ಮನುಷ್ಯನಿಗೆ ರಕ್ತದ ಒತ್ತಡದ ಸಮಸ್ಯೆ ಇಂದು ನಿನ್ನೆಯದಲ್ಲ. ಕೆಲವರಿಗೆ ಅಧಿಕ ರಕ್ತದ ಒತ್ತಡದ ಸಮಸ್ಯೆ ಇದ್ದರೆ ಇನ್ನು ಕೆಲವರಿಗೆ ಅವರ ದೇಹದಲ್ಲಿ ರಕ್ತದ ಒತ್ತಡ ಕೆಳಹದಿಗೆ ಬಂದು ನಿಂತಿರುತ್ತದೆ. ರಕ್ತದ ಒತ್ತಡ ಕಡಿಮೆ ಆದರೆ ದೇಹದ ಮುಖ್ಯ ಅಂಗಗಳಿಗೆ ಸಂಬಂಧಪಟ್ಟ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ 40 ವರ್ಷ ದಾಟುತ್ತಿದ್ದಂತೆ ಪ್ರತಿಯೊಬ್ಬರಿಗೂ ರಕ್ತದ ಒತ್ತಡದ ಸಮಸ್ಯೆ ಪ್ರಾರಂಭವಾಗುತ್ತದೆ. ತಮ್ಮ ಬದಲಾದ ಜೀವನ ಶೈಲಿ ಅಥವಾ ಆಹಾರ ಪದ್ಧತಿಯಿಂದ ಹಲವಾರು ದೀರ್ಘ ಕಾಲ ಕಾಡುವ ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಳ್ಳುತ್ತವೆ. ಆದ್ದರಿಂದ ನಾವು ಇಲ್ಲಿ ಅದರ ಮನೆಮದ್ದುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಧುಮೇಹ ರಕ್ತದ ಒತ್ತಡ ಹೃದಯ ಸಂಬಂಧಿ ಸಮಸ್ಯೆಗಳು ಹೀಗೆ ಒಂದಕ್ಕೊಂದು ಸಂಬಂಧ ಇರುವ ಕಾಯಿಲೆಗಳು ಮನುಷ್ಯನ ದೇಹಕ್ಕೆ ಹತ್ತಿರವಾಗುತ್ತವೆ. ರಕ್ತದ ಒತ್ತಡದ ವಿಷಯಕ್ಕೆ ಬಂದರೆ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಜನರಂತೆ ಕಡಿಮೆ ರಕ್ತದ ಒತ್ತಡದ ಜನರೂ ಸಹ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಸಮಸ್ಯೆಯನ್ನು ನಿರ್ಲಕ್ಷ ಮಾಡುವುದು ಒಳ್ಳೆಯದಲ್ಲ. ಇದಕ್ಕೆ ಸರಿಯಾದ ಮನೆಮದ್ದಿನ ಮೂಲಕ ಲೋ ಬಿಪಿ ಯನ್ನು ಕಡಿಮೆ ಮಾಡಿಕೊಳ್ಳಬಹುದು. ಹೆಣ್ಣುಮಕ್ಕಳಿಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಲೋ ಬಿಪಿ ಸಮಸ್ಯೆ ಕಾಡುತ್ತದೆ.

ಹಾಗಾಗಿ ಇಂತಹ ಸಂದರ್ಭದಲ್ಲಿ ಬಿಪಿಯನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಅವಶ್ಯಕವಾಗಿರುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತಿದ್ದರೂ ಸಹ ಅಂತವರಿಗೆ ಲೋಬಿಪಿ  ಸಮಸ್ಯೆ ಕಾಡುತ್ತದೆ. ಇಂತಹವರು ಕೂಡ ಅತ್ಯಂತ ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ. ಜೊತೆಗೆ ವೈದ್ಯರ ಸಲಹೆಯ ಮೇರೆಗೆ ನಡೆಯಬೇಕಾಗುತ್ತದೆ. ನಿರ್ಜಲೀಕರಣವೂ ಕೂಡ ಒಂದು ಲೋಬಿಪಿಗೆ ಮುಖ್ಯ ಕಾರಣವಾಗಿದೆ. ಅತ್ಯಂತ ಕಡಿಮೆ ನೀರು ಸೇವಿಸುವುದು ನಿರ್ಜಲೀಕರಣಕ್ಕೆ ಒಂದು ಮುಖ್ಯ ಕಾರಣವಾಗಿದೆ. ಇದರಿಂದ ಲೋ ಬಿಪಿ ಉಂಟಾಗುತ್ತದೆ.

ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸುವುದರಿಂದ ನಿರ್ಜಲೀಕರಣವನ್ನು ತಡೆಯಬಹುದಾಗಿದೆ. ತುಳಸಿ ಎಲೆಯಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ ಜೊತೆಗೆ ವಿಟಮಿನ್ ಸಿ ಇರುತ್ತದೆ. ಇದರಿಂದ ರಕ್ತದೊತ್ತಡವನ್ನು ಸಾಮಾನ್ಯ ರೂಪಕ್ಕೆ ತರುತ್ತದೆ. ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಜೇನುತುಪ್ಪದಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಉಪ್ಪು ನೀರು ಕುಡಿಯುವುದರಿಂದಲೂ ಸಹ ಲೋಬಿಪಿಯನ್ನು ತಡೆಗಟ್ಟಬಹುದಾಗಿದೆ. ಉಪ್ಪಿನಲ್ಲಿರುವ ಸೋಡಿಯಂ ಅಂಶ ರಕ್ತದೊತ್ತಡವನ್ನು ಜಾಸ್ತಿ ಮಾಡುತ್ತದೆ. ನಿಂಬು ಜ್ಯೂಸ್ ಕುಡಿಯುವುದರಿಂದಲೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆ.

ಪ್ರತಿನಿತ್ಯವೂ ಒಂದು ಲೋಟ ತರಕಾರಿ ಜ್ಯೂಸ್ ಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣ ಮಾಡಬಹುದು. ಜೊತೆಗೆ ಪ್ರತಿನಿತ್ಯ ಸ್ಟ್ರಾಂಗ್ ಬ್ಲಾಕ್ ಕಾಫಿ ಕುಡಿಯುವುದರಿಂದಲೂ ರಕ್ತದೊತ್ತಡ ಸಮಸ್ಯೆಗಳು ನಿವಾರಣೆಯಾಗಲು ಸಹಕಾರಿಯಾಗುತ್ತದೆ. ಬಾದಾಮಿಯನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಬಿಸಿ ನೀರಿನಲ್ಲಿ ಹಾಕಿ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣಗೊಳಿಸಬಹುದಾಗಿದೆ. ಇದರ ಜೊತೆಗೆ ಪ್ರತಿನಿತ್ಯವೂ ಸರಳ ಕೆಲವೊಂದು ವ್ಯಾಯಾಮಗಳನ್ನು ಮಾಡುವುದರಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಹುದಾಗಿದೆ. ಹೀಗೆ ಮಾಡಿ ಮನೆಯಲ್ಲಿಯೇ ರಕ್ತದೊತ್ತಡದ  ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!