ಕುರಿಗಳನ್ನು ಸಾಕುವುದರಿಂದ ಆದಾಯ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಕುರಿಯ ಕೂದಲಿನಿಂದ ಉಣ್ಣೆ ಬಟ್ಟೆಯನ್ನು ತಯಾರಿಸುತ್ತಾರೆ. ಹಾಗೆಯೇ ಕುರಿಯ ಹಾಲನ್ನು ಸಹಬಳಕೆ ಮಾಡುತ್ತಾರೆ. ಇದನ್ನು ಮಾರಾಟ ಮಾಡಿಕೊಂಡು ಹಳ್ಳಿಯಕಡೆಗಳಲ್ಲಿ ಜೀವನ ಸಾಗಿಸುತ್ತಾರೆ. ಹಳ್ಳಿಗಳಲ್ಲಿ ಹೈನುಗಾರಿಕೆ ಮತ್ತು ಕೋಳಿಸಾಕಣಿಕೆ ಇವನ್ನೆಲ್ಲ ಅವರ ಜೀವನೋಪಾಯಕ್ಕೆ ಮಾಡುತ್ತಾರೆ.ಆದ್ದರಿಂದ ನಾವು ಇಲ್ಲಿ ಅವುಗಳನ್ನ ಹೇಗೆ ನೋಡಿಕೊಳ್ಳುತ್ತಾರೆ ಯಾವರೀತಿಯಾಗಿ ತಳಿ ಅಭಿವೃದ್ಧಿ ಮಾಡುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪ್ರಸನ್ನಕುಮಾರ್ ಎನ್ನುವವರು ಕುರಿಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಇವರು ಭದ್ರಾವತಿಯ ಮಾರುತಿ ನಗರದವರು. ಇವರು ಎರಡು ತಿಂಗಳಹಿಂದೆ ಕುರಿಯ ಷಡ್ ನಿರ್ಮಾಣ ಮಾಡಿದ್ದರು. ನಂತರ ಮಂಡ್ಯದಿಂದ ಕುರಿಗಳನ್ನ ತಂದರು ಒಂದು ಕುರಿಗೆ 5100 ರೂಪಾಯಿಗಳುಖರ್ಚಾಗಿವೆ. ಅಂತೆಯೇ 40 ಕುರಿಯ ಮರಿಗಳನ್ನು ತಂದು ಸಾಕಲು ಪ್ರಾರಂಭಿಸಿದರು. ಬನ್ನೂಕ್ರಾಸ್ ಜಾತಿಯ ಕುರಿಗಳು ಇವಗಳನ್ನು ಸಾಕಿದರೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಹಾಗೆಯೇ ಅವುಗಳಿಗೆ ರೋಗವು ಕಡಿಮೆ.ಬನ್ನೂರಿನಲ್ಲಿ ಕೊಬ್ಬಿನಂಶ ಜಾಸ್ತಿ ಇರುತ್ತವೆ. ಆದರೆ ಕ್ರಾಸ್ ಬನ್ನೂರಿನಲ್ಲಿ ಕೊಬ್ಬಿನಂಶ ಇರುವುದಿಲ್ಲ ಮತ್ತು ಮಟನ್ ತುಂಬಾ ರುಚಿಯಾಗಿರುತ್ತದೆ. ಇದು ಈ ಕುರಿಯ ಲಕ್ಷಣ.

ಒಟ್ಟು ನಲವತ್ತೊಂದು ಕುರಿ ಅದರಲ್ಲಿ ಇಪ್ಪತ್ತೊಂದು ಕುರಿ ಗಂಡು ಮತ್ತು ಇಪ್ಪತ್ತು ಕುರಿ ಹೆಣ್ಣು ಗಂಡುಕುರಿಗಳನ್ನು ಇಪ್ಪತ್ತೈದು ಕೆ.ಜಿ. ಬಂದ ಮೇಲೆ ಮಾರಾಟ ಮಾಡುತ್ತಾರೆ. ಹೆಣ್ಣುಕುರಿಗಳನ್ನ ಕ್ರಾಸ್ ಮಾಡಲು ಇಡುತ್ತಾರೆ. ಅವುಗಳನ್ನ ಕ್ರಾಸ್ ಮಾಡಿ ಅವು ಮರಿ ಹಾಕಿದ ನಂತರ ಅವುಗಳ ತಳಿ ಅಭಿವೃದ್ಧಿ ಮಾಡುತ್ತಾರೆ. ಕುರಿಗಳಿಗೆ ಸಯ್ಲೇಜ್ ಅನ್ನು ಆಹಾರವಾಗಿ ಹಾಕುತ್ತಾರೆ. ಇದರಿಂದ ಕುರಿಗಳ ಬೆಳವಣಿಗೆ ಹೆಚ್ಚಾಗುತ್ತದೆ ಮತ್ತು ಅವು ಉತ್ಸಾಹದಿಂದ ಇರುತ್ತವೆ. ಇವುಗಳಿಗೆ ಈ ಮೇವನ್ನು ಹಾಕುವುದರಿಂದ ಬೇಗ ದಪ್ಪ ಮತ್ತು ದೊಡ್ಡದಾಗಿ ಬೆಳೆಯುತ್ತವೆ. ಇನ್ನು ಕೊನೆಯದಾಗಿ ಕುರಿಗಳನ್ನು ಬೆಳೆಸಿ ಅವುಗಳನ್ನು ಮಾರಾಟಮಾಡಿ ಹೆಣ್ಣುಕುರಿಗಳನ್ನು ಸಾಕಿ ಅವುಗಳನ್ನು ಮರಿ ಮಾಡಿಸಿ ಅವುಗಳಿಂದ ಬರುವ ಗೊಬ್ಬರ ಹಾಲು ಮತ್ತು ಮಾಂಸವನ್ನು ಮಾರಾಟಮಾಡುತ್ತಾರೆ.

ಇದರಿಂದ ರೈತರಿಗೆ ಲಾಭವಾಗುತ್ತದೆ. ಸಾಮಾನ್ಯವಾಗಿ ರೈತರು ಮನೆಯಲ್ಲಿ ಕುರಿಗಳನ್ನ ಸಾಕುತ್ತಾರೆ. ಅವರು ತಮ್ಮ ಅನುಕೂಲಕ್ಕೆ ಆಗುವಂತೆ ಗೊಬ್ಬರ ಮತ್ತು ಮಾಂಸಕ್ಕೆ ಬಳಸುತ್ತಾರೆ. ಈಗ ಈ ಕರೋನದ ಕಾರಣದಿಂದ ಎಲ್ಲರೂ ಹೊರಗಡೆ ಕೆಲಸಕ್ಕೆ ಹೋಗಲು ಸಾದ್ಯವಾಗುವುದಿಲ್ಲ ಎಂದು ಕುರಿ ಸಾಕುವ ಹಿಂದಿನ ಕೆಲಸವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಇದರಿಂದ ಒಳ್ಳೆಯ ಲಾಭವಾಗುತ್ತದೆ.

ಕುರಿಗಳನ್ನು ಬಹಳ ಹಿಂದಿನ ಕಾಲದಿಂದಲೂ ಸಾಕುತ್ತಿದ್ದರು. ತಮ್ಮ ಸ್ವಂತ ಬಳಕೆಗೆ ಬಳಸುತ್ತಿದ್ದರು. ಆದರೆ ಈಗ ಎಲ್ಲ ಕಡೆಗಳಲ್ಲಿ ಕುರಿಗೊಬ್ಬರ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ ಅವುಗಳಿಂದ ಲಾಭಪಡೆಯುತ್ತಾರೆ. ಸಸ್ಯಹಾರಿಗಳಿಗಿಂತ ಮಾಂಸಹಾರಿಗಳು ಜಾಸ್ತಿ ಅದಕ್ಕಾಗಿ ಯಾವಾಗಲು ಮಾಂಸದ ದರ ಕಡಿಮೆಯಾಗುವುದಿಲ್ಲ. ಇದರಿಂದಾಗಿ ಕುರಿಸಾಕಾಣಿಕೆಯಿಂದ ರೈತರಿಗೆ ಲಾಭವಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!