ಸಾಧನೆ ಎಂಬುದು ಯಾರ ಸ್ವತ್ತಲ್ಲ. ಅದನ್ನು ಸಿದ್ಧಿಸಿಕೊಳ್ಳಲು ಬರುವ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಾತಿ ಬೆಳೆಸಿಕೊಳ್ಳಬೇಕು. ಸಾಧಿಸುವ ಛಲವಿದ್ದರೆ ಬದುಕಿನಲ್ಲಿ ಏನೇ ಬಂದರೂ ಎದುರಿಸಿ ಗೆಲ್ಲುತ್ತೇನೆ ಎಂಬ ಧೃಡ ಮನಸ್ಸಿದ್ದರೆ ಯಾರೂ ಬೇಕಾದರೂ ದೊಡ್ಡ ಸ್ಥಾನಕ್ಕೆ ಹೋಗಬಹುದು ಎಂಬುದಕ್ಕೆ ಕುರಿ ಕಾಯುತ್ತಿದ್ದ ಈ ಯುವತಿ ನೈಜ ನಿದರ್ಶನವಾಗಿದ್ದಾರೆ. ವಲಸೆಗಾರರಾಗಿ ಬಂದು ತನ್ನ ಮಾತೃಭಾಷೆಯಲ್ಲದ ಆ ದೇಶದ ಭಾಷೆಯನ್ನೂ ಕಲಿತು ಅದೇ ದೇಶದ ಮಂತ್ರಿಯಾಗುವುದು ಎಂದರೆ! ಇದೆಲ್ಲಾ ನಾವು ಅಂದುಕೊಂಡಷ್ಟು ಸುಲಭವಲ್ಲ. ಇದು ಯಾವುದೋ ಸಿನಿಮಾ ಕತೆಯಂತೂ ಅಲ್ಲ. ಯುವತಿಯೊಬ್ಬಳ ನಿಜ ಜೀವನದಲ್ಲಿ ನಡೆದ ಒಂದು ಘಟನೆ. ಪ್ರತಿಯೊಬ್ಬರಿಗೂ ಸ್ಫೂರ್ತಿಯಂತಿದೆ ಆ ಯುವತಿಯ ಜೀವನದಲ್ಲಿ ನಡೆದ ಘಟನೆ. ಹಾಗಾದರೆ ಆ ಯುವತಿ ಯಾರು? ಆಕೆ ಮಾಡಿದ ಸಾಧನೆ ಏನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಆ ಯುವತಿಯ ಹೆಸರು ನಜತ್ ವಲ್ಲವುಡ್ ಬೆಲ್ಕೆಸಿಮ್. ಕುರಿ ಕಾಯುತ್ತಿದ್ದ ಈ ಹುಡುಗಿ ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿಯಾಗಿದ್ದರು. ಫ್ರಾನ್ಸ್ ದೇಶದ ಮೊದಲ ಮಹಿಳಾ ಶಿಕ್ಷಣ ಮಂತ್ರಿ ಎಂಬ ಖ್ಯಾತಿ ಪಡೆದ ಮಹಿಳೆ ಏಕೆ ಕೂಡ. ಕಡು ಬಡತನದ ಕುಟುಂಬದ ಏಳು ಜನ ಮಕ್ಕಳಲ್ಲಿ ಈ ನಜತ್ ಕೂಡಾ ಒಬ್ಬಳು. ಹುಟ್ಟಿದ್ದು ಮೊರೋಕನ್ ಎಂಬ ಗ್ರಾಮಾಂತರ ಪ್ರದೇಶದ ನಡೋರ್ ಎಂಬ ಹಳ್ಳಿಯಲ್ಲಿ ಅಕ್ಟೋಬರ್ ನಾಲ್ಕು , ೧೯೭೭ ರಲ್ಲೀ. ನಜತ್ ತನ್ನ ಬಾಲ್ಯವನ್ನು ತನ್ನ ಅಜ್ಜ ಅಜ್ಜಿಯರ ಜೊತೆಗೆ ಕಳೆಯುತ್ತಾಳೆ. ಬಡಕುಟುಂಬದಲ್ಲಿ ಬೆಳೆದ ಈ ಬಾಲಕಿ ಚಿಕ್ಕ ವಯಸ್ಸಿನಲ್ಲೇ ತುಂಬಾ ಸಂಕಷ್ಟದ ಪರಿಸ್ಥಿತಿಗಳನ್ನ ಎದುರಿಸಿದ್ದಾರೆ. ತಂದೆ ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದವರು. ಹಾಗಾಗಿ ಕುಟುಂಬಕ್ಕೆ ತನ್ನಿಂದ ಏನಾದರೂ ಸಹಾಯವಾಗಬೇಕು ಎಂದು ಬಾಲಕಿ ನಜತ್ ಕುರಿ ಕಾಯುವ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದರು. ಇನ್ನು ಚಿಕ್ಕವಯಸ್ಸಿನಲ್ಲಿದ್ದಾಗಲೇ ನಜತ್ ಅವರ ಕುಟುಂಬ ಫ್ರಾನ್ಸ್ ದೇಶಕ್ಕೆ ವಲಸೆ ಬಂದರು. ನಂತರ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಇಲ್ಲಿಯ ರಾಷ್ಟ್ರೀಯತೆಯನ್ನು ಪಡೆದುಕೊಂಡಳು.
ಭಾಷೆ ಗೊತ್ತಿಲ್ಲದ ದೇಶಕ್ಕೆ ಬಂದ ನಜತ್ ತನ್ನ ಸ್ವಂತ ಪರಿಶ್ರಮದಿಂದ ಫ್ರೆಂಚ್ ಭಾಷೆ ಕಲಿಯುತ್ತಾಳೆ. ನಂತರ ೨೦೦೨ ರಲ್ಲಿ ಪ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸ್ಟಡೀಸ್ (Paris Institute of Political Studies) ಇಲ್ಲಿ ತನ್ನ ಗ್ರಾಜುಯೇಷನ್ ಪಡೆದುಕೊಳ್ಳುತ್ತಾರೆ. ಇದೇ ಇನ್ಸ್ಟಿಟ್ಯೂಷನ್ ನಲ್ಲಿ ನಜತ್ ಬೋರಿಸ್ ವಲ್ಲವುಡ್ ಎಂಬ ಯುವಕನನ್ನು ನೋಡಿ ಪ್ರೇಮವಾಗಿ ಮುಂದೆ ಆಗಸ್ಟ್ ಇಪ್ಪತ್ತೇಳು ೨೦೦೫ ರಲ್ಲೀ ಇಬ್ಬರೂ ವಿವಾಹ ಆಗುತ್ತಾರೆ.
ಬಳಿಕ ೨೦೦೨ ರಲ್ಲಿ ಫ್ರಾನ್ಸ್ ನ ಸೋಷಿಯಲಿಸ್ಟ್ ಪಕ್ಷಕ್ಕೆ ಸೇರ್ಪಡೆಗೊಂಡ ಈಕೆ ತನ್ನ ರಾಜಕೀಯ ಜೀವನ ಶುರು ಮಾಡುತ್ತಾಳೆ. ಅಲ್ಲಿ ತಾರತಮ್ಯ ನೀತಿಯ ವಿರುದ್ಧ ತಾನೇ ಸ್ವತಃ ಅದರ ಮುಂದಾಳತ್ವ ವಹಿಸಿ ಹೀಗೆ ತನ್ನ ಸತತ ಪರಿಶ್ರಮದ ಫಲವಾಗಿ 2014ರಲ್ಲಿ ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿಯಾಗಿ ಆಯ್ಕೆಯಾಗಿ 2017ರವರೆಗೆ ಅಧಿಕಾರ ನಡೆಸುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಒಂದು ದೊಡ್ಡ ಸ್ಥಾನಕ್ಕೇರಿದ ನಜತ್ ವಲ್ಲವುಡ್ ಹೀಗೆ ಹೇಳುತ್ತಾರೆ ನಾವು ಸುಮ್ಮನೆ ಪ್ರೇಕ್ಷಕರಾಗಿ ನೋಡುತ್ತಾ ಭವಿಷ್ಯದ ಚಿಂತೆ ಮಾಡುವುದನ್ನ ಬಿಟ್ಟು ಅದನ್ನ ಬದಲಾಯಿಸುವ ಕೆಲಸ ಮಾಡಬೇಕು. ಹಾಗಾಗಿ ಯುವಜನತೆ ರಾಜಕೀಯದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.