ಬ್ರಹ್ಮದೇವನ ಬಗ್ಗೆಎಲ್ಲರಿಗೂ ಗೊತ್ತು ಅವನು ಚತುರ್ಮುಖ ಅಂದರೆ ನಾಲ್ಕು ಮುಖಗಳನ್ನು ಹೊಂದಿದ್ದಾನೆ. ಈ ಬ್ರಹ್ಮ ದೇವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. ಸರಸ್ವತಿ ಸ್ರಷ್ಟಿಕರ್ತ ಬ್ರಹ್ಮ ಹಾಗೆಯೇ ಪತಿಯೂ ಬ್ರಹ್ಮ, ಬ್ರಹ್ಮನ ಹೆಂಡತಿ ಸರಸ್ವತಿ ಎನ್ನುತ್ತಾರೆ. ಆದರೆ ಅದೇಸರಸ್ವತಿ ಬ್ರಹ್ಮನ ಪುತ್ರಿ ಕೂಡ ಹೌದು. ಈ ಬಗ್ಗೆ ಮತ್ಸ್ಯಪುರಾಣ ಮತ್ತು ಸರಸ್ವತಿ ಪುರಾಣದಲ್ಲಿ ಉಲ್ಲೇಖ ಇದೆ. ಈ ಭೂಮಿಯನ್ನು ಸ್ರಷ್ಟಿಸಿದ್ದು ಬ್ರಹ್ಮ.ಅವನ ಜೊತೆಗೆ ಯಾರೂ ಇರಲಿಲ್ಲ ಇದರಿಂದ ಬ್ರಹ್ಮನ ಪುತ್ರಿ ಸರಸ್ವತಿ ಎಂದು ಕರೆಯಲಾಯಿತು.
ಸರಸ್ವತಿ ಸೌಂದರ್ಯಕ್ಕೆ ಮಾರುಹೋದ ಬ್ರಹ್ಮ:-ಬ್ರಹ್ಮ ತಾನೇ ಸ್ರಷ್ಟಿಸಿದ ಸರಸ್ವತಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಅಲ್ಲದೆ ಸರಸ್ವತಿಯ ಮದುವೆ ಆಗಬೇಕು ಎಂದು ಅಂದು ಕೊಂಡಾಗ ಸರಸ್ವತಿ ನಾಲ್ಕು ದಿಕ್ಕುಗಳಲ್ಲಿ ಓಡಿ ಹೋದರೂ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ವಿವಾಹವಾಗುತ್ತಾಳೆ. ನಂತರ ಭೂಮಿಗೆ ಬಂದು ಅರಣ್ಯದಲ್ಲಿ ಮೂರು ವರ್ಷಗಳ ಕಾಲವಾಸ ಮಾಡಿದಾಗ ಒಂದು ಮಗುವಾಗುತ್ತದೆ. ಅದೇ ಮನು ಭೂಮಿಗೆ ಮೊದಲು ಕಾಲಿಟ್ಟ ಮನುಷ್ಯ ಮನು.
ಪುತ್ರಿಯನ್ನೇ ಮೋಹಿಸಿದ ಒಂದು ತಲೆ ತೆಗೆದ ಶಿವ:- ಬ್ರಹ್ಮ ತನ್ನದೇ ಮಗಳನ್ನು ಮದುವೆ ಆಗಿ ಸಂಸಾರ ಮಾಡಿದ್ದನ್ನು ಕಂಡು ಉಳಿದ ದೇವತೆಗಳು ತುಂಬಾ ಸಿಟ್ಟು ಪಡುತ್ತಾರೆ. ಆಗ ದೇವತೆಗಳು ಶಿವನ ಬಳಿ ಹೋಗಿ “ಬ್ರಹ್ಮ ದೇವ ಮಾಡಿದ್ದು ಸರಿಯಲ್ಲ ಅವನ ತಪ್ಪಿಗೆ ಸರಿಯಾದ ಶಿಕ್ಷೆ ನೀಡಬೇಕು” ಅಂತ ಪಟ್ಟು ಹಿಡಿಯುತ್ತಾರೆ. ಆಗ ಶಿವ ಬ್ರಹ್ಮದೇವನಿಗೆ ಶಿಕ್ಷೆ ಕೊಡಲು ಮುಂದಾಗುತ್ತಾನೆ.
ಸರಸ್ವತಿ ಬ್ರಹ್ಮನಿಂದ ತಪ್ಪಿಸಿಕೊಂಡು ಕುಳಿತಾಗ ಬ್ರಹ್ಮನ 5ನೇ ತಲೆ ಆಕೆಯನ್ನು ಪತ್ತೆ ಹಚ್ಚಿತ್ತು. ಹೀಗಾಗಿ ಶಿವ ಬ್ರಹ್ಮನ 5ನೇ ತಲೆಯನ್ನು ಕತ್ತರಿಸುತ್ತಾನೆ. ಬ್ರಹ್ಮನ 5ನೇ ತಲೆಯು ಕೆಟ್ಟದ್ದನ್ನು ಮಾತಾಡುತ್ತಿತ್ತು ಮತ್ತು ಕೆಟ್ಟದ್ದನ್ನು ಯೋಚಿಸುತ್ತಿತ್ತು ಎಂದು ನಂಬಲಾಗಿದೆ.