘಟಿಗಳು ಅದರಲ್ಲಿ ಸಾವನ್ನಪ್ಪುತ್ತಾರೆ ಹೀಗೆ ಅದರ ಕೊನೆಯ ದಿನಗಳಲ್ಲಿ ಅರ್ಜುನ ಹಾಗೂ ಕರ್ಣರ ನಡುವೆ ಭಾರಿ ಯುದ್ಧ ನಡೆಯುತ್ತದೆ.

ಹೀಗೆ ಕರ್ಣ ತಾನು ಬಳಸಬೇಕಾದ ಯುಕ್ತಿಯನ್ನು ಆ ಯುದ್ಧದಲ್ಲಿ ಬಳಸಲು ಆಗುವುದಿಲ್ಲ ಕಾರಣ ಹಿಂದೆ ಬ್ರಾಹ್ಮಣನ ಶಾಪಕ್ಕೆ ಗುರಿಯಾಗಿದ್ದಿದ್ದರಿಂದ ಯುದ್ಧದ ಸಮಯದಲ್ಲಿ ಕರ್ಣನ ರಥದ ಚಕ್ರ ಭೂಮಿಯಲ್ಲಿ ಹೂತು ಹೋಗುತ್ತದೆ. ಅದನ್ನು ಸರಿ ಪಡಿಸಿಕೊಳ್ಳಲು ರಥದಿಂದ ಕೆಳಗಿಳಿಯಲು, ಕರ್ಣನನ್ನು ಸಂಹರಿಸಲು ಅದೇ ತಕ್ಕ ಸಮಯ ಎಂದು ಕೃಷ್ಣ ಅರ್ಜುನನನ್ನು ಪ್ರಚೋದಿಸುತ್ತಾನೆ ನಿರಾಯುಧನಾದ ಕರ್ಣನನ್ನು ಹೇಗೆ ಸಂಹರಿಸುವುದು ಎಂಬ ಕನಿಕರದಿಂದ ಅರ್ಜುನನು ಸುಮ್ಮನಿರುತ್ತಾರೆ

ಆಗ ಕೃಷ್ಣ ಕರ್ಣನ ಅಧರ್ಮ ಕಾರ್ಯಗಳನ್ನು ಪಟ್ಟಿಮಾಡಿ ಹೇಳಿ ಅರ್ಜುನನಿಗೆ ಬಲವಂತವಾಗಿ ಅವನ್ನನ್ನು ಕೊಲ್ಲಲು ಹೇಳುತ್ತಾನೆ. ನಂತರ ತಾನು ಅರಿಯದೆ ಮಾಡಿದ ತಪ್ಪಿನಿಂದಾಗಿ ಹಾಗೂ ಅವನಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಕರ್ಣನಿಗಿದ್ದ ಶಾಪಾಗಳು ಅವನಿಗೆ ಮುಳುವಾಗಿ ಕರ್ಣ ಸಾವನ್ನಪ್ಪಬೇಕಾಗುತ್ತದೆ.

ಇಷ್ಟಕ್ಕೂ ಕರ್ಣ ಸಾಯುವ ಮುನ್ನ ತನ್ನ ಕೊನೆಯ ಆಸೆಯಾಗಿ ಕೃಷ್ಣನಿಂದ ಮೂರು ವರವನ್ನು ಪಡೆಯಲು ಇಚ್ಛಿಸುತ್ತಾನೆ ಮೊದಲನೆಯದಾಗಿ ಈ ಜನುಮದಲ್ಲಿ ನಾನು ಅನೇಕ ಅವಮಾನ ಅನ್ಯಾಯ ಗಳನ್ನು ಎದುರಿಸಿದ್ದೇನೆ ಹಾಗಾಗಿ ಅಂತ ಅನ್ಯಾಯಕ್ಕೆ ಒಳಗಾಗುವ ಜನರಿಗೆ ನನ್ನಿಂದಲೇ ಸಹಾಯವಾಗಬೇಕು ಎಂಬುದು ಅವನ ಮೊದಲ ಆಸೆ ಆಗಿತ್ತು ನೊಂದವರಿಗೆ ಸಹಾಯ ಮಾಡುವ ಆ ಅವಕಾಶ ತನಗೆ ಮಾಡಿಕೊಂಡು ಎಂದು ಕೃಷ್ಣನಿಗೆ ಬೇಡಿಕೊಳ್ಳುತ್ತಾನೆ.

