ಬಹಳ ಮಂದಿ ತಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸುವುದಕ್ಕೇ ಹೆದರುತ್ತಾರೆ. ಇನ್ನು ಭವಿಷ್ಯದ ಬಗ್ಗೆ ಕೇಳುವುದಕ್ಕೆ ಒಂದಕ್ಕೆ ನಾಲ್ಕು ಸಲ ಯೋಚಿಸುತ್ತಾರೆ. ಎಲ್ಲಿ ಯಾವುದೋ ದೋಷ ಹೇಳಿಬಿಡುತ್ತಾರೋ, ದೊಡ್ಡ ಮಟ್ಟದ ವಿಪರೀತ ಖರ್ಚಿನ ಹೋಮ ಹವನ ಮಾಡಿಸಿ ಎಂದು ಹೇಳುತ್ತಾರೋ ಎಂಬ ಅಂಜಿಕೆ ಅವರದು. ಇದೇ ಕಾರಣಕ್ಕೆ ಸಮಸ್ಯೆ ಕುತ್ತಿಗೆಗೆ ಬಂದು ನಿಲ್ಲುವ ತನಕ ಜ್ಯೋತಿಷಿಗಳ ಬಳಿ ಹೋಗುವುದಿಲ್ಲ. ಇರಲಿ, ಇದು ಅವರವರ ಇಷ್ಟ.

ಕನಿಷ್ಠ ಪಕ್ಷ ಮಾಡಿಸಿಕೊಳ್ಳಲೇ ಬೇಕಾದ ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳುತ್ತಾರಾ ಅಂದರೆ, ಅದು ಇಲ್ಲ. ಏನಿದು ಕಡ್ಡಾಯವಾಗಿ ಮಾಡಿಸಲೇ ಬೇಕಾದ ಶಾಂತಿಪರಿಹಾರ ಎಂಬ ಪ್ರಶ್ನೆ ಮೂಡುತ್ತದೆ. ಎಲ್ಲವನ್ನೂ ತಿಳಿಸಲು ಹೋಗುವುದಿಲ್ಲ. ಈ ಲೇಖನದಲ್ಲಿ ಕುಜ ರಾಹು ಸಂಧಿ ಬಗ್ಗೆ ಮಾತ್ರ ತಿಳಿಸಲಾಗುತ್ತದೆ. ಅದನ್ನು ತಿಳಿದುಕೊಂಡು, ಸರಿಯಾದ ಸಮಯಕ್ಕೆ ಶಾಂತಿ ಮಾಡಿಸಿಕೊಂಡರೆ ಬಹಳ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಏನಿದು ಕುಜ ರಾಹು ಸಂಧಿ ಎಂಬಿತ್ಯಾದಿ ವಿವರಗಳಿಗೆ ಮುಂದೆ ಓದಿ.

ಕುಜ-ರಾಹು ಸಂಧಿಯ ಸಮಯದಲ್ಲಿ ಆ ಜಾತಕದವರಿಗೆ ವಿವಿಧ ರೀತಿಯ ಸಂಕಷ್ಟಗಳು ತಲೆದೋರುತ್ತವೆ. ಅಗ್ನಿ ಅವಘಡ, ವಿದ್ಯಾಭ್ಯಾಸಕ್ಕೆ ಅಡಚಣೆ, ಅವಮಾನ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ರಾಹು ಬೃಹಸ್ಪತಿ ಗ್ರಹ ಸಂಧಿ ಸಮಯದಲ್ಲಿ ಶಸ್ತ್ರಚಿಕಿತ್ಸೆ, ಆಪ್ತರು ಅಗಲುವುದು, ಭೂಮಿ ನಷ್ಟ ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳು, ಅಪಘಾತ ಸಾಧ್ಯತೆಗಳು ಇರುತ್ತವೆ. ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ, ಪಿತ್ರಾರ್ಜಿತವಾದ ಆಸ್ತಿ ನಷ್ಟ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಫಲಗಳನ್ನು ಅನುಭವಿಸಬೇಕಾಗುತ್ತದೆ.

ರಾಹುವು ಸೂರ್ಯನು ನೀಡುವಂತಹ ಎಲ್ಲಾ ಭೌತಿಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದರೆ ಸೂರ್ಯನು ಆ ರಾಶಿಯಲ್ಲಿ ಸಕಾರಾತ್ಮಕವಾಗಿ ಬಲವಾಗಿ ಸ್ಥಿತನಾಗಿದ್ದರೆ ಉದಾಹರಣೆಗೆ ಮೇಷ, ಸಿಂಹ ಅಥವಾ ವೃಶ್ಚಿಕ ರಾಶಿಯಲ್ಲಿ ದ್ದರೆ ಈ ರಾಶಿಯವರು ಸಂತೋಷವನ್ನು ಕಾಣುತ್ತಾರೆ. ಆದರೆ ತುಲಾ ರಾಶಿಯಲ್ಲಿ ರಾಹು ಮತ್ತು ಸೂರ್ಯ ಸ್ಥಿತವಾಗಿದ್ದರೆ ಸೂರ್ಯನ ಶಕ್ತಿಯನ್ನು ರಾಹು ಹೀರಿಕೊಳ್ಳುತ್ತಾನೆ. ಈ ರಾಶಿಯವರಿಗೆ ಜೀವನದಲ್ಲಿ ಉತ್ಸಾಹ, ಪ್ರೇರಣೆಯೇ ಇರುವುದಿಲ್ಲ. ಇತರ ರಾಶಿಚಿಹ್ನೆಗಳಲ್ಲಿ ರಾಹು ಅಹಂನ್ನು ಹೆಚ್ಚಿಸುತ್ತಾನೆ. ಈ ರಾಶಿಯವರು ದೈಹಿಕವಾಗಿ ಬಲಶಾಲಿಯಾಗುತ್ತಾರೆ. ಪ್ರಬಲ ಪ್ರಭಾವೀ ವ್ಯಕ್ತಿಗಳೊಂದಿಗೆ ಇರುವುದನ್ನು ಆನಂದಿಸುತ್ತಾರೆ, ಜೊತೆಗೆ ಇನ್ನಷ್ಟು ಅಹಂ ಹೆಚ್ಚಾಗುವುದು. ಇತರರ ಮೇಲಿರುವ ಸಹಾನುಭೂತಿ ಕಡಿಮೆಯಾಗುವುದು.

ಚಂದ್ರನೊಂದಿಗೆ ರಾಹುವಿನ ಸಂಯೋಗದಿಂದ ಆ ರಾಶಿಯವರ ಊಹೆಗಳು, ಕಲ್ಪನೆಗಳು ಹೆಚ್ಚಾಗುವುದು. ಇದರೊಂದಿಗೆ ಅತಿಮಾನುಷ ಅನುಭವಗಳು, ದೆವ್ವದ ಕನಸು, ಸ್ತ್ರೀ ಸಂಬಂಧಿಗಳೊಂದಿಗೆ ಅಸಮಾಧಾನಗಳಿಗೆ ಕಾರಣವಾಗುತ್ತದೆ. ಹೃದಯಕ್ಕೆ ನೋವುಂಟು ಮಾಡುವ ಘಟನೆಗಳು, ಮಾನಸಿಕ ಅಶಾಂತಿ, ಗೊಂದಲದ ಕನಸುಗಳು, ನಿದ್ರಾಹೀನತೆಯ ಸಮಸ್ಯೆಯೂ ಕಾಡುತ್ತದೆ. ಹಿರಿಯರೊಂದಿಗಿನ ಸಂಬಂಧಗಳು ಹದಗೆಡಬಹುದು. ಧನಾತ್ಮಕ ಪರಿಣಾಮಗಳೆಂದರೆ ಸೃಜನಶೀಲತೆ, ಉತ್ತಮ ಸಂವಹನ ಕೌಶಲ್ಯವನ್ನು ಸಾಧಿಸುವರು.

ರಾಹು ಮತ್ತು ಮಂಗಳನ ಸಂಯೋಗ ಇದು ಜ್ವಾಲಾಮುಖಿಯಂತಹ ಸಂಯೋಜನೆಯಾಗಿದ್ದು, ರಾಹು ಮತ್ತು ಮಂಗಳನು ಸ್ಥಿತವಾಗುವ ರಾಶಿಯವರು ಆಕ್ರಮಣಶೀಲ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಹಿಂಸಾತ್ಮಕ ನಡವಳಿಕೆ, ಅಹಂ ಹೆಚ್ಚಾಗುವುದು. ವ್ಯಕ್ತಿಗಳು ತಮ್ಮ ಜನ್ಮ ಕುಂಡಲಿಯಲ್ಲಿ ಇಂತಹ ಸಂಯೋಜನೆ ಹೊಂದಿದ್ದರೆ ತಮ್ಮ ಆಲೋಚನೆಗಳು, ಪದಗಳು, ಕಾರ್ಯಗಳ ಮೇಲೆ ಸಾಕಷ್ಟು ಸ್ವಯಂ ನಿಯಂತ್ರಣವನ್ನು ಹೊಂದಿರಬೇಕು. ರಾಹುನೊಂದಿಗೆ ಬುಧನ ಸಂಯೋಗವು ಕಲ್ಪನೆ, ಪ್ರಯೋಗಾತ್ಮಕ ಇಚ್ಛಾಶಕ್ತಿ ಹಾಗೂ ಕ್ರಾಂತಿಕಾರಿ ವಿಚಾರಗಳನ್ನು ತೆರೆದಿಡುತ್ತದೆ. ರಾಹು ಮತ್ತು ಬುಧನು ಸ್ಥಿತನಾಗಿರುವ ಮನೆಯ ವ್ಯಕ್ತಿಯು ಕೆಲಸದಲ್ಲಿ ಲಾಭದಾಯಕತೆಯನ್ನು ಸೂಚಿಸುತ್ತದೆ.

ಬುಧನು ದುರ್ಬಲನಾಗಿದ್ದರೆ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಲು ಕಷ್ಟವಾಗುವುದು. ಅನವಶ್ಯಕ ಮಾತು, ಹತಾಶೆ, ಏಕತಾನತೆ, ಮತ್ತೆ ಮತ್ತೆ ಅದೇ ಯೋಚನೆಗಳು ವ್ಯಕ್ತಿಯನ್ನು ಆವರಿಸುತ್ತದೆ. ರಾಹು ಮತ್ತು ಗುರುವಿನ ಸಂಯೋಗವನ್ನು ಗುರು ಚಾಂಡಾಲ ಯೋಗವೆಂದು ಕರೆಯುತ್ತಾರೆ. ಇದು ಅತ್ಯಂತ ಕೆಟ್ಟ ಸಂಯೋಜನೆಯೂ ಧನುಸ್ಸು ರಾಶಿ ಹಾಗೂ ಮೀನ ರಾಶಿಯಲ್ಲಿವ ಈ ಸಂಯೋಗ ನಡೆದರೆ ಅದರ ಪರಿಣಾಮವು ಅತೀ ಮಿತಿಮೀರುವುದು. ಗುರುವಿನ ಗುಣವಾದ ಜ್ಞಾನ ಹಾಗೂ ಬುದ್ಧಿವಂತಿಕೆಯು ರಾಹುವಿನ ಪ್ರಭಾವದಿಂದ ದಾರಿ ತಪ್ಪುತ್ತದೆ. ಧಾರ್ಮಿಕ ಮುಖ್ಯಸ್ಥರು, ಆಧ್ಯಾತ್ಮಿಕತೆ, ಬರಹಗಾರರು ಹಾಗೂ ವಾಗ್ಮಿಗಳ ಅನುಯಾಯಿಗಳು, ಬೆಂಬಲಗಾರರು ದಾರಿತಪ್ಪುವ ಸಂಭವ ಹೆಚ್ಚು. ಗುರುವು ಈ ಸ್ಥಾನದಲ್ಲಿ ದುರ್ಬಲನಾದರೆ ಸಾಮಾಜಿಕ ಜೀವನ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಜನಪ್ರಿಯತೆ ಕಡಿಮೆಯಾಗುವುದು.

ರಾಹುವಿನೊಂದಿಗೆ ಶುಕ್ರನ ಸಂಯೋಗವು ನಟರು, ಬರಹಗಾರರು, ಗಾಯಕರು, ನರ್