ಮಕ್ಕಳು ಫೇಲಾದರೆ ಮಾನಸಿಕವಾಗಿ ಮನನೊಂದು ಆತ್ಮಹ ತ್ಯೆಗೆ ಶರಣಾಗುತ್ತಾರೆ ಆದರೆ ಜೀವನದಲ್ಲಿ ಮುಂದೆ ಬರಬೇಕೆಂಬ ಛಲವೊಂದಿದ್ದರೆ ಸಾಧಿಸಲು ಹಲವು ದಾರಿಗಳಿವೆ. ಆರನೇ ಕ್ಲಾಸಿನಲ್ಲಿ ಫೇಲಾದ ಹುಡುಗ ಇಂದು 2,000 ಕೋಟಿ ವ್ಯವಹಾರದ ಒಡೆಯನಾಗಿದ್ದಾನೆ. ಹಾಗಾದರೆ ಆತ ಯಾರು, ಆತ ಪ್ರಾರಂಭಿಸಿದ ಬಿಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಜಗತ್ತು ಹಿಂದೆಗಿಂತಲೂ ಬದಲಾಗಿದೆ ಆದರೆ ಸಮಯ ಬದಲಾಗಲಿಲ್ಲ. ಸಮಯ ಓಡುತ್ತಿದ್ದಂತೆ ಮನುಷ್ಯ ತನ್ನ ಜೀವನದ ಕನಸುಗಳನ್ನು ಬೆನ್ನಟ್ಟುಕೊಂಡು ಓಡುತ್ತಿದ್ದಾರೆ. ಪಿಸಿ ಮುಸ್ತಫಾ ಇವರು ಕೇರಳದಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದರು. ಮುಸ್ತಫಾ ಅವರು ಮೂರು ಜನ ಮಕ್ಕಳಲ್ಲಿ ಹಿರಿಯವನು, ಅವರ ತಂದೆ ಕುಟುಂಬವನ್ನು ನಡೆಸಲು ಕೂಲಿ ಕೆಲಸ ಮಾಡುತ್ತಿದ್ದರು.
ಕೂಲಿಯಿಂದ ಬಂದ ಹಣದಲ್ಲಿ ಜೀವನ ನಡೆಸುವುದು ಕಷ್ಟವಾಗಿತ್ತು, ಮಕ್ಕಳಿಗೆ ಕಲಿಸುವುದು ಇನ್ನೂ ಕಷ್ಟವಾಗಿತ್ತು. ಅವರು ಶಾಲೆಗೆ ಹೋಗಬೇಕೆಂದರೆ ಮೈಲುಗಟ್ಟಲೆ ನಡೆದು ಹೋಗಬೇಕಿತ್ತು ಆದರೂ ಮುಸ್ತಫಾ ಅವರು ಶಾಲೆಗೆ ಹೋಗುತ್ತಿದ್ದರು ಅದಕ್ಕೆ ಮುಖ್ಯವಾದ ಕಾರಣವೆಂದರೆ ಮನೆಯಲ್ಲಿ ಒಂದು ಹೊತ್ತಿನ ಊಟ ಸಿಗುತ್ತಿರಲಿಲ್ಲ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿತ್ತು.
ಮುಸ್ತಫಾ ಕೂಡ ತಂದೆಯ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕೂಲಿಕೆಲಸ ಮಾಡುತ್ತಾ ಶಾಲೆಗೆ ಹೋಗುತ್ತಿರುವ ಮುಸ್ತಫಾ ಅವರಿಗೆ ವಿದ್ಯೆ ತಲೆಗೆ ಹತ್ತಲಿಲ್ಲ ಆರನೇ ಕ್ಲಾಸ್ ನಲ್ಲಿ ಫೇಲ್ ಆಗುತ್ತಾರೆ. ಆಗ ಮುಸ್ತಫಾ ಅವರ ಮುಂದೆ ಯಾವ ಆಯ್ಕೆಯೂ ಇರಲಿಲ್ಲ ಆದರೆ ಅವರಿಗೆ ಏನಾದರೂ ಸಾಧಿಸಬೇಕೆಂಬ ಅಚಲವಾದ ಛಲ ಇತ್ತು. ಅಪ್ಪ ಹೋಗುತ್ತಿದ್ದ ಜಮೀನಿನಲ್ಲೆ ಮುಸ್ತಫಾ ಅವರು ಕೂಡ ಕೆಲಸಕ್ಕೆ ಹೋಗುತ್ತಾರೆ.
