ಮಧ್ಯಮ ಹಾಗೂ ಮಾಧ್ಯಮ ವರ್ಗ ಕಿಂತ ಕೆಳ ವರ್ಗದಲ್ಲಿರುವವರು ಹೆಚ್ಚಾಗಿ ಯಾವ ವಸ್ತುವನ್ನು ಖರೀದಿಸುತ್ತಾರೋ ಅವುಗಳು ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯ ಎಂಬುದಾಗಿ ಹೇಳುತ್ತಾರೆ. ಇನ್ನು ಇಂತಹ ವರ್ಗದ ಜನರು ಹೆಚ್ಚಾಗಿ ಕಡಿಮೆ ಬೆಲೆಯ ಕಾರನ್ನೇ ಖರೀದಿಸಲು ಯೋಚಿಸುತ್ತಾರೆ. ಹಾಗಿದ್ದರೆ ಕೈಗೆಟಿಕುವ ಬೆಲೆಯಲ್ಲಿ ಒಳ್ಳೆಯ ಕಾರುಗಳನ್ನು ಯೋಚಿಸುವ ಮಧ್ಯಮ ವರ್ಗದ ಕುಟುಂಬದವರಿಗೆ ಸೂಕ್ತವಾದ ಕಾರುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಮಾರುತಿ ಸುಜುಕಿ ಆಲ್ಟೋ; 0.8 ಲೀಟರ್ ನ ಮೂರು ಸಿಲಿಂಡರ್ ಹಾಗೂ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಒಂದು ಲೀಟರ್ ಗೆ 33 ಕಿಲೋಮೀಟರ್ ಮೈಲೇಜ್ ಅನ್ನು ಇದು ನೀಡುತ್ತದೆ. 7 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಇದೆ. ಫ್ರಂಟ್ ಪವರ್ ವಿಂಡೋಸ್ ಕೀಲೇಸ್ ಎಂಟ್ರಿ ಸೈಡ್ ಏರ್ ಬ್ಯಾಗ್ ಗಳು ಸೇರಿದಂತಹ ಹಲವಾರು ವಿಶೇಷ ಫೀಚರ್ ಗಳು ಕೂಡ ಈ ಕಾರಿನಲ್ಲಿವೆ. ಇದರ ಬೆಲೆ ಕೇವಲ 3.39 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ಮಾರುತಿ ಎಸ್ಪ್ರೆಸ್ಸೋ; ಎಂಜಿನ್ ವಿಚಾರಕ್ಕೆ ಬಂದರೆ 998 ಸಿಸಿ ಎಂಜಿನ್ ಪವರ್ ಇದೆ. ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಲಾಂಗ್ ಬ್ರೇಕಿಂಗ್ ವ್ಯವಸ್ಥೆ ಎದುರುಗಡೆ ಡಬಲ್ ಏರ್ ಬ್ಯಾಗ್ ಗಳು ಪವರ್ ಸ್ಟೇರಿಂಗ್ ಹಾಗೂ ಎಸಿ ಸೇರಿದಂತೆ ಹಲವಾರು ವಿಶೇಷತೆಗಳು ಈ ಕಾರಿನಲ್ಲಿದ್ದು ಈ ಕಾರಿನ ಬೆಲೆ ಕೇವಲ 4.25 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ಮಾರುತಿ ಸೆಲೆರಿಯೊ; ಸ್ಮಾರ್ಟ್ ಸ್ಟಾಪ್ ವ್ಯವಸ್ಥೆ ಈ ಕಾರಿನಲ್ಲಿದೆ. ಎ ಎಮ್ ಟಿ ರೂಪಾಂತರ ಗೇರ್ ಬಾಕ್ಸ್ ಇದರಲ್ಲಿದೆ. ಇದರಲ್ಲಿ ಸೇಫ್ಟಿ ಸ್ಪೆಷಲಿಸ್ಟ್ ಉಪಕರಣಗಳು ವಿಶೇಷವಾಗಿದೆ ಎಂದು ಹೇಳಬಹುದಾಗಿದೆ. ಡಬಲ್ ಏರ್ ಬ್ಯಾಗ್ ಸೇರಿದಂತೆ ಇನ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಮುಂತಾದ ವಿಶೇಷ ಫೀಚರ್ ಗಳು ಈ ಕಾರಿನಲ್ಲಿವೆ. ಇನ್ನು ಈ ಕಾರಿನ ಬೆಲೆ ಕೇವಲ 5.25 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ಟಾಟಾ ಟಿಯಾಗೋ; ಈ ಕಾರು 5 ಸ್ಪೀಡ್ ಮಾನ್ಯುಯಲ್ ಗೇರ್ ಗಳನ್ನು ಹೊಂದಿದೆ. 10 ವಿಭಿನ್ನ ಡಿಸೈನ್ ಗಳಲ್ಲಿ ಈ ಕಾರು ನಿಮಗೆ ಲಭ್ಯವಾಗಲಿದೆ. ಆಂಡ್ರಾಯ್ಡ್ ಆಟೋ ಆಪಲ್ ಕಾರ್ ಪ್ಲೇ ಆಟೋಮೆಟಿಕ್ ವೆದರ್ ಕಂಡೀಶನರ್ ನಂತಹ ಹಲವಾರು ವಿಶೇಷ ಹಾಗೂ ವಿಭಿನ್ನ ಫೀಚರ್ಗಳು ಕೂಡ ಈ ಕಾರಿನಲ್ಲಿ ಅಡಕವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಕಾರಿನ ಬೆಲೆ 5.44 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಲಿದೆ. ಇವುಗಳೇ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾಧ್ಯಮ ವರ್ಗದ ಗ್ರಾಹಕರು ಖರೀದಿಸಬಹುದಾದ ಕಾರುಗಳಾಗಿವೆ.