ನಂತರ ಎರಡನೇ ವರವಾಗಿ ಕರ್ಣನು ತನ್ನ ಮುಂದಿನ ಜನ್ಮದಲ್ಲಿ ಕೃಷ್ಣನ ರಾಜ್ಯದಲ್ಲಿ ಜನಿಸಬೇಕೆಂದು ಕೇಳಿಕೊಳ್ಳುತ್ತಾನೆ. ಇನ್ನು ಕೊನೆಯ ವರವಾಗಿ ಕರ್ಣ ತನ್ನ ಕೊನೆಯವಿಧಿಯನ್ನು ಭೂಮಂಡಲದಲ್ಲಿ ಯಾವುದೇ ಪಾಪವಿಲ್ಲದ ಸ್ಥಳದಲ್ಲಿ ನಡೆಸಬೇಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.
ಇನ್ನು ಇಡೀ ಭೂಮಂಡಲದಲ್ಲಿ ಪಾಪ ನಡೆಯದೆ ಇರುವ ಸ್ಥಳವಿರುವುದು ಕಷ್ಟ ಇದನ್ನು ಅರಿತ ಕೃಷ್ಣ ತನ್ನ ಅಂಗೈಯಲ್ಲಿ ಕರ್ಣನ ಕೊನೆಯ ವಿಧಿಯನ್ನು ಮುಗಿಸುತ್ತಾನೆ ಹೀಗೆ ಕರ್ಣನ ಕೊನೆಯ ಆಸೆಗಳು ಈಡೇರುತ್ತವೆ.

ಕರ್ಣನ ಉದಾರ ಗುಣಗಳಿಂದ ಇಂದಿಗೂ ಕರ್ಣನಿಲ್ಲದೆ ಮಹಾಭಾರತ ಇಲ್ಲ ಎನ್ನುವಷ್ಟರ ಮಟ್ಟಿಗೆ ಆತ ಜನರ ಮನಸ್ಸಿನಲ್ಲಿ ನೆಲೆಸಿದ್ದಾನೆ. ಸೂರ್ಯ ಪುತ್ರನಾದರೂ ಕರ್ಣ ನೋವಿನ ಜೀವನವನ್ನೇ ಎದುರಿಸಿದ್ದಾನೆ. ಮಹಾಭಾರತ ಯುದ್ಧವೆಲ್ಲ ಮುಗಿದ ಬಳಿಕ ಧರ್ಮರಾಜ ಸತ್ತವರಿಗೆ ಉತ್ತರಕ್ರೀಯಾದಿಗಳನ್ನ ಮಾಡುವ ಸಮಯದಲ್ಲಿ ಕುಂತಿ ಓಡಿಬಂದು ಕರ್ಣ ತನ್ನ ಮಗನೆಂದೂ ಪಾಂಡವರಿಗೆ ಅವನೇ ಹಿರಿಯನೆಂದು ಮೊದಲು ಅವನಿಗೆ ಕರ್ಮಾದಿಗಳು ನಡೆಯಬೇಕೆಂದು ತಿಳಿಸುತ್ತಾಳೆ

ಈ ವೃತ್ತಾಂತವನ್ನು ಕೇಳಿ ಚಕಿತನಾದ ಧರ್ಮರಾಜ ತಾಯಿ ಮಾಡಿದ ಅಪರಾಧಕ್ಕಾಗಿ ಅವಳ ಮೇಲೆ ಕೋಪಾಗೊಳ್ಳುತ್ತಾನೆ ಪಾಂಡವರೆಲ್ಲರು ಕರ್ಣನಿಗಾದ ದುರ್ದೆಸೆಗಾಗಿ ಮರುಗುತ್ತಾರೆ ಕರ್ಣನಿಗೆ ಕ್ಷತ್ರಿಯೋಚಿತವಾದ ಸಂಸ್ಕಾರಗಳು ಕೊನೆಯಲ್ಲಿ ನಡೆಯುತ್ತವೆ ಹೀಗೆ ಕರ್ಣನ ದುರಂತ ಕಥೆ ಕೊನೆಯಾಗುತ್ತದೆ.

Leave a Reply

Your email address will not be published. Required fields are marked *