ಶಾಲೆಯ ಶಿಕ್ಷಕರೊಬ್ಬರು ಒಮ್ಮೆ ಫೇಲಾದರೆ ಏನಂತೆ ಇನ್ನೊಮ್ಮೆ ಬರೆದು ಪಾಸಾಗುವಂತೆ ಒತ್ತಾಯ ಮಾಡುತ್ತಾರೆ. ಶಿಕ್ಷಕರು ಮುಸ್ತಫಾ ಅವರಿಗೆ ಸಂಜೆ ಟ್ಯೂಷನ್ ಕೊಡುತ್ತಾರೆ ನಂತರ ಪರೀಕ್ಷೆ ಬರೆದು ಪಾಸಾಗುತ್ತಾನೆ. ನಂತರದ ಪರೀಕ್ಷೆಗಳಲ್ಲಿ ಫಸ್ಟ್ ಬರುತ್ತಾನೆ. ಎಸೆಸೆಲ್ಸಿ ಮುಗಿದ ನಂತರ ಮುಸ್ತಫಾ ಅವರ ಶಾಲೆಯ ಶಿಕ್ಷಕರು ಮುಸ್ತಫಾ ಅವರ ಕಾಲೇಜು ಶುಲ್ಕವನ್ನು ಕಟ್ಟುತ್ತಾರೆ.
ಕಾಲೇಜಿನಲ್ಲಿಯೂ ಕೂಡ ಅವರು ಚೆನ್ನಾಗಿ ಓದುತ್ತಾರೆ ಎಂಜಿನಿಯರಿಂಗ್ ಎಂಟ್ರೆನ್ಸ್ ಎಕ್ಸಾಮ್ ನಲ್ಲಿ ರ್ಯಾಂಕ್ ಬರುತ್ತಾರೆ. ಎನ್ಐಟಿಯಲ್ಲಿ ಸೀಟ್ ಸಿಗುತ್ತದೆ. 1995 ರಲ್ಲಿ ಬಿಟೆಕ್ ಪದವಿಯನ್ನು ಮುಗಿಸುತ್ತಾರೆ. ಪ್ರಾರಂಭದಲ್ಲಿ ಬೆಂಗಳೂರಿನ ಒಂದು ಸ್ಟಾರ್ಟಪ್ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ನಂತರದ ದಿನಗಳಲ್ಲಿ ಸಿಟಿಬ್ಯಾಂಕ್ ಮುಂತಾದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ನಂತರ ಹೊರದೇಶಗಳಲ್ಲಿಯೂ ಕೆಲಸ ಮಾಡುತ್ತಾರೆ ಇದರಿಂದ ಒಳ್ಳೆಯ ಸಂಬಳ ಬರುತ್ತದೆ. ನಂತರ ಮನೆ ಕಟ್ಟುತ್ತಾರೆ, ತಂಗಿ ಮದುವೆ ಮಾಡುತ್ತಾರೆ.
2011ರಲ್ಲಿ ಭಾರತಕ್ಕೆ ವಾಪಸ್ ಬರುತ್ತಾರೆ, ಬೆಂಗಳೂರಿನಲ್ಲಿ ಎಂಬಿಎ ಓದುತ್ತಾರೆ. ಮುಸ್ತಫಾ ಅವರು ಎಂಬಿಎ ಓದುವಾಗ ಅವರ ಸಂಬಂಧಿಕರ ಹೋಟೆಲಿಗೆ ಹೋಗುತ್ತಿದ್ದರು ಅಲ್ಲಿ ಇಡ್ಲಿ ದೋಸೆ ಚೆನ್ನಾಗಿ ಮಾರಾಟವಾಗುತ್ತಿತ್ತು. ಮುಸ್ತಫಾ ಅವರಿಗೆ ಮಾತನಾಡುವಾಗ ಇಡ್ಲಿ-ದೋಸೆ ಚೆನ್ನಾಗಿ ಮಾರಾಟವಾಗುತ್ತಿದೆ ಇದನ್ನೆ ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂಬ ಯೋಚನೆ ಬರುತ್ತದೆ.
ಮೊದಲಿನಿಂದಲೂ ಮುಸ್ತಫಾ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ತಮ್ಮದೆ ಸ್ವಂತ ಉದ್ಯೋಗ ಮಾಡುವ ಆಸೆ ಇತ್ತು ಅದರಂತೆ ಭಾರತದಲ್ಲಿ ಇಡ್ಲಿ-ದೋಸೆ ಹಿಟ್ಟನ್ನು ಪೂರೈಸುವ ಬಿಸಿನೆಸ್ ಪ್ರಾರಂಭಿಸುವ ನಿರ್ಧಾರ ಮಾಡುತ್ತಾರೆ. ಮುಸ್ತಫಾ ಅವರು ಐವತ್ತು ಸಾವಿರ ರೂಪಾಯಿ ಬಂಡವಾಳ ಹೂಡಿ 550 ಸ್ಕ್ವೇರ್ ಫೀಟ್ ಅಡುಗೆಮನೆಯಲ್ಲಿ ಐಡಿ ಅಂದರೆ ಇಡ್ಲಿ-ದೋಸೆ ಎಂಬ ಹೆಸರನ್ನು ಇಡಲಾಯಿತು. ಮೊದಲು ಬೆಂಗಳೂರಿನ 20 ಹೋಟೆಲ್ ಗಳಿಗೆ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಪೂರೈಸುತ್ತಾರೆ.
ನೋಡ ನೋಡುತ್ತಿದ್ದಂತೆ ಕಡಿಮೆ ಸಮಯದಲ್ಲಿ ಐಡಿ ಎಂಬ ಹೆಸರು ಬ್ರ್ಯಾಂಡ್ ಆಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಬಿಸಿನೆಸ್ ಬೆಳೆಸಲು ಮುಸ್ತಫಾ ಅವರ ಬಳಿ ಹಣವಿರಲಿಲ್ಲ. ಕೆಲಸಗಾರರಿಗೆ ಸಂಬಳ ಕೊಡಲು, ಕಿಚನ್ ಗೆ ಬೇಕಾಗುವ ವಸ್ತುಗಳನ್ನು ಒದಗಿಸಲು ಹಣ ಇರಲಿಲ್ಲ. ಮುಸ್ತಫಾ ಅವರು ಇರುವ ಹಣದಲ್ಲಿ ಮಷೀನ್ ಗಳನ್ನು ಖರೀದಿ ಮಾಡುತ್ತಾರೆ. ಉದ್ಯೋಗ ಹೆಚ್ಚು ಬೆಳೆದರೆ ಅಲ್ಲಿ ಕೆಲಸ ಮಾಡುವವರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುತ್ತೇನೆ ಎಂದು ಮುಸ್ತಫಾ ಅವರು ಕೆಲಸಗಾರರಿಗೆ ಮಾತು ಕೊಡುತ್ತಾರೆ.
ಕೆಲಸಗಾರರು ಮುಸ್ತಫಾ ಅವರನ್ನು ನಂಬಿ ಸಂಬಳ ಇಲ್ಲದೆ ಕೆಲಸ ಮಾಡುತ್ತಾರೆ ನಂತರ ಅವರ ಬಿಸಿನೆಸ್ ಕೋಟಿ ರೂಪಾಯಿ ಹಣವನ್ನು ಲಾಭ ಪಡೆಯುತ್ತದೆ. ಎಂಟು ವರ್ಷಗಳಲ್ಲಿ ಈ ಕಂಪನಿ ದೊಡ್ಡದಾಗಿ ಬೆಳೆಯುತ್ತದೆ. ಕಂಪನಿ ಬೆಳೆಯುತ್ತಿದ್ದಂತೆ ಬೆಂಗಳೂರಿನಿಂದ, ಚೆನ್ನೈ, ಪುಣೆ ಹೀಗೆ ವಿಸ್ತಾರ ಮಾಡಿದರು ಅಲ್ಲದೆ ಇಂಟರ್ನ್ಯಾಷನಲ್ ಮಾರುಕಟ್ಟೆಗೂ ಕಾಲಿಡುತ್ತಾರೆ.
ದೇಶವಿದೇಶಗಳಲ್ಲಿ ಮುಸ್ತಫಾ ಅವರ ಕಂಪನಿ ಕಾಲಿಟ್ಟಿದೆ. ಮುಸ್ತಫಾ ಅವರಿಗೆ ಪ್ರಶಸ್ತಿ ಕೂಡ ಲಭಿಸಿದೆ.ಅವರ ಕಂಪನಿಯಲ್ಲಿ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಮುಸ್ತಫಾ ಅವರು ಕಷ್ಟಪಟ್ಟು ಕಟ್ಟಿದ ಕಂಪನಿಯ ಆದಾಯ 2,000 ಕೋಟಿ ರೂಪಾಯಿ. ಶಿಕ್ಷಣದಲ್ಲಿ ಫೇಲಾದ ಮಾತ್ರಕ್ಕೆ ಜೀವನವೆ ಮುಗಿಯಿತು ಎಂದು ಅಂದುಕೊಳ್ಳಬಾರದು. ಮನಸ್ಸೊಂದಿದ್ದರೆ ಯಾರು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮುಸ್ತಫಾ ಅವರು ಉದಾಹರಣೆಯಾಗಿದ್ದಾರೆ.