ಇತ್ತೀಚಿನ ದಿನಗಳಲ್ಲಿ ಕೂದಲಿನ ಆರೈಕೆ ಮಾಡುವುದು ಹೇಗೆ ಎಂಬುದೇ ಹೆಚ್ಚಿನವರ ಚಿಂತೆಯಾಗಿದೆ.ದಟ್ಟವಾದ ಕೂದಲು ಹೊಂದಿದ್ದರೆ ಮುಖದ ಅಂದ ಹೆಚ್ಚುತ್ತದೆ.ಸೌಂದರ್ಯ ಎಂಬುದು ಕೇವಲ ಬಣ್ಣ ಅಲ್ಲ ಚರ್ಮ ಅಲ್ಲ ಮೈಕಟ್ಟಲ್ಲ ಕೂದಲು ಸಹ ನಿಮ್ಮ ಸೌಂದರ್ಯದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೊ ನೋಡಿ
ನಿಮಗೆ ಉದ್ದವಾದ ಮತ್ತು ದಟ್ಟವಾದ ಕೂದಲು ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಟಿವಿ ಮಾಧ್ಯಮಗಳಲ್ಲಿ ತೋರಿಸುವ ಜಾಹೀರಾತುಗಳು ಅವುಗಳು ರೇಷ್ಮೆಯ ಕೂದಲುಗಳು ಎಂದು ಹೇಳುತ್ತವೆ ಆದರೆ ರೇಷ್ಮೆಯ ಕೂದಲು ಆರೋಗ್ಯಕರವಾದ ಕುದಲುಗಳಲ್ಲ. ಕಪ್ಪಾಗಿ ಹೊಳಪುಯುಕ್ತವಾಗಿ ಜಿಡ್ಡು ಮುಕ್ತವಾಗಿ ಸ್ನಿಗ್ಧವಾಗಿ ಇರುವಂತಹ ಕೂದಲು ಆರೋಗ್ಯಕರವಾದ ಕೂದಲು.ಸಾಮಾನ್ಯವಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ದಟ್ಟವಾದ ಕೂದಲನ್ನು ಬೆಳೆಸಲು ಮನೇಮದ್ದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಸ್ನೇಹಿತರೆ ಒಂದು ಮುಷ್ಟಿ ದಾಸವಾಳದ ಎಲೆಗಳನ್ನು ಒಂದು ಮುಷ್ಟಿ ನೆಲ್ಲಿಕಾಯಿ ಪುಡಿಯನ್ನು ಒಂದು ಮುಷ್ಟಿ ಆಗುವಷ್ಟು ಬ್ರಾಹ್ಮಿ ಚೂರ್ಣವನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ ಆ ಪೇಷ್ಟನ್ನು ತಲೆಗೆ ಹಚ್ಚಿಕೊಂಡು ಅರ್ಧ ತಾಸು ಇಲ್ಲವೇ ಒಂದು ತಾಸು ಇಟ್ಟುಕೊಳ್ಳಿ ನಂತರ ಶಿಗೇಕಾಯಿ ಪುಡಿ ಅಥವಾ ಶಿಗೆಕಾಯಿ ಸೋಪಿನಿಂದ ಅಥವಾ ಅಂಟವಾಳ ಕಾಯಿಯನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ
ಆ ನೀರಿನಲ್ಲಿ ತಲೆಯನ್ನು ತೊಳೆದುಕೊಳ್ಳಿ ತಲೆಸ್ನಾನ ಮಾಡಿದ ನಂತರ ಸಂಪೂರ್ಣವಾಗಿ ಕೂದಲು ಒಣಗಿದ ನಂತರ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಈ ರೀತಿ ಒಂದು ದಿನ ಎರಡು ದಿನ ಮಾಡುವುದಲ್ಲ ಜೀವನ ಪರ್ಯಂತ ಮಾಡಿ ಹೀಗೆ ಮಾಡಿದ್ದೆ ಆದಲ್ಲಿ ಗಾಢವಾದ ಗಟ್ಟಿಮುಟ್ಟಾದ ಸ್ನಿಗ್ಧವಾಗಿ ಆರೋಗ್ಯಕರವಾದ ಕೂದಲನ್ನು ನೀವು ಪಡೆಯಬಹುದು.
ಕೂದಲು ಬುಡದಿಂದ ಬೆಳೆಯಲು ಕೊಲಾಜೆನ್ ಎಂಬ ಪೋಷಕಾಂಶ ಅಗತ್ಯ. ಕೊಲಾಜೆನ್ ಪೋಷಕಾಂಶವನ್ನು ಹೆಚ್ಚಾಗಿ ಪಡೆಯಲು ಗಂಧಕ ಹೆಚ್ಚಿರುವ ಪ್ರಸಾಧನಗಳು ಬೇಕು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಗಂಧಕ ಅಂಶ ನೈಸರ್ಗಿಕವಾಗಿ ಹೆಚ್ಚಿದ್ದು ಕೂದಲು ಪೋಷಣೆಗೆ ಸಹಕರಿಸುತ್ತದೆ. ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಬಟ್ಟೆಯಲ್ಲಿ ಹಿಂಡಿ ರಸ ತೆಗೆದುಕೊಳ್ಳಬೇಕು. ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಕೆಂಪಾಗುವವರೆಗೆ ಕುದಿಸಬೇಕು.
ಈ ಎಣ್ಣೆ ತಣ್ಣಗಾಗಲು ಬಿಡಿ ಸ್ನಾನಕ್ಕೂ ಒಂದು ಅಥವಾ ಒಂದೂವರೆ ಗಂಟೆ ಮೊದಲು ಈರುಳ್ಳಿ ರಸವನ್ನು ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ ನಂತರ ಶುದ್ಧವಾದ ನೀರಿನಿಂದ ತಲೆಯನ್ನು ತೊಳೆದುಕೊಳ್ಳಿ ಕೂದಲು ಚೆನ್ನಾಗಿ ವರೆಸಿಕೊಂಡು ಬೆಳ್ಳುಳ್ಳಿ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಿ ಒಂದು ತಾಸು ಬಿಟ್ಟು ಮತ್ತೆ ತಲೆ ತೊಳೆದುಕೊಳ್ಳಿ. ವಾರಕ್ಕೆ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಸುಮ್ಮನೆ ಯಾವುದೋ ಸೋಪು ಶಾಂಪೂ ಜೆಲ್ ಹಚ್ಚುವುದರಿಂದ ಆರೋಗ್ಯಕರವಾದ ಕೂದಲು ನಿಮ್ಮದಾಗುವುದಿಲ್ಲ. ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಲು ಮನೆಯಲ್ಲಿ ಸಿಗುವ ವಸ್ತುಗಳನ್ನು ತೆಗೆದುಕೊಂಡು ನೈಸರ್ಗಿಕವಾದ ಮನೆಮದ್ದನ್ನು ತಯಾರಿಸಿ ಬಳಸುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತವೆ. ಮನೆಮದ್ದುಗಳನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.