ಸರ್ಕಾರವು ಜನರ ಹಿತಕ್ಕಾಗಿ ಅನೇಕ ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಅವುಗಳು ಜನರಿಗೆ ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟಿವೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಇನ್ನೂ ಹಲವಾರು ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಹಾಗೆಯೇ ಅದರಲ್ಲಿ ಕಾರ್ಮಿಕ ಕಾರ್ಡ್ ಕೂಡ ಒಂದು. ಆದ್ದರಿಂದ ನಾವು ಇಲ್ಲಿ ಕಾರ್ಮಿಕ ಕಾರ್ಡ್ ನ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಾರ್ಮಿಕ ಕಾರ್ಡನ್ನು ಎಲ್ಲರೂ ಮಾಡಿಸುವಂತಿಲ್ಲ. ಕಟ್ಟಡ ನಿರ್ಮಾಣ ಮಾಡುವವರು ಕಾರ್ಮಿಕ ಕಾರ್ಡನ್ನು ಮಾಡಿಸಬಹುದು. ಹಾಗೆಯೇ ಕಟ್ಟಡಗಳನ್ನು ಮಾರ್ಪಾಡು ಮಾಡುವವರು ಸಹ ಇದನ್ನು ಮಾಡಿಸಬಹುದು. ನಿರ್ವಹಣೆ ಅಥವಾ ಯಾವುದೇ ಕಟ್ಟಡಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವಂಥವರು ಈ ಕಾರ್ಡನ್ನು ಮಾಡಿಸಬಹುದು. ಯಾವುದೇ ರೀತಿಯ ರಿಪೇರಿಗಳನ್ನು ಮಾಡುವಂಥವರು ಕೂಡ ಮಾಡಿಸಬಹುದು. ಬೀದಿಗಳು ಮತ್ತು ರಸ್ತೆಗಳು ಮತ್ತು ರೈಲ್ವೆ ಗಳಲ್ಲಿ ಕೆಲಸ ಮಾಡುವವರು ಸಹ ಇದನ್ನು ಮಾಡಿಸಬಹುದು.

ಹಾಗೆಯೇ ನೌಕೆಯಲ್ಲಿ, ಜಲ ಕಾಮಗಾರಿಗಳಲ್ಲಿ, ವಿದ್ಯುತ್ ಸ್ಥಾವರಗಳಲ್ಲಿ, ದೂರವಾಣಿ, ದೂರದರ್ಶನ, ವಿದ್ಯುತ್ ಸಂಪರ್ಕ, ಅಣೆಕಟ್ಟುಗಳು, ಜಲಮೂಲಗಳು, ಸುರಂಗಗಳು, ಸೇತುವೆಗಳು, ಕಲ್ಲು ಗಣಿಗಾರಿಕೆ ಮತ್ತು ರಸ್ತೆ ಸೇತುವೆಗಳು, ಟೈಲ್ಸ್ ಗಳನ್ನು ಅಳವಡಿಸುವವರು, ನೀರಿನ ಕೊಯ್ಲು ಗಳಲ್ಲಿ ಕೆಲಸ ಮಾಡುವವರು, ಮನೆಕಟ್ಟುವಾಗ ಎಲ್ಲಾ ರೀತಿಯಲ್ಲಿ ಅಳವಡಿಕೆಗಳನ್ನು ಮಾಡುವವರು, ರಸ್ತೆ ಪೀಠೋಪಕರಣಗಳನ್ನು ಮಾಡುವವರು, ರೋಟರಿ ಗಳ ನಿರ್ಮಾಣ ಮತ್ತು ಸ್ಥಾಪನೆ ಮಾಡುವವರು ಮತ್ತು ಕಾರಂಜಿಗಳನ್ನು ಮಾಡುವವರು ಇಂತಹವರು ಕಾರ್ಮಿಕ ಕಾರ್ಡನ್ನು ಮಾಡಿಸಿಕೊಳ್ಳಬಹುದು.

ಭೂಮಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡುವವರು, ತಾತ್ಕಾಲಿಕವಾದ ಆಶ್ರಯ ತಾಣಗಳನ್ನು ಅಳವಡಿಕೆ ಮಾಡುವವರು, ಚಲನಚಿತ್ರಗಳಲ್ಲಿ ಸೆಟ್ ಮಾಡುವವರು ಹೀಗೆಲ್ಲಾ ವಲಯದಲ್ಲಿ ಕೆಲಸ ಮಾಡುವವರು ಸಹ ಕಾರ್ಮಿಕ ಕಾರ್ಡನ್ನು ಮಾಡಿಸಿಕೊಳ್ಳಬಹುದು. ಕಾರ್ಮಿಕ ಕಾರ್ಡ್ ನಿಂದ ಹಲವಾರು ಪ್ರಯೋಜನಗಳಿವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಅನುಕೂಲವಾಗುತ್ತದೆ. ಆದ್ದರಿಂದ ನೀವು ಕೂಡ ಕಾರ್ಮಿಕರಾಗಿದ್ದರೆ ಈ ಕಾರ್ಡ್ ನ ಪ್ರಯೋಜನ ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!