ಕ್ರಿಕೆಟ್ ಆಟವೆಂದರೆ ಭಾರತ ದೇಶದಲ್ಲಿ ಹುಟ್ಟಿದ ಚಿಕ್ಕವಯಸ್ಸಿನ ಹುಡುಗರಿಂದ ಹಿಡಿದು ವಯಸ್ಸಾದವರ ವರೆಗೂ ಹುಚ್ಚೆದ್ದು ಪ್ರೀತಿಯಿಂದ ನೋಡುವಂತ ಆಟವಾಗಿದೆ. ಅಷ್ಟೊಂದು ಜನಪ್ರಿಯತೆಯನ್ನು ಕ್ರಿಕೆಟ್ ಆಟವು ಭಾರತದಲ್ಲಿ ಪಡೆದುಕೊಂಡಿದೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಪ್ರಾಧಾನ್ಯತೆ ಇದೆ ಎಂದರೆ ದೇವರಿಗಿಂತಲೂ ಹೆಚ್ಚಾಗಿ ಕ್ರಿಕೆಟ್ ಆಟಗಾರರನ್ನು ಪೂಜಿಸುತ್ತಾರೆ. ಇದೇ ಕಾರಣದಿಂದ ಭಾರತದ ಕ್ರಿಕೆಟ್ ಆಟಗಾರರಿಗೆ ಸೂಪರ್ ಸ್ಟಾರ್ ಪಟ್ಟ ದೊರಕಿದೆ. ಆದ್ದರಿಂದ ನಾವು ಇಲ್ಲಿ ಕ್ರಿಕೆಟ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಆದರೆ ಈ ಸ್ಟಾರ್ ಪಟ್ಟ ರಾತ್ರೋರಾತ್ರಿ ಯಾರಿಗೂ ದೊರಕುವುದಿಲ್ಲ.130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ಭಾರತದಲ್ಲಿ ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರ ಆಗುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಹಗಲು-ರಾತ್ರಿ ಶ್ರಮಪಟ್ಟು ಅಭ್ಯಾಸ ಮಾಡಿ, ಅದ್ಭುತ ಆಟವನ್ನು ಪ್ರದರ್ಶನ ಮಾಡಿ, ತನ್ನ ಸಾಮರ್ಥ್ಯವನ್ನು ತೋರಿಸಬೇಕಾಗುತ್ತದೆ. ಇದರ ಜೊತೆಗೆ ಅವರಿಗೆ ಅದೃಷ್ಟವು ಕೈ ಹಿಡಿಯಬೇಕಾಗುತ್ತದೆ. ಇಷ್ಟೆಲ್ಲಾ ಆದಮೇಲೂ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಸರಕಾರ ಗೌರವಿಸಿ ಸನ್ಮಾನ ಮಾಡಿ ಸರ್ಕಾರಿ ನೌಕರಿಯನ್ನು ನೀಡುತ್ತದೆ.

ಇದರಲ್ಲಿ ಎಲ್ಲರಿಗಿಂತ ಮೊದಲು ಭಾರತ ಕ್ರಿಕೆಟ್ ನ ದಂತಕಥೆ ಎಂದು ಹೇಳಿಸಿಕೊಳ್ಳುವ ಮತ್ತು ಅತ್ಯುತ್ತಮ ಆಲ್-ರೌಂಡರ್ ಆಟದಿಂದ ಭಾರತಕ್ಕೆ ಮೊಟ್ಟ ಮೊದಲು ವರ್ಲ್ಡ್ ಕಪ್ ಗೆದ್ದುಕೊಟ್ಟ ಭಾರತದಲ್ಲಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹುಟ್ಟುಹಾಕಿದ ಆಟಗಾರ ಕಪಿಲ್ ದೇವ್. ಇವರಿಗೆ 2008ರಲ್ಲಿ ಸರ್ಕಾರದ ವತಿಯಿಂದ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿ ಗೌರವಿಸಿದ್ದಾರೆ. ಈ ಮೂಲಕ ಮೊದಲ ಸರ್ಕಾರಿ ನೌಕರಿಯನ್ನು ಪಡೆದ ಕ್ರಿಕೆಟ್ ಆಟಗಾರ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಇನ್ನು ಕ್ರಿಕೆಟ್ ದೇವರು ಅಂತಾನೆ ಕರೆಸಿಕೊಳ್ಳುವ ಭಾರತದಲ್ಲಷ್ಟೇ ಅಲ್ಲದೆ ಅನೇಕ ದೇಶಗಳ ಕ್ರಿಕೆಟ್ ಪ್ರೇಮಿಗಳ ಆರಾಧ್ಯದೈವ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್.

ಇವರು ಕ್ರಿಕೆಟ್ ನಲ್ಲಿ ಎಷ್ಟು ದಾಖಲೆಗಳನ್ನು ಮಾಡಿದ್ದಾರೆ ಎಂದರೆ ಅವರಿಗೆ ಗೊತ್ತಿರುವಷ್ಟು ದಾಖಲೆಯನ್ನು ಬರೆದಿದ್ದಾರೆ. ಈ ಕ್ರಿಕೆಟ್ ದಿಗ್ಗಜನಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತರತ್ನವನ್ನು ನೀಡಿ ಗೌರವಿಸಿದ್ದಾರೆ. ಇನ್ನು 2010ರಲ್ಲಿ ಇಂಡಿಯನ್ ಏರ್ಪೋರ್ಸ್ ನಿಂದ ಅತ್ಯುನ್ನತ ಏರ್ಫೋರ್ಸ್ ಕ್ಯಾಪ್ಟನ್ ಹುದ್ದೆಯನ್ನು ನೀಡಿ ಗೌರವಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಮತ್ತು ಭಾರತದಕ್ಕೆ ಎರಡನೇ ವಿಶ್ವಕಪ್ ಗೆದ್ದು ಕೊಟ್ಟ ಮತ್ತು ಅತ್ಯುತ್ತಮ ಮ್ಯಾಚ್ ಫಿನಿಶರ್ ಎಂದೇ ಹೆಸರುವಾಸಿಯಾದ ಆಟಗಾರ ಮಹೇಂದ್ರ ಸಿಂಗ್ ಧೋನಿ.

ಇವರು 2007ರಲ್ಲಿ ಟಿ-20ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ನಂತರ ಇಂಡಿಯನ್ ಆರ್ಮಿ ಎಂ.ಎಸ್ .ಧೋನಿ ಅವರಿಗೆ ಹಾನರೇಬಲ್ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿ ಗೌರವಿಸಿದೆ. ಇನ್ನು ಭಾರತದ ಸ್ಪಿನ್ನರ್ ಎಂದೇ ಹೆಸರುವಾಸಿಯಾಗಿರುವ ಹರ್ಭಜನ್ ಸಿಂಗ್ ಅವರಿಗೂ ಕೂಡ ಪಂಜಾಬ್ ಸರ್ಕಾರ ಡಿ.ಎಸ್ಪಿ. ಹುದ್ದೆಯನ್ನು ನೀಡಿ ಗೌರವಿಸಿದೆ. ಇನ್ನು 2010ರಲ್ಲಿ ಇಂಡಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ ಮತ್ತು ಆರ್ಸಿಬಿ ತಂಡದ ಅತ್ಯುತ್ತಮವಾದ ಬೌಲರ್ ಆಗಿರುವಂತಹ ಉಮೇಶ್ ಯಾದವ್ ಬಡಕುಟುಂಬದಿಂದ ಬಂದ ಪ್ರತಿಭೆ ಯಾಗಿದ್ದಾರೆ.ಅದೃಷ್ಟವಶಾತ್ ಇವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ದೊರಕಿತು.

ಇವರಿಗೆ ಸ್ಪೋರ್ಟ್ಸ್ ಕೂಟದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯನ್ನು ನೀಡಲಾಗಿದೆ. ಆರ್ಸಿಬಿ ಬೆಸ್ಟ್ ಸ್ಪಿನ್ನರ್ ಹಾಗೂ 2016ರಿಂದ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಯಜುವೇಂದ್ರ ಚಹಲ್ ಗೆ 2018 ರಲ್ಲಿ ಭಾರತ ಸರ್ಕಾರ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಇನ್ಸ್ಪೆಕ್ಟರ್ ಹುದ್ದೆಯನ್ನು ನೀಡಿ ಗೌರವಿಸಿದೆ. ಇನ್ನು ನಮ್ಮ ಕನ್ನಡಿಗರಾದ ಕೆ.ಎಲ್.ರಾಹುಲ್ ಅವರು 2014ರಲ್ಲಿ ಇಂಡಿಯಾದ ಟೆಸ್ಟ್ ಕ್ರಿಕೆಟಿಗೆ ಪಾದರ್ಪಣೆ ಮಾಡುತ್ತಾರೆ. ಇವರ ಅದ್ಭುತ ಆಟದಿಂದಲೇ ಜನರನ್ನು ಗೆದ್ದಿದ್ದಾರೆ. ಕೆ.ಎಲ್.ರಾಹುಲ್ ಅವರನ್ನು ಭಾರತದ ಮುಂದಿನ ಕ್ಯಾಪ್ಟನ್ ಎಂದು ಸಹ ಹೇಳಲಾಗುತ್ತಿದೆ. ಇವರಿಗೂ ಸಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ನೀಡಿ ಗೌರವಿಸಿದ್ದಾರೆ. ಹೀಗೆ ಭಾರತ ತಂಡದ ಕ್ರಿಕೆಟ್ ಆಟಗಾರರನ್ನು ಸರ್ಕಾರಿ ನೌಕರಿಯನ್ನು ನೀಡಿ ಗೌರವಿಸಿದ್ದಾರೆ.

Leave a Reply

Your email address will not be published. Required fields are marked *