2024ರ ಫೆಬ್ರವರಿ ತಿಂಗಳಿನಲ್ಲಿ ಬದಲಾಗುತ್ತಿರುವ ಗ್ರಹಗಳ ಪರಿಣಾಮ 6 ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವವು ಎಂದು ತಿಳಿಯೋಣ.

ಬುಧ ಗ್ರಹ, ಕುಜ ಗ್ರಹ, ಶುಕ್ರ ಗ್ರಹ ಮತ್ತು ರವಿ ಗ್ರಹ ಈ 4 ಗ್ರಹಗಳ ಪ್ರಮುಖ ಬದಲಾವಣೆ ಆಗುವುದರಿಂದ ಹಲವು ರೀತಿಯ ಅದೃಷ್ಟ ಫಲಗಳು ದೊರೆಯುತ್ತವೆ. ಫೆಬ್ರವರಿ ತಿಂಗಳಿನ 1ನೇ ತಾರೀಖು ಬುಧ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆ 8ನೇ ತಾರೀಖು ಹಸ್ತಂಗತನಾಗ್ತನೆ. 11ನೇ ತಾರೀಖು ಶನಿ ದೇವರು ಹಸ್ತಮ ಆಗ್ತಾ ಇದ್ದಾರೆ.12ನೇ ಶುಕ್ರ ಸಂಕ್ರಮಣ ಆಗುತ್ತದೆ.

ಮೇಷ ರಾಶಿ :-ಮೇಷ ರಾಶಿಯಲ್ಲಿ ಈ ನಾಲ್ಕು ಗ್ರಹಗಳ ಬದಲಾವಣೆ ರಾಶಿಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ಸಿಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದ್ದರು ಅದು ಒಳ್ಳೆಯ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಕಂಡ ಕನಸು ನೆರವೇರುತ್ತದೆ. ಸಿನೇಮಾ ಕ್ಷೇತ್ರ, ರಂಗಭೂಮಿ ಕಲಾವಿದರು ಈ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಜನರಿಗೆ ಹೆಸರು ಪ್ರಖ್ಯಾತಿ ಪಡೆಯುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಬಹಳ ದೊಡ್ಡ ಮಟ್ಟದ ಬದಲಾವಣೆ ತರುತ್ತದೆ. ಮನೋ ಕಾಮನೆಗಳು ನೆರವೇರುವ ಒಂದು ಮಾಸ ಈ ಫೆಬ್ರವರಿ ತಿಂಗಳು.

ಕರ್ಕಾಟಕ ರಾಶಿ :- ಕಟಕ ರಾಶಿಯವರ ಆಸೆ ಆಕಾಂಕ್ಷೆಗಳು ನೆರವೇರುತ್ತವೆ. ಹೊಂದಾಣಿಕೆಯಿಂದ ಅತಿ ಹೆಚ್ಚು ಲಾಭ ಸಿಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ವೃತ್ತಿ ಬದಲಾವಣೆ, ವೃತ್ತಿ ಸ್ಥಾನದ ಬದಲಾವಣೆ ಮಾಡುವ ಆಸೆ ಈ ಮಾಸದಲ್ಲಿ ಈಡೇರುತ್ತದೆ. ವಿಧ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ಆಗುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಜನರಿಗೂ ಈ ಕಾಲ ಒಳ್ಳೆಯ ಫಲಿತಾಂಶ ನೀಡುತ್ತದೆ.

ಕನ್ಯಾ ರಾಶಿ :- ಮಕ್ಕಳಿಂದ ಸಂತೋಷವಾಗಿ ಇರುವ ಭಾಗ್ಯ ಸಿಗುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ನೋಡಿ ಹೆಮ್ಮೆ ಪಡುವರು. ಹೊಸ ಸ್ನೇಹ ಸಂಬಂಧ ಬೆಸೆದುಕೊಳ್ಳುತ್ತದೆ. ಈ ಫೆಬ್ರವರಿ ತಿಂಗಳಲ್ಲಿ 6 ರಾಶಿಯವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ. ಪ್ರೇಮ ಸಂಬಂಧದಲ್ಲಿ ಸಫಲತೆ ಸಿಗುತ್ತದೆ.

ತುಲಾ ರಾಶಿ :- ತುಲಾ ರಾಶಿಯವರಿಗೆ ಮಾನಸಿಕ ನೋವು ಹಿಂಸೆ ಇದ್ದರು. ಉತ್ತಮ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಾಣುವಿರಿ. ಕುಟುಂಬದಲ್ಲಿ ಶುಭ ಕಾರ್ಯ ಮತ್ತು ಸಮಾರಂಭಗಳು ನೆರವೇರುತ್ತವೆ. ಮಾತೃ ಅವರಿಗೆ ಆರೋಗ್ಯ ಸಮಸ್ಯೆ ಇದ್ದರು ಅದು ಸರಿಯಾಗುತ್ತದೆ. ಉದ್ಯೋಗದಲ್ಲಿ ಇರುವ ಜನರಿಗೆ ಆದಾಯ ಹೆಚ್ಚಾಗುತ್ತದೆ. ಆತಂಕಗಳು ನಿಮ್ಮ ಸುತ್ತ ಸುತ್ತುತ್ತದೆ. ಎಲ್ಲವನ್ನು ಖುಷಿಯಿಂದ ಅನುಭವಿಸುವ ಮನಸ್ಥಿತಿಯಲ್ಲಿ ಈ ರಾಶಿಯವರು ಇರುವುದಿಲ್ಲ.

ಮಕರ ರಾಶಿ :-ಮಕರ ರಾಶಿಯವರಿಗೆ ಎಲ್ಲಾ ರೀತಿಯ ಲಾಭಗಳು ಉಂಟಾಗುತ್ತವೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಹೊಸ ಕೆಲಸಗಳಿಗೆ ಮುನ್ನುಡಿ ಬರೆಯುವುದಕ್ಕೆ ಈ ಮಾಸ ಸೂಕ್ತವಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಹಣ್ಣ ಬಂದು ಕೈ ಸೇರುತ್ತದೆ.

ಮೀನ ರಾಶಿ :- ಇನ್ನು ಮೀನ ರಾಶಿಯವರಿಗೆ ಫೆಬ್ರವರಿ ತಿಂಗಳು ಒಂದು ರೀತಿಯ ವೈಭೋಗದ ಸಮಯ. ಎಲ್ಲಾ ವಿಚಾರಗಳು ಒಂದು ರೀತಿ ಸರಾಗವಾಗಿ ನಡೆಯುತ್ತದೆ. ಯಶಸ್ಸು ನಿಮ್ಮನು ಹಿಂಬಾಲಿಸಿ ಬರುತ್ತದೆ. ಎಷ್ಟೇ ನೋವು ದುಃಖ ಬಾಧಿಸುತ್ತಿದ್ದರು ಎಲ್ಲರ ಮುಂದೆ ನಗು ಪ್ರದರ್ಶನ ಮಾಡುವರು. ಕೋಪ  ಹೆಚ್ಚಾಗಿ ಇರುತ್ತದೆ. ಎಲ್ಲವನ್ನೂ ಸೌಖ್ಯಾವಾಗಿ ನೋಡಿಕೊಳ್ಳುವರು. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಆದಂತೆ ಹಣಕಾಸು ಕೂಡ ವೃದ್ಧಿ ಆಗುತ್ತದೆ. ಇವು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಯಾವುದೇ ಸಂಬಂಧವಿಲ್ಲ. ಬದುಕನ್ನು ಬಂದಂತೆ ಸ್ವೀಕಾರ ಮಾಡಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *