ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬಡವರಿಗೆ ಅನುಕೂಲವಾಗಲಿಕ್ಕೆ ಪ್ರತಿ ಬಡವರಿಗೆ ತಲುಪುವ ರೀತಿಯಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿ ಮನೆಮನೆಗೂ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಅಷ್ಟೇ ಅಲ್ದೆ ಬಳಕೆದಾದರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ಕೊಡ ಹಾಕಲಾಗುತ್ತಿದೆ. ಈ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ಬಾರಿಯೂ ಬರುತ್ತಿರುತ್ತದೆ ಆದ್ರೆ ಕೆಲವರಿಗೆ ಸಬ್ಸಿಡಿ ಹಣ ಎಷ್ಟು ಬಂದಿದೆ ಹಾಗೂ ಇದನ್ನು ಹೇಗೆ ತಿಳಿದುಕೊಳ್ಳುವುದು ಅನ್ನೋದು ಅಷ್ಟರ ಮಟ್ಟಿಗೆ ತಿಳಿದಿರುವುದಿಲ್ಲ, ಹಾಗಾಗಿ ಈ ಮೂಲಕ ಮಾಹಿತಿ ತಿಳಿದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣವನ್ನು ತಿಳಿದುಕೊಳ್ಳಲು ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ, ಅದು ಹೇಗೆ ಅನ್ನೋದನ್ನ ತಿಳಿಯುವುದಾದರೆ ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಆನ್ ಮಾಡಿ ಗೂಗಲ್ ನಲ್ಲಿ ಹೋಗಿ www.mylpg.in ಎಂಬುದಾಗಿ ಟೈಪ್ ಮಾಡಿ ಸರ್ಚ್ ಕೊಡಿ ಅಲ್ಲಿ ಕೆಲವೊಂದು ಗ್ಯಾಸ್ ಕಂಪನಿಗಳ ಹೆಸರು ತೋರಿಸುತ್ತವೆ ಅವುಗಳಲ್ಲಿ ನಿಮ್ಮ ಗ್ಯಾಸ್ ಕಂಪನಿ ಯಾವುದು ಅನ್ನೋದನ್ನ ನೋಡಿ ಓಕೆ ಮಾಡಿ.
ಅಲ್ಲಿ ನಿಮ್ಮ ಎಲ್ಪಿಜಿ ಐಡಿ ಹಾಕಿ ನಂತರ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಸಿಗುತ್ತದೆ ಮತ್ತು ನಿಮಗೆ ಯಾವ ವರ್ಷದ ಮಾಹಿತಿ ಬೇಕೋ ಆ ವರ್ಷವನ್ನು ಎಂಟ್ರಿ ಮಾಡಿ ಉದಾಹರಣೆಗೆ 2019 ಎಂದು ಎಂಟ್ರಿ ಮಾಡಿದರೆ ನಿಮ್ಮ ಖಾತೆಯಲ್ಲಿ ಜಮವಾಗಿರುವ ಹಣದ ಮೊತ್ತ ತೋರಿಸುತ್ತದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಹಣ ಜಮಾ ಆಗದೆ ಇದ್ದಲ್ಲಿ ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಅಥವಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 180023 33555 ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.