ರವಿ ಬೆಳೆಗೆರೆ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಅವರಂತಹ ಬರಹಗಾರರು ಸಿಗುವುದು ತುಂಬಾ ಅಪರೂಪ. ಅವರು ಈಗ ಸ್ವಲ್ಪ ದಿನಗಳ ಹಿಂದೆ ನಿಧನರಾಗಿದ್ದಾರೆ. ಖ್ಯಾತ ಲೇಖಕ, ಸಾಹಿತಿ  ರವಿ ಬೆಳೆಗೆರೆ ಅವರ ಜೀವನದಲ್ಲಿ ನಡೆದಿರುವ ಕೆಲವು ಉತ್ಸಾಹಿ ಅನುಭವಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು  ತಿಳಿಯೋಣ.

ಮೊದಲಿಗೆ ರವಿ ಬೆಳೆಗೆರೆ ಅವರೇ ಹೇಳುವಂತೆ ನನ್ನ ಬಳಿ ಹಲವಾರು ಯುವಕರು ಬದುಕಿನಲ್ಲಿ ಏನಾದರೂ ಸಾಧಿಸಬೇಕು, ಉನ್ನತ ಸ್ಥಾನವನ್ನು ಹೊಂದಬೇಕು. ಹಣ ಗಳಿಸಬೇಕು ಎಂಬ ಆಸೆ ಆಕಾಂಕ್ಷೆಯನ್ನು ಹೊತ್ತು ನನ್ನಲ್ಲಿ ಬರುತ್ತಾರೆ. ಅವರಿಗೆ ನಾನು ಕೊಟ್ಟ ಸಲಹೆ ಹಾಗೂ ಅನುಭವ ಗಳನ್ನೂ ರವಿ ಬೆಳೆಗೆರೆ ಅವರು ಹಂಚಿಕೊಳ್ಳುತ್ತಾರೆ. ಜೀವನವು ನಾವು ಕಾಣುವ ಕನಸಿನಂತೆ ಸುಲಭವಾಗಿಲ್ಲ. ಜೀವನದಲ್ಲಿ ನಾವು ಪಡುವ ಪರಿಶ್ರಮ,ಕೆಲಸ, ನಿಷ್ಠೆ, ಪ್ರಾಮಾಣಿಕತೆ, ಉತ್ಸಾಹ, ಇವುಗಳಿಂದ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂಬುದು ಬೆಳೆಗೆರೆ ಅವರ ಅಭಿಪ್ರಾಯವಾಗಿದೆ. ಅದು ವಾಸ್ತವಿಕತೆಯು ಕೂಡ ಆಗಿದೆ.

ರವಿ ಬೆಳೆಗೆರೆ ಅವರ ಅನುಭವದಲ್ಲಿ ಯುವ ಜನತೆಗೆ ಹೇಳುವ ಮಾತುಗಳೆಂದರೆ ಹಣವನ್ನು ಸಂಪಾದಿಸಲು ಹೋದರೆ ಹಣವನ್ನು ಮಾತ್ರ ಸಂಪಾದಿಸುತ್ತೇವೆ. ಹೆಸರನ್ನು ಸಂಪಾದಿಸಲು ಹೋದರೆ ಹೆಸರನ್ನು ಮಾತ್ರ ಸಂಪಾದಿಸುತ್ತೇವೆ. ಇದರಿಂದ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಲು ಸಾಧ್ಯವಿಲ್ಲ. ಯಶಸ್ಸನ್ನು ಸಂಪಾದಿಸಲು ನಾವು ಮಾಡುತ್ತಿರುವ ಕೆಲಸದಲ್ಲಿ ವರ್ಷದಿಂದ ವರ್ಷಕ್ಕೆ ಏಳಿಗೆಯನ್ನು ಸತತ ಪರಿಶ್ರಮದಿಂದ ಪ್ರಾಮಾಣಿಕವಾಗಿ ದುಡಿದು ಸಾಧಿಸಬೇಕು.ರವಿ ಬೆಳೆಗೆರೆ ಅವರು ಹೇಳುವಂತೆ ಶಿಕ್ಷಣ ವಿದ್ಯಾಭ್ಯಾಸವನ್ನು ಮುಗಿಸಿದ ಯುವಕ ಯುವತಿಯರು ಕಚೇರಿಗಳಲ್ಲಿ ಗುಮಾಸ್ತನಾಗಿ, ಕ್ಲರ್ಕ್ ಆಗಿ, ಆಫೀಸ್ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಂಡು ಅಲ್ಲಿಯೇ ಸ್ವಲ್ಪ ಸಂಬಳ ಜಾಸ್ತಿ ಸಿಕ್ಕರೆ ತೃಪ್ತಿ ಪಟ್ಟಿಕೊಳ್ಳುತ್ತಾರೆ. ಆದರೆ ಅದು ಬೆಳೆಗೆರೆ ಅವರ ಪ್ರಕಾರ ಯಶಸ್ಸಲ್ಲ.

ಯಶಸ್ಸೆಂದರೆ ತಾವು ಸೇರಿಕೊಂಡಿರುವ ಕೆಲಸದಲ್ಲಿಯೇ ಉನ್ನತ ಸ್ಥಾನಕ್ಕೇರುವುದು ಏರಲು ಕಠಿಣ ಪರಿಶ್ರಮವನ್ನು, ನಿಷ್ಠೆ, ಧೈರ್ಯದಿಂದ ಮುನ್ನುಗ್ಗುವದು. ರವಿ ಬೆಳೆಗೆರೆ ಅವರು ಕೊಡುವ ಒಂದು ಉದಾಹರಣೆಯೆಂದರೆ ಒಬ್ಬ ರಸ್ತೆ ಕಾಮಗಾರಿ ಮಾಡುವ ಕಾರ್ಮಿಕನು ತಾನು ಮಾಡುವ ಕೆಲಸದಲ್ಲಿ ಪಳಗಿ ಬೇರೆಲ್ಲರಿಗಿಂತಲು ವಿಭಿನ್ನವಾಗಿ ಪರಿಶ್ರಮದಿಂದ ಪ್ರಾಮಾಣಿಕತೆಯಿಂದ ಮಾಡಿ ಕಾರ್ಮಿಕನಿಂದ ಮೇಸ್ತ್ರಿಯಾಗಿ ಮೇಸ್ತ್ರಿಯಿಂದ ಮಾಲೀಕನಾಗುವುದು. ವರ್ಷದಿಂದ ವರ್ಷಕ್ಕೆ ತನ್ನ ಉನ್ನತಿಯನ್ನು ಗಮನಿಸಿಕೊಂಡು ಯಶಸ್ಸನ್ನು ಸಾಧಿಸುವುದಾಗಿದೆ. ಬೆಳೆಗೆರೆ ಅವರು ಕೊಡುವ ಮತ್ತೊಂದು ವ್ಯಕ್ತಿ ಉದಾಹರಣೆ ಎಂದರೆ ಶ್ರೀ ವಿಜಯ್ ಸಂಕೇಶ್ವರ್ ಅವರು.

ಇವರು ಕೇವಲ ಒಂದು ಲಾರಿಯಿಂದ ಇಂದು ಸಾವಿರಾರು ಲಾರಿ ಹಾಗೂ ಬಸ್ ಗಳ ಮಾಲೀಕತ್ವದ ಕಂಪನಿಯ ಮಾಲೀಕರಾಗಿದ್ದಾರೆ. ಇವರ ಸಾಧನೆ ಗಿನ್ನೀಸ್ ರೆಕಾರ್ಡ್ನಲ್ಲಿ ಸೇರಿದೆ.  ರವಿ ಬೆಳೆಗೆರೆ ಅವರು ಕೆಲವೊಮ್ಮೆ ವಿಜಯ್ ಸಂಕೇಶ್ವರ್ ಅವರು ಬದುಕಿನ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಕಾಣುತ್ತಾರೆ ಎಂದು ಹೇಳುತ್ತಾರೆ. ಇವರು ಕಠಿಣ ಪರಿಶ್ರಮ, ಶೃದ್ದೆ, ಕೆಲಸದ ಮೇಲಿನ ಗೌರವದಿಂದ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ ಇಂತಹ ಸಾಧನೆಯನ್ನು ಮಾಡಿದ್ದಾರೆ ಎಂಬುದು ರವಿ ಬೆಳಗೆರೆ ಅವರ ಅಭಿಪ್ರಾಯವಾಗಿದೆ. ಹೀಗೆ ರವಿ ಬೆಳೆಗೆರೆ ಅವರು ಪರಿಶ್ರಮ, ಶ್ರದ್ಧೆ, ಧೈರ್ಯ,ನಿಷ್ಠೆ, ಪ್ರಾಮಾಣಿಕತೆ ಯಂತಹ ಜೀವನದ ಯಶಸ್ಸಿನ ಗುಟ್ಟಿನ ಸೂತ್ರಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಿ ಕೊಡುವುದರ ಮೂಲಕ ಸಹಕಾರಿಯಾಗಿದ್ದಾರೆ.

Leave a Reply

Your email address will not be published. Required fields are marked *