ಬೈಕ್ ಕ್ರೇಜ್ ಇತ್ತೀಚಿಗೆ ಎಲ್ಲರಲ್ಲೂ ಜಾಸ್ತಿ ಆಗಿದೆ. ಹಲವಾರು ರೀತಿಯ ಹಲವಾರು ಕಂಪನಿಯ ಬೈಕುಗಳು ಇವೆ. ಇವತ್ತಿನ ಈ ಲೇಖನದಲ್ಲಿ ಹೀರೋ ಸ್ಪ್ಲೇಂಡರ್ ಬೈಕಿನ ಬಗ್ಗೆ ಇದರ ಆನ್ ರೋಡ್ ಬೆಲೆ, ಪ್ರತೀ ತಿಂಗಳಿನ ಇನ್ಸ್ಟಾಲ್ ಮೆಂಟ್ ಎಷ್ಟು ಬರತ್ತೆ, RTO ಚಾರ್ಜ್, ಎಲ್ಲದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಹೀರೋ ಸ್ಪ್ಲೇಂಡರ್ ಬೈಕಿನಲ್ಲಿ ಹಲವಾರು ಬಣ್ಣಗಳು ಇರುತ್ತವೆ. ಹಾಗೂ ನೋಡಲೂ ಸಹಾ ಅತ್ಯಾಕರ್ಷಕವಾಗಿಯೂ ಇರುತ್ತವೆ. ಭಾರತದಲ್ಲಿ ಹೆಚ್ಚಾಗಿ ಮಾರಾಟ ಆಗುವ ಬೈಕ್ ಗಳಲ್ಲಿ ಹೀರೋ ಸ್ಪ್ಲೇಂಡರ್ ಬೈಕ್ ಟಾಪ್ 10 ರಲ್ಲಿದೆ. ಇದರ ಇಂಜಿನ್ ನ ಕೆಪಾಸಿಟಿ ಬಗ್ಗೆ ನೋಡುವುದಾದರೆ, 97.2 CC ಐಂಗಲ್ ಸಿಲಿಂಡರ್ ಪೋಸ್ಟ್ರೋಕ್ 2HC ಇಂಜಿನ್ ಅನ್ನು ಹೊಂದಿದೆ. 8ಸಾವಿರ RPM ಒಂದಿಗೆ 8.36BHP, 5 ಸಾವಿರ RPM ಒಂದಿಗೆ 8.5 NMR ಜನರೇಟ್ ಮಾಡತ್ತೆ. ಇನ್ನು ಫುಲ್ ಟ್ಯಾಂಕ್ ಕೆಪಾಸಿಟಿ ನೋಡುವುದಾದರೆ, 10.5 ಲೀಟರ್, ರಿಸರ್ವ್ ಫುಲ್ ಟ್ಯಾಂಕ್ ಕೆಪಾಸಿಟಿ ನೋಡುವುದಾದರೆ, 1 ಲೀಟರ್. ಇನ್ನು ಮೈಲೇಜ್ ನೋಡುವುದಾದರೆ, ಪ್ರತೀ ಲೀಟರ್ ಗೆ 80km ನೀಡುತ್ತದೆ.
ಟಾಪ್ ಸ್ಪೀಡ್ ನೋಡುವುದಾದರೆ, 90km , 0-60 ಸ್ಪೀಡ್ ತಲುಪುತ್ತದೆ 12.2 ಸೆಕೆಂಡ್ ನಲ್ಲಿ. ಗ್ರೌಂಡ್ ಕ್ಲಿಯರ್ ಮಾಡಲು 159mm. ಇನ್ನು ಇದರ ತೂಕ 113 ಕೆಜಿ ಇರತ್ತೆ. ಇದರ ಲೋಡ್ ಕೆಪಾಸಿಟಿ 139 ಕೆಜಿ. ಇದರ ಬೆಲೆ ನೋಡುವುದಾದರೆ ಮೂರು ಸ್ಟೆಪ್ ನಲ್ಲಿ ಲಭ್ಯವಿರುತ್ತದೆ. ಮೊದಲಿಗೆ ಸ್ಪ್ಲೇಂಡರ್ ಪ್ಲಸ್ ಕಿಕ್ ಅಲೈವಿಲ್ಸ್ ಇದರ ಬೆಲೆ – ₹ 49,990
ಎರಡನೆಯದು ಸ್ಪ್ಲೇಂಡರ್ ಪ್ಲಸ್ ಸೆಲ್ಫ್ ಸ್ಟಾರ್ಟರ್ ಅಲೈವಿಲ್ಸ್ ಇದರ ಬೆಲೆ – ₹ 54,800. ಇನ್ನು ಮೂರನೆಯದು ಹಾಗೂ ಟಾಪ್ ಸ್ಥಾನದಲ್ಲಿರುವ ಬೈಕ್ ನೋಡುವುದಾದರೆ, ಸ್ಪ್ಲೇಂಡರ್ ಪ್ಲಸ್ IVS ಹಾಗೂ I3S ಟೆಕ್ನಾಲಜಿಯನ್ನು ಹೊಂದಿರುವ ಈ ಬೈಕಿನ ಬೆಲೆ – ₹ 56,200. RTO ಚಾರ್ಜ್ 6744 ರೂಪಾಯಿ. ಇನ್ಸುರೆಸ್ನ್ 5507 ರೂಪಾಯಿ, ಹಾಗೂ ಒಟ್ಟಾರೆಯಾಗಿ ಆನ್ ರೋಡ್ ಪ್ರೈಸ್ ನೋಡುವುದಾದರೆ, 68,451 ರೂಪಾಯಿ. ತಿಂಗಳ ಇನ್ಸ್ಟಾಲ್ಮೆಂಟ ನಲ್ಲಿ ಖರೀದಿ ಮಾಡುವವರು 35,451 ರೂಪಾಯಿ ಡೌನ್ ಪೇಮೆಂಟ್ ಇರತ್ತೆ. ತಿಂಗಳಿಗೆ ಒಟ್ಟಾರೆಯಾಗಿ ಒಂದೂವರೆ ವರ್ಷಕ್ಕೆ 2,200 ರೂಪಾಯಿ ತುಂಬಬೇಕಾಗುತ್ತದೆ. ಒಂದು ವರ್ಷಕ್ಕೆ ನೋದುವುದಾದರೆ, 3135 ರೂಪಾಯಿ. ಎರಡು ವರ್ಷಕ್ಕೆ EMI ನೋಡುವುದಾದರೆ, 1732 ರೂಪಾಯಿ ಆಗುತ್ತದೆ.