ಮದುವೆ ನಂತರ ಹೆಣ್ಮಕ್ಳು ಬೇಗನೆ ದಪ್ಪ ಆಗ್ತಾರೆ ಯಾಕೆ ಗೊತ್ತೇ

0 74

ಹೌದು ಸಾಮಾನ್ಯವಾಗಿ ಬಹುದಿನಗಳಿಂದ ಇಂತಹ ವಿಷಯಗಳು ಕೇಳಿಬರುತ್ತಿವೆ ಹಾಗು ನಾವು ನೀವುಗಳು ಇಂಥಹ ವಿಷಯಗಳನ್ನು ಕೇಳಿರುತ್ತಿವೆ ಅಥವಾ ನೋಡಿರುತ್ತಿವೆ, ಮದುವೆಗಿಂತ ಮುಂಚೆ ಬಹುತೇಕ ಹೆಣ್ಮಕ್ಳು ತೆಳ್ಳಗೆ ಇರುತ್ತಾರೆ ಮದುವೆ ನಂತರ ಬೇಗನೆ ದಪ್ಪ ಆಗುತ್ತಾರೆ ಅದು ಹೇಗೆ ಅನ್ನೋದನ್ನ ಈ ಮೂಲಕ ತಿಳಿಯುವ ಚಿಕ್ಕ ಪ್ರಯತ್ನ ಮಾಡೋಣ ಬನ್ನಿ. ಮದುವೆಯಾದ ನಂತರ ಹೆಂಗಸರಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಹೆಚ್ಚು ಮಂದಿ ಮಹಿಳೆಯರಲ್ಲಿ ಕಾಣಿಸುವ ಮುಖ್ಯ ಲಕ್ಷಣ ತೂಕ ಹೆಚ್ಚಾಗುವುದು.

ಇದು ಸಹಜವೇ ಆದರೂ ಅದಕ್ಕೆ ಕಾರಣವು ಬೇರೇನೋ ಎಂಬ ಭ್ರಮೆಯಲ್ಲಿರುತ್ತಾರೆ. ಯಾವಾಗ ತೂಕ ಹೆಚ್ಚಾಗುವುದು ಎಲ್ಲರಲ್ಲೂ ಸಾಮಾನ್ಯ ಸಮಸ್ಯೆಯಾಗಿ ಬದಲಾಯಿತೋ, ಸ್ತ್ರೀಯರು ಮದುವೆಯ ನಂತರ ತೂಕ ಹೆಚ್ಚಾಗುವುದು ಕೂಡ ಅಷ್ಟೇ ಸಹಜ. ಇದಕ್ಕೆ ಅನೇಕ ಜನರು ಎಂದುಕೊಳ್ಳುವ ಕಾರಣ ಲೈಂ ಗಿಕ ಕ್ರಿಯೆ. ಆದರೆ ಇದು ಪಾಕ್ಷಿಕ ಸತ್ಯ ಮಾತ್ರವೇ. ಗಂಡು ಹೆಣ್ಣು ಸೇರಿ ಸಾಗಿಸುವ ಜೀವನ ಪ್ರಯಾಣದಲ್ಲಿ ಇದು ಒಂದು ಅಂಶ ಮಾತ್ರವೇ.

ಶಾರೀರಿಕ ಕ್ರಿಯೆಯಿಂದ ದೇಹದ ಭಾಗಗಳಲ್ಲಿ ಬೆಳವಣಿಗೆ, ಸೊಂಟದ ಭಾಗದಲ್ಲಿ ಕೊಬ್ಬು ಬೆಳೆಯುವ ರೀತಿಯ ಬದಲಾವಣೆಗಳು ನಡೆದರೂ, ಕೇವಲ ಅದೇ ತೂಕ ಹೆಚ್ಚಾಗುವುದಕ್ಕೆ ಕಾರಣ ಎನ್ನುವುದು ಮಾತ್ರ ಕೇವಲ ಗಾಳಿಮಾತು. ಸ್ತ್ರೀಯರು ಮದುವೆಯ ನಂತರ ತೂಕ ಹೆಚ್ಚಾಗುವುದಕ್ಕೆ ಅನೇಕ ಇತರೆ ಕಾರಣಗಳು ಇವೆ.ಆ ಕಾರಣಗಳಲ್ಲಿ ಪ್ರಧಾನವಾದದ್ದು, ಆಹಾರ ಅಭ್ಯಾಸಗಳಲ್ಲಿ ಬದಲಾವಣೆಗಳು. ಅಲ್ಲಿಯವರೆಗೂ ತೆಗೆದುಕೊಳ್ಳುವ ಆಹಾರ ಪದಾರ್ಥಗಳೇ ಅಲ್ಲ ಆಹಾರ ತೆಗೆದುಕೊಳ್ಳುವ ಸಮಯವು ಒಂದಾದರೇ, ಗಂಡನ ಮನೆಗೆ ಬಂದಾದ ಮೇಲೆ ಇವೆಲ್ಲವೂ ಬದಲಾಗಿ ಬಿಡುತ್ತದೆ. ಈ ಪ್ರಕ್ರಿಯೆಯಲ್ಲಿ ತೂಕ ಹೆಚ್ಚಾಗುವುದು ಕೂಡ ಸಾಮಾನ್ಯ..ಹಾಗೆಯೇ ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳುವುದು, ಮನೆಯಲ್ಲಿಯ ಕೆಲಸಗಳಲ್ಲಿ ಒತ್ತಡ ಹೆಚ್ಚಾಗಿಬಿಡುತ್ತದೆ. ಒತ್ತಡವೂ ಕೂಡ ತೂಕ ಹೆಚ್ಚಾಗುವುದಕ್ಕೆ ಪ್ರಧಾನವಾದ ಕಾರಣ ಎಂದು ಹೆಚ್ಚು ಪರಿಶೋಧನೆಯಲ್ಲಿ ತಿಳಿದು ಬಂದಿದೆ.

ಹಾಗೆಯೇ ಸ್ತ್ರೀಯರು ಮದುವೆ ಆಗುವ ಮೊದಲು ಹೆಚ್ಚಾಗಿ ಸಮಯ ಇರುವುದರಿಂದ ವ್ಯಾಯಾಮಗಳು ಮಾಡುತ್ತಾ ಇರುತ್ತಾರೆ. ಅದೇ ಮದುವೆಯ ಆನಂತರ ತಕ್ಕ ಸಮಯ ಸಿಗದೇ ವ್ಯಾಯಾವವನ್ನು ನಿರ್ಲಕ್ಷ್ಯ ಮಾಡುತ್ತಾ ಬರುತ್ತಾರೆ. ಇದರಿಂದ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳುವುದು, ಒತ್ತಡವನ್ನು ತಡೆಯಲು ಯೋಗ, ವ್ಯಾಯಾಮ ರೀತಿಯ ಕಾರ್ಯವನ್ನು ಮಾಡುವ ಮೂಲಕ ಅಧಿಕ ತೂಕದಿಂದ ವಿಮುಕ್ತಿ ಹೊಂದಿ ಮಹಿಳೆಯರು ಆರೋಗ್ಯವಾಗಿ, ಪೂರ್ವದಲ್ಲಿದ್ದ ಹಾಗೆ ಶರೀರ ಆಕೃತಿಯೊಂದಿಗೆ ಸಣ್ಣಗೆ ಬದಲಾಗಬಹುದು ಎನ್ನುತ್ತಿದ್ದಾರೆ ವೈದ್ಯ ನಿಪುಣರು.

Leave A Reply

Your email address will not be published.