ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವರ್ಗದ ಜನರು ಬೀದಿ ಬದಿಗಳಲ್ಲಿ ಮಾರುವಂತಹ ಫಾಸ್ಟ್ ಫುಡ್ ಗೆ ಮೊರೆ ಹೋಗದವರಿಲ್ಲ ಈ ಫಾಸ್ಟ್ ಫುಡ್ ನ ಸೇವನೆ ದೇಹಕ್ಕೆ ಮತ್ತು ಆರೋಗ್ಯಕ್ಕೆ ಹಾನಿಕರಕ ಎಂಬುದು ಗೊತ್ತಿದ್ದರೂ ಸಹ ಜನರು ಅದನ್ನು ಬಿಡಲು ತಯಾರಿಲ್ಲ, ಅಂತಹ ಜನರ ಆರೋಗ್ಯ ಕ್ರಮವನ್ನು ಸುದಾರಿಸಲು ನಿಂಬೆ ಹಣ್ಣಿನಿಂದ ಬಾರಿ ಪ್ರಯೋಜನಗಳಿವೆ. ಇಂದಿನ ಫಾಸ್ಟ್ ಫುಡ್ ನ ಬದಲಿಗೆ ಆರೋಗ್ಯಕಾರಿ ಆಹಾರಗಳನ್ನು ಸೇವಿಸಿದರೆ ಮಾನವನ ದೇಹ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ ಪ್ರಕೃತಿ ದತ್ತವಾಗಿ ಸಿಗುವಂತಹ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಕೊಂಡು ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು ಅದರಲ್ಲಿಯೂ ನಿಂಬೆ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ.
ಒಂದು ಲೋಟ ಬಿಸಿ ನೀರಿನ ಜೊತೆಗೆ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಅದು ನಿಮ್ಮ ದೇಹದ ಫಿಟ್ನೆಸ್ಸ್ ಅನ್ನು ಕಾಯ್ದುಕೊಳ್ಳಲು ಅಧ್ಬುತವಾಗಿ ಕೆಲಸ ಮಾಡುತ್ತದೆ ಆರೋಗ್ಯ ತಜ್ಞರ ಪ್ರಕಾರ ನಿಂಬೆ ರಸವು ಮಾನವನ ದೇಹದಲ್ಲಿನ ಛಾಯಾಪಚಯ ಕ್ರಿಯೆಯನ್ನು ವೇಗ ಮಾಡುವುದು ಅಲ್ಲದೇ ಬಹು ಬೇಗ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು ಮತ್ತು ನಿಂಬೆ ನೀರು ವಿರೇಚಕವಾಗಿ ಕೆಲಸ ಮಾಡುವ ಕಾರಣದಿಂದಾಗಿ ಮಲಬದ್ಧತೆ ನಿವಾರಣೆಯಾಗುವುದು ಮತ್ತು ಬಾಯಿಯ ಆರೋಗ್ಯ ಕಾಪಾಡುವಲ್ಲಿ ನಿಂಬೆ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ
ನಿಂಬೆ ಹಣ್ಣಿನಲ್ಲಿ ಇರುವಂತಹ ವಿಟಮಿನ್ ಸಿ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ ಮತ್ತು ಪ್ರತಿ ನಿತ್ಯ ನಿಂಬೆ ಹಣ್ಣಿನ ರಸವನ್ನು ಸೇವಿಸುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯವನ್ನು ಅದು ಕಡಿಮೆ ಮಾಡಿ ಬಾಯಿಯನ್ನು ತಾಜಾತನದಲ್ಲಿರುವಂತೆ ಅದು ಕಾಪಾಡುವುದು ನಿಂಬೆ ಹಣ್ಣಿನಲ್ಲಿ ಅತ್ಯುತ್ತಮ ಪೊಟ್ಯಾಸಿಯಮ್ ಇರುವ ಕಾರಣದಿಂದಾಗಿ ಇದು ಕೋಶಗಳ ಕಾರ್ಯ ನಿರ್ವಹಣೆಗಾಗಿ ಮತ್ತು ದೇಹದಲ್ಲಿನ ಛಾಯಾಪಚಯ ಕ್ರಿಯೆಗೆ ಬಹಳ ಉತ್ತಮವಾದದ್ದು.
ಇದರಲ್ಲಿರುವ ಪೊಟ್ಯಾಸಿಯಮ್ ದೇಹಕ್ಕೆ ಶಕ್ತಿ ನೀಡುವುದಲ್ಲದೇ ಸ್ನಾಯುಗಳ ಮತ್ತು ನರಗಳ ಸಂವಹನಕ್ಕೆ ನೆರವಾಗುವುದು ಅಲ್ಲದೇ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವ ಕಾರಣ ಇದನ್ನು ಪ್ರತಿ ನಿತ್ಯ ಸೇವಿಸುತ್ತಾ ಬಂದಲ್ಲಿ ಇದು ಕೂದಲಿನ ರಕ್ಷಣೆಗೆ ಸಹಾಯ ಮಾಡುತ್ತದೆ ಮತ್ತು ಅದನ್ನು ಹೆಚ್ಚಾಗಿ ಸೇವನೆ ಮಾಡಿದಲ್ಲಿ ಮುಖದ ಮೇಲೆ ನೆರಿಗೆ ಬೀಳುವುದು ಕಡಿಮೆಯಾಗುತ್ತದೆ ಅಲ್ಲದೇ ಮಾನವನ ದೇಹದ ಚರ್ಮಕ್ಕೆ ಇದು ಅತ್ಯಂತ ಉಪಕಾರಿಯಾಗಿದ್ದು ಉತ್ತಮ ಪೋಷಣೆಯನ್ನು ಒದಗಿಸುವಲ್ಲಿ ಇದು ನೆರವಾಗುತ್ತದೆ.