ಕುಂಭ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಕನಸುಗಳು ನೆರವೇರುವ ಸಮಯ ಯಾವೆಲ್ಲ ಶುಭ ಫಲಗಳಿವೆ ನೋಡಿ

0 6

ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ. ಪ್ರತಿಯೊಬ್ಬರ ರಾಶಿಯ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದು. ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ಫಲಾಫಲದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಉತ್ತಮ ಫಲ ಸಿಗಲಿದೆ. ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಈ ಸಮಯದಲ್ಲಿ ಕುಂಭ ರಾಶಿಯವರ ಸರ್ವೋನ್ನತ ಅಭಿವೃದ್ದಿ ಆಗಲಿದೆ ಹಾಗೂ ದೈವಾನುಕೂಲ ಸಿದ್ದಿಯಾಗಲಿದೆ, ಮಹತ್ವದ ಯೋಗ ಬರಲಿದೆ, ದೇವರ ಅಪಾರವಾದ ಶಕ್ತಿ ದೊರೆಯಲಿದೆ. ಕುಂಭ ರಾಶಿಯವರು ಅಂದುಕೊಂಡಿರುವ ಪುಸ್ತಕ ಮುದ್ರಣ, ಲೇಖನಿ ಇತರೆ ಸಂಬಂಧಪಟ್ಟ ಪಠ್ಯ ಪುಸ್ತಕ ವ್ಯವಹಾರಗಳಲ್ಲಿ , ರಫ್ತುದಾರಿಕೆಗೆ ಸಂಬಂಧಿಸಿದಂತೆ ಕಮಿಷನ್ ಇತ್ಯಾದಿ ವಿಷಯಕ್ಕೆ ದೈವಾನುಕೂಲ ಸಿದ್ದಿ ಪ್ರಾಪ್ತಿಯಾಗುತ್ತದೆ.

ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯ ಹೋಟೆಲ್ ಉದ್ಯಮ, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಬಿಸಿನೆಸ್ ನಲ್ಲಿ ಇರುವವರಿಗೆ ಹೆಚ್ಚಿನ ಧನಲಾಭ ಉಂಟಾಗುತ್ತದೆ. ಹೈನುಗಾರಿಕೆಯಲ್ಲಿ ತೊಡಗಿರುವ ಈ ರಾಶಿಯವರಿಗೆ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಮಾರ್ಚ್ ತಿಂಗಳ ಆರಂಭದಲ್ಲಿ ಬಹಳ ಚೆನ್ನಾಗಿರುತ್ತದೆ ಮಧ್ಯ ಭಾಗದಲ್ಲಿ ಸ್ವಲ್ಪ ಏರು ಪೇರು ಉಂಟಾಗುತ್ತದೆ ಆದರೂ ಭಯಪಡಬೇಕಾಗಿಲ್ಲ. ಗೊಬ್ಬರದ ವ್ಯವಹಾರ, ಮೆಡಿಸಿನ್ ಔಷಧಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ, ಔಷಧಿಯನ್ನು ಸಿಂಪಡಿಸುವ ಸಲಕರಣೆಗಳ ವ್ಯವಹಾರಗಳಲ್ಲಿ ಹೆಚ್ಚಿನ ಧನಲಾಭ ಬರುತ್ತದೆ. ಕುಂಭ ರಾಶಿಯ ಕಬ್ಬು ಬೆಳೆಗಾರರಿಗೆ ಮಾರ್ಚ್ ತಿಂಗಳಿನಲ್ಲಿ ಉತ್ತಮ ಫಲ ಸಿಗಲಿದೆ. ಹುರುಳಿ, ನೆಲಗಡಲೆ, ತೊಗರಿ, ದವಸಧಾನ್ಯ, ಬಿತ್ತನೆ ಬೀಜಗಳ ವ್ಯವಹಾರದಲ್ಲಿ ತೊಡಗಿರುವವರಿಗೆ ಆರ್ಥಿಕ ಧನಲಾಭ ಉಂಟಾಗುತ್ತದೆ.

ನೀರಿಗೆ ಸಂಬಂಧಿಸಿದಂತೆ ನೀರಿನ ಬಾಟಲ್ ವ್ಯವಹಾರ, ಬಾಟಲ್ ವಿತರಕರಿಗೆ ಹಾಗೂ ತಂಪಾದ ಪಾನೀಯ ಬಿಸಿನೆಸ್ ಮಾಡುವವರಿಗೆ ಲಾಭದಾಯಕವಾಗಿದೆ. ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಹೆಚ್ಚಿನ ಧನಲಾಭ, ದೈವಾನುಕೂಲ ಆಗುತ್ತದೆ. ಪ್ರತಿದಿನ ಈ ರಾಶಿಯವರು ದೇವರ ಧ್ಯಾನ, ದೇವರ ಶ್ಲೋಕ ಹೇಳುವುದರಿಂದ ಕೆಲವು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಮಾಹಿತಿ ಮಾರ್ಚ್ ತಿಂಗಳಿನ ಬಗ್ಗೆ ಈಗಲೆ ತಿಳಿಯಬಹುದು. ನೀವು ಓದಿ ನಿಮ್ಮ ಸ್ನೇಹಿತರಲ್ಲಿ ಹಾಗೂ ಸಂಬಂಧಿಕರಲ್ಲಿನ ಕುಂಭ ರಾಶಿಯವರಿಗೆ ಈ ಮಾಹಿತಿಯನ್ನು ತಿಳಿಸಿ.

Leave A Reply

Your email address will not be published.