ಪ್ರಕೃತಿ ಒಂದು ಅದ್ಭುತವಾದ ಸುಂದರ ಲೋಕ. ಇದನ್ನು ಯಾರು ಹೇಗೆ ಸೃಷ್ಟಿಸಿದರೋ ತಿಳಿಯದು. ಆದರೆ ಇದನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲ. ಹಾಗೆಯೇ ಪ್ರಕೃತಿ ನಮಗೆ ಹಣ್ಣು, ಹಂಪಲುಗಳನ್ನು, ತರಕಾರಿಗಳನ್ನು, ಹೂವುಗಳನ್ನು ನೀಡುತ್ತವೆ. ಪ್ರತಿಯೊಂದು ಹೂವು ಮತ್ತು ಹಣ್ಣುಗಳು ತರಕಾರಿಗಳು ಅದರದ್ದೇ ಆದ ವಿಟಮಿನ್ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ತರಕಾರಿಗಳ ಬಗ್ಗೆ ಹೇಳುವುದಾದರೆ ಬಹಳ ಇದೆ.
ಮಕ್ಕಳಿಗೆ ಇದನ್ನು ದಿನನಿತ್ಯ ತಿನ್ನಿಸುವುದರಿಂದ ಬುದ್ಧಿ ಚುರುಕಾಗುತ್ತದೆ. ತಮ್ಮ ತರಗತಿಯಲ್ಲಿ ಪ್ರಥಮ ಸ್ಥಾನ ಹೊಂದುತ್ತಾರೆ. ಜೀವನದಲ್ಲಿ ಎಲ್ಲೂ ಸೋಲಬಾರದು ಎಂದರೆ ಈ ತರಕಾರಿಯನ್ನು ಕೊಡಿ. ಅದು ಯಾವುದೆಂದರೆ ಬೆಂಡೆಕಾಯಿ.
ಬೆಂಡೆಕಾಯಿ ಈ ತರಕಾರಿಯನ್ನು ಕೆಲವರು ಸೇವಿಸುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸಾಂಬಾರ್ ಮಾಡಿ ತಿನ್ನಬಹುದು. ರಸಂ ಮಾಡಿ ತಿನ್ನಬಹುದು. ಹಾಗೆಯೇ ಪಲ್ಯ ಮಾಡಿ ತಿನ್ನಬಹುದು. ಯಾವ ರೀತಿಯಲ್ಲಾದರೂ ಸೇವಿಸಬಹುದು. ಇದರ ಬಳಕೆಯಿಂದ ಕಾಲು ಗಂಟಿನ ನೋವು ನಿವಾರಣೆ ಆಗುತ್ತದೆ. ವಿಶೇಷವಾಗಿ ಮನುಷ್ಯನ ಕಾಲುಗಂಟಿನಲ್ಲಿ ಒಂದು ರೀತಿಯ ಎಣ್ಣೆ ಇರುತ್ತದೆ. ಆ ಎಣ್ಣೆಯ ಪ್ರಮಾಣವನ್ನು ಕಡಿಮೆ ಪ್ರಮಾಣದಲ್ಲಿ ಇದ್ದರೆ ಸಮ ಪ್ರಮಾಣದಲ್ಲಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಸಮಪ್ರಮಾಣದಲ್ಲಿ ಇರಿಸುವ ಸಾಮರ್ಥ್ಯ ಬೆಂಡೆಕಾಯಿ ಹೊಂದಿದೆ. ಆದ್ದರಿಂದ ಇದನ್ನು ದಿನಾಲೂ ಬಳಸಿ ಪ್ರಯೋಜನ ಪಡೆದುಕೊಳ್ಳಿ. ಸಂತೆಗೆ ಹೋದಾಗ ತರಕಾರಿ ಕೊಳ್ಳುವಾಗ ಇದನ್ನು ಮರೆಯದೇ ತಂದು ತಿನ್ನಿ.