ಆಕಸ್ಮಿಕವಾಗಿ ಸಿಕ್ಕ 5 ನಿಧಿಗಳು ಅಂದರೆ ಲಾರ್ಜ್ ಕ್ರಿಸ್ಟಲ್, ವರ್ಲ್ಡ್ ಲಾರ್ಜೆಸ್ಟ್ ಪರ್ಲ್, ಗೋಲ್ಡ್ ನಗಟ್ಸ್, ಸ್ಟಾಪರ್ಡ್ ಶೈರ್ ಹೋರ್ಡ್, ಪಾಲಾಸೈಟ್ಸ್ ಇವುಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
2000 ನೇ ಇಸವಿ ಪಾಲ್ಕ ರಿಯಾನ್ ಎಂಬ ವ್ಯಕ್ತಿ ಮೆಕ್ಸಿಕೋದ ಒಂದು ಚಿಕ್ಕ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೋಗುತ್ತಾರೆ. ಆ ಬೆಟ್ಟದ ನೀರಿನೊಳಗಿದ್ದ ಗುಹೆಗೆ ಸಾಹಸ ಮಾಡಿ ಹೋಗುತ್ತಾರೆ. ಆಗ ಅವರಿಗೆ ನಂಬಲಾಗದ ದ್ರಶ್ಯ ಕಾಣಿಸುತ್ತದೆ. ಅದೇ ದೊಡ್ಡ ದೊಡ್ಡ ಕ್ರಿಸ್ಟಲ್ ಅಲ್ಲಿ ಸುಮಾರು 50 ಟನ್ ತೂಕ ಇರುವ ದೊಡ್ಡ ದೊಡ್ಡ ಹರಳು ಗಳಿದ್ದವು. ಎಲ್ಲಿ ನೋಡಿದರೂ ಹರಳುಗಳು ಕಾಣುವುದರಿಂದ ಇದಕ್ಕೆ ಕೇವ್ ಕ್ರಿಸ್ಟಲ್ ಎಂದು ಕರೆಯುತ್ತಾರೆ. ಇದು 5 ಲಕ್ಷ ವರ್ಷಗಳ ಹಿಂದೆ ಉಂಟಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಬೆಲೆ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಪದ್ಮನಾಭಸ್ವಾಮಿ ನೆಲಮಾಳಿಗೆ ಹೇಗೋ ಮೆಕ್ಸಿಕೋದಲ್ಲಿ ಹರಳುಗಳ ಗುಹೆ ಹಾಗೆ. ಫಿಲಿಪೈನ್ಸ್ ಗೆ ಸೇರಿದ ಒಬ್ಬ ಮೀನು ಹಿಡಿಯುವ ವ್ಯಕ್ತಿ 2006 ರಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ಹೋದಾಗ. ಮೀನಿನ ಬಲೆಯ ಜೊತೆ ಒಂದು ದೊಡ್ಡ ಕಲ್ಲು ಸಿಗುತ್ತದೆ. ಅದು ಮುತ್ತಾಗಿರುತ್ತದೆ ಸಾಮಾನ್ಯವಾಗಿ ಮುತ್ತು ಚಿಕ್ಕದಾಗಿರುತ್ತದೆ. ಈ ಮುತ್ತು 34 ಕೆ.ಜಿ ತೂಕ ಇದೆ. ನೋಡಲು ವಿಚಿತ್ರವಾಗಿ ಮತ್ತು ಸುಂದರವಾಗಿ ಇರುತ್ತದೆ. ಇದನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಮಂಚದ ಕೆಳಗೆ 10 ವರ್ಷಗಳ ಕಾಲ ಇಡುತ್ತಾರೆ. ನಂತರ 2016 ರಲ್ಲಿ ಮನೆಯಲ್ಲಿರುವ ಮಕ್ಕಳು ಅದರ ಜೊತೆ ಫೋಟೋ ತೆಗೆದು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಾರೆ. ಪೋಟೋ ನೋಡಿದವರು ಅದರ ಬಗ್ಗೆ ಹೇಳುತ್ತಾರೆ. ಆಗ ಇದರ ಬಗ್ಗೆ ಅವರ ಕುಟುಂಬಕ್ಕೆ ತಿಳಿಯುತ್ತದೆ. ನಂತರ ಅವರು 750 ಕೋಟಿಗೆ ಮಾರುತ್ತಾರೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ಎಂಬ ಸ್ಥಳದಲ್ಲಿ ಗೋಲ್ಡನ್ ಟ್ರೈಯಾಂಗಲ್ ಎಂಬ ಪ್ರದೇಶವಿದೆ ಇಲ್ಲಿ ಬಹಳಷ್ಟು ಜನರಿಗೆ ಬಂಗಾರದ ಕಲ್ಲುಗಳು ಸಿಕ್ಕಿವೆ 1869 ರಲ್ಲಿ ಇಬ್ಬರು ಸ್ನೇಹಿತರಿಗೆ 109 ಕೆ.ಜಿ ತೂಕ ಇರುವ ಬಂಗಾರದ ಕಲ್ಲು ಸಿಗುತ್ತದೆ. ಅವರು ಅದನ್ನು 9 ಲಕ್ಷಕ್ಕೆ ಮಾರಿದರು. 2009 ರಲ್ಲಿ ಒಬ್ಬ ವ್ಯಕ್ತಿ ತನ್ನ ಗರ್ಲ್ ಫ್ರೆಂಡ್ ಜೊತೆ ಇಲ್ಲಿಗೆ ಪಿಕ್ ನಿಕ್ ಹೋಗುತ್ತಾನೆ ಆಗ 40 ಕೆಜಿ ತೂಕವುಳ್ಳ ಬಂಗಾರದ ಕಲ್ಲು ಸಿಗುತ್ತದೆ. ಇದರ ಬೆಲೆ ಸುಮಾರು 15 ಕೋಟಿ.
ಇಂಗ್ಲೆಂಡಿಗೆ ಸೇರಿದ ಟೆರಿ ಆರ್ಬರ್ಟ್ ಅವರು 2009 ರಲ್ಲಿ ಖರೀದಿಸಿದ ಮೆಟೆಲ್ ಡಿಟೆಕ್ಟರ್ ಸರಿಯಾಗಿ ಕೆಲಸ ಮಾಡುತ್ತೊ ಇಲ್ವೋ ಎಂದು ಪರೀಕ್ಷಿಸಲು ಅವರ ಮನೆಯ ಹಿತ್ತಲಿನಲ್ಲಿ ಖಾಲಿ ಜಾಗದಲ್ಲಿ ಚೆಕ್ ಮಾಡುತ್ತಿರುವಾಗ ಒಂದು ಸೌಂಡ್ ಕೇಳಿಸುತ್ತದೆ. ಅಗೆದಾಗ ಅಲ್ಲಿ ಒಂದು ಮಡಕೆ ಸಿಗುತ್ತದೆ. ಅದರಲ್ಲಿ ಬಂಗಾರದ ನಾಣ್ಯಗಳಿರುತ್ತದೆ. ಇನ್ನು ಅಗೆದರೆ ಮತ್ತೆರಡು ಮಡಕೆ ಸಿಗುತ್ತದೆ ಅದರಲ್ಲೂ ಬಂಗಾರದ ನಾಣ್ಯಗಳಿರುತ್ತವೆ. ಇನ್ನು ಅಗೆದಾಗ ಒಂದು ಪೆಟ್ಟಿಗೆ ಸಿಗುತ್ತದೆ ಅದರಲ್ಲಿ ಹಳೆಯ ಗೋಲ್ಡ್ ವಸ್ತುಗಳು ಸಿಗುತ್ತದೆ. ಇದರಲ್ಲಿ 5.1 ಕೆ.ಜಿ ಬಂಗಾರ ಮತ್ತು 4.1 ಕೆ.ಜಿ ಬೆಳ್ಳಿ ಇರುತ್ತದೆ. ಇಂಗ್ಲೆಂಡಿನ ಕಾನೂನಿನ ಪ್ರಕಾರ ಯಾವುದೇ ಪುರಾತನ ವಸ್ತು ಸಿಕ್ಕಿದರೂ ಅದು ಸರ್ಕಾರಕ್ಕೆ ಸೇರಿದ್ದು ಆದ್ದರಿಂದ ಅವುಗಳನ್ನು ಮ್ಯೂಸಿಯಂನಲ್ಲಿ ಇಡುತ್ತಾರೆ. ಇಂಥ ನಿಧಿಯನ್ನು ಕಂಡುಹಿಡಿದ ಆರ್ಬರ್ಟ್ ಅವರಿಗೆ 20 ಕೋಟಿ ನೀಡಿ ಇಂಗ್ಲೆಂಡ್ ಸರ್ಕಾರ ಸನ್ಮಾನಿಸುತ್ತದೆ. ಪಾಲಾಸೈಟ್ಸ್ ಇದು ಆಕಾಶ ದಿಂದ ಬಂದ ಆಸ್ಟ್ರಾಯ್ಡ್. ಇದು ಐರನ್ ಮತ್ತು ಸಿಲಿಕಾನ್ ನಿಂದ ತಯಾರಾದ ಒಂದು ಕಲ್ಲು. ಇದರ ಮಧ್ಯೆ ಅಲ್ಲಲ್ಲಿ ಗೋಲ್ಡ್ ಕಲರಿನಲ್ಲಿ ಆಲೋಬಿನ್ ಇದೆ. ಇದು 4.5 ಬಿಲಿಯನ್ ವರ್ಷಗಳ ಹಿಂದೆ ಬಂದು ಬಿದ್ದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 2002 ರಲ್ಲಿ ಚೈನಾದ ಒಬ್ಬ ವ್ಯಕ್ತಿಗೆ 408 ಕೆ.ಜಿ ಇರುವ ಪಾಲಾಸೈಟ್ಸ್ ಸಿಗುತ್ತದೆ ಅದರ ಬೆಲೆ ಸುಮಾರು 15 ಕೋಟಿ. ನಮ್ಮ ದೇಶದಲ್ಲಿ ನಿಧಿ ಸಿಕ್ಕರೆ ಸರ್ಕಾರಕ್ಕೆ ತಿಳಿಸಬೇಕು.