ಸನಾತನ ಧರ್ಮ ಅಂದರೆ ಹಿಂದೂ ಧರ್ಮ, ಅತ್ಯಂತ ಪುರಾತನ ಧರ್ಮವಾಗಿದೆ.ಹಾಗೆ ಈ ಸನಾತನ ಧರ್ಮಕ್ಕೆ ಸಂಬಂಧ ಪಟ್ಟಂತಹ ಅನೇಕ ಕುರುಹುಗಳು ಅಂದರೆ ದೇವಸ್ಥಾನಗಳಾಗಲಿ, ಮೂರ್ತಿಗಳಾಗಲಿ ಇಡೀ ವಿಶ್ವಾದ್ಯಾತ ಹರಡಿಕೊಂಡಿವೆ. ಅಂತಹ ಒಂದು ವೈಜ್ಞಾನಿಕ ಸಂಶೋಧನೆ ವಿಯೆಟ್ನಾಮ್ ನಲ್ಲಿ ನಡೆದಿದೆ. ವಿಯೆಟ್ನಾಮ್ ಭೌಗೋಳಿಕವಾಗಿ ಭಾರತದಿಂದ ತುಂಬಾ ದೂರವಿದ್ದರೂ, ಸಾಂಸ್ಕೃತಿಕವಾಗಿ ತುಂಬಾ ಹತ್ತಿರದಲ್ಲಿದೆ ಎನ್ನುವುದಕ್ಕೆ ಇದೊಂದು ಅದ್ಬುತ ಸಾಕ್ಷಿಯಾಗಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಭಾರತದ ಪುರಾತತ್ವ ಸಂಸ್ಥೆ ಎ.ಎಸ್.ಐ. ವಿಯೆಟ್ನಾಮ್ನಲ್ಲಿ ನಡೆದಿದ್ದ ಸಂಶೋಧನೆಯಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಇದು 9 ನೇ ಶತಮಾನಕ್ಕೆ ಸೇರಿದ್ಧು ಎನ್ನಲಾಗಿದೆ. ಇದರ ಆಯಸ್ಸು 1100 ವರ್ಷದ ಹಳೆಯ ಶಿವಲಿಂಗ ಇದಾಗಿದೆ. ಮೈಸನ್ ಪ್ರದೇಶದ ಚಾಮ್ ದೇಗುಲಗಳ ಸಮೂಹದಲ್ಲಿ ಉತ್ಖನನ ನೆಡೆಸುತ್ತಿದ್ದಾಗ ಭಾರತದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಹಿಂದೂ ಧರ್ಮದ ಆಚರಣೆಗಳಲ್ಲಿ ತೊಡಗಿಕೊಂಡಿದ್ದ ಚಂಪಾ ನಾಗರಿಕತೆ ಅಥವಾ ಚಾಮ್ ನಾಗರಿಕತೆಯು ಮತ್ತೆ ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೂ ಹಿಂದೆ ಉತ್ತುಂಗದಲ್ಲಿತ್ತು ಎಂದು ತಿಳಿಸಿಕೊಡುತ್ತದೆ. ಇಂದ್ರಪುರ ಎನ್ನುವುದು ಅದರ ರಾಜಧಾನಿಯಾಗಿತ್ತು.
ಈ ತಾಣಗಳನ್ನು ಕ್ರಿ.ಶ.ನಾಲ್ಕನೇ ಶತಮಾನದಿಂದ ಕ್ರಿ.ಶ.ಹದಿನಾಲ್ಕನೇ ಶತಮಾನದವರೆಗೆ ಚಂಪಾ ಅರಸರು ಆಳಿದ್ದರು. ಅಂದರೆ ಅವರು ಭಾರತದಿಂದಲೇ ಸಮುದ್ರದ ಮೂಲಕ ಸಂಚರಿಸಿ ಅಲ್ಲಿ ಆಕ್ರಮಣ ನಡೆಸಿ ಸನಾತನ ಧರ್ಮವನ್ನು ಹರಡಿದ್ದರು ಎಂದು ಕುರುಹುಗಳಿಂದಲೇ ಗೊತ್ತಾಗುತ್ತದೆ. ಈ ಭಾಗಗಳಲ್ಲಿ ಇನ್ನೂ ಅನೇಕ ಶಿವಲಿಂಗಗಳಿವೆ. ಚಂಪಾ ಅರಸರುಗಳಿಂದ ಇಲ್ಲಿ ಇನ್ನೂ ಅನೇಕ 20 ದೇಗುಲಗಳನ್ನು ನಿರ್ಮಿಸಲಾಗಿದೆ. ವಿಯೆಟ್ನಾಮ್ ಮೇಲೆ ಅಮೇರಿಕಾದ ಬಾಂಬ್ ದಾಳಿಯಿಂದ ಅನೇಕ ದೇಗುಲಗಳು ನಾಶವಾಗಿ ಹೋಗಿವೆ.
ಜಾಗೇಶ್ವರದ ಈ ಶಿವಲಿಂಗವನ್ನು ಭೂಮಿಯ ಮೊದಲ ಶಿವಲಿಂಗ ಎನ್ನಲಾಗುತ್ತದೆ.ಇಲ್ಲಿಂದಲೇ ಶಿವಲಿಂಗದ ಪೂಜೆ ಕೂಡ ಪ್ರಾರಂಭವಾಗಿದ್ದು ಈ ದೇವಾಲಯದ ಕೆಲವು ಕುರುಹುಗಳು ಮತ್ತು ಸಾಕ್ಷಿಗಳ ಪ್ರಕಾರ ವಿಶ್ವದ ಅತ್ಯಂತ ಪುರಾತನ ಶಿವಲಿಂಗವೆಂದು ನಂಬಲಾಗಿದೆ. ಯಾರು ಸ್ವಚ್ಛ ಮನಸ್ಸಿನಿಂದ ಜಾಗೇಶ್ವರ್ ಶಿವಲಿಂಗಕ್ಕೆ ತಲೆಬಾಗುತ್ತಾರೋ ಅವರ ಕೋರಿಕೆಗಳು ಈಡೇರುತ್ತವೆ ಎಂಬ ಪ್ರತೀತಿ ಇದೆ.ಉತ್ತರಕಾಂಡದ ಎಲ್ಲೋರ ಜಿಲ್ಲೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ದೇವದಾರ್ ಕಾಡಿನ ಒಳಗಿನ ಬೆಟ್ಟದಮೇಲೆ ಈ ದೇವಸ್ಥಾನವಿದೆ.
ಈ ದೇವಸ್ಥಾನದ ಪರಿಸರದಲ್ಲಿ ಪಾರ್ವತಿ, ಹನುಮ, ಭೈರವ, ಮೃತ್ಯುಂಜಯ, ಕೇದಾರನಾಥ, ದುರ್ಗಾ ಸಹಿತ 124 ದೇವಸ್ಥಾನಗಳಿವೆ. ಸತ್ಯ ಮನಸ್ಸಿನಿಂದ ಮೃತ್ಯುಂಜಯ ದೇವರ ಪೂಜೆ ಮಾಡಿದರೆ ಯಮರಾಜ ಅವರ ತಪ್ಪನ್ನು ಕ್ಷಮಿಸುತ್ತಾನೆ ಎಂಬ ಪ್ರತೀತಿ ಇದೆ. ಪಾಕಿಸ್ತಾನದಲ್ಲೂ ಕೂಡ ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ಅದರಲ್ಲಿ ಒಂದು ಶಿವನ ದೇವಾಲಯ ಕಟಸ್. ಈ ದೇವಸ್ಥಾನ ಈ ಪ್ರದೇಶದಲ್ಲಿ ಅತ್ಯಂತ ಹೆಸರುವಾಸಿಯಾಗಿದೆ. ಯಾಕೆಂದರೆ ಶಿವನು ಸತಿಯನ್ನು ಕಳೆದುಕೊಂಡಾಗ ಅವನ ಕಣ್ಣೀರಿನಿಂದ ಕಟಾಕ್ಷ ಎಂಬ ಸರೋವರ ಇಲ್ಲಿ ಉಂಟಾಗಿದೆ ಎಂದು ಹೇಳಲಾಗುತ್ತದೆ.
ಇದರ ಹತ್ತಿರವೇ ಏಳು ದೇವಸ್ಥಾನಗಳು ಕೂಡ ಇವೆ. ಇದನ್ನು ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಕಟ್ಟಿದ್ದರು ಎಂದು ಇತಿಹಾಸವಿದೆ. ಇನ್ನೊಂದು ಅಪರೂಪದ ಶಿವನದೇವಸ್ಥಾನ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ. ಈ ದೇವಸ್ಥಾನವನ್ನು ಗಳಗನಾಥೇಶ್ವರ ಎಂದು ಕರೆಯಲಾಗುತ್ತದೆ.ಈ ದೇವಾಲಯದಲ್ಲಿರುವ ಶಿವಲಿಂಗವನ್ನು ಸ್ಪರ್ಶಲಿಂಗವೆಂದು ಕರೆಯುತ್ತಾರೆ. ಈ ಶಿವಲಿಂಗಪ್ಪ ಯಾವುದೇ ಲೋಹವನ್ನು ಸ್ಪರ್ಶಿಸಿದರೆ ಚಿನ್ನವಾಗುತ್ತದೆ ಎಂದು ಐತಿಹಾಸವಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ.ತುಂಗಭದ್ರಾ ನದಿಯ ಬಲ ದಂಡೆಯಲ್ಲಿ ಪಸರಿಸಿರುವ ನಿಸರ್ಗ ಸೌಂದರ್ಯ ದಲ್ಲಿ ಶಾಂತವಾಗಿ ಗಳಗನಾಥೇಶ್ವರ ನೆಲೆಸಿದ್ದಾನೆ. ಇದೇ ರೀತಿ ಇನ್ನೂ ಅನೇಕ ಶಿವಲಿಂಗಗಳು ತನ್ನದೇಯಾದ ಪ್ರತೀತಿಯನ್ನು ಹೊಂದಿದೆ. ಏನೇ ಆದರೂ ಶಿವನ ಆರಾಧನೆಯಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿ ಮತ್ತು ಧೈರ್ಯ ಸಿಗುತ್ತದೆ.