ಪ್ರತಿದಿನ ಬೆಳಗ್ಗೆ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಹಾಗೂ ಕುಡಿಯುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಮಧುಮೇಹ ನಿಯಂತ್ರಣಕ್ಕೆ ನೀರಿನಲ್ಲಿ ಕರಗುವ ನಾರಿನಂಶ ದೇಹಕ್ಕೆ ಬೇಕು ಆಹಾರದಲ್ಲಿ ನಾರಿನಂಶವಿರಬೇಕು. ಊಟದ ಜೊತೆಗೆ ಪಪ್ಪಾಯ ಹಣ್ಣನ್ನು ತಿನ್ನಬೇಕು ಆಗ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ರಾತ್ರಿ ಮಲಗುವ ಮುನ್ನ 5-6 ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಉದ್ದವಾಗಿ ಕಟ್ ಮಾಡಿ ಅರ್ಧ ಲೀಟರ್ ನೀರಿನಲ್ಲಿ ಬೆಂಡೆಕಾಯಿಯನ್ನು ನೆನೆಸಿಡಬೇಕು. ಬೆಳಿಗ್ಗೆ ಎದ್ದಕೂಡಲೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬೇಕು ಬೆಂಡೆಕಾಯಿಯಲ್ಲಿರುವ ನಾರಿನಂಶ ಶುಗರನ್ನು ಕಡಿಮೆ ಮಾಡುತ್ತದೆ. ಶುಗರ್ ಗೆ ತೆಗೆದುಕೊಳ್ಳುವ ಮೆಡಿಸಿನ್ ತೆಗೆದುಕೊಳ್ಳಬೇಕು ಬಿಡಬಾರದು.
ಈ ನೀರನ್ನು ಕುಡಿಯುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಹೈಪರ್ ಅಸಿಡಿಟಿಯನ್ನು ಕಡಿಮೆಮಾಡುತ್ತದೆ. ಈ ನೀರಿನಲ್ಲಿ ವಿಟಮಿನ್ ಕೆ ಸಾಕಷ್ಟಿದೆ. ರಕ್ತ ಶುದ್ಧಿಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ನೀರನ್ನು ಕುಡಿಯುವುದರಿಂದ ಮೂಳೆ ಗಟ್ಟಿಯಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತಂದು ಸ್ಟ್ರೋಕ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಈ ನೀರನ್ನು ಕುಡಿಯುವುದರಿಂದ ಮೋಷನ್ ಕ್ಲಿಯರ್ ಆಗುತ್ತದೆ. ಎಲ್ಲರೂ ಸುಲಭವಾಗಿ ಸಿಗುವ ಬೆಂಡೆಕಾಯಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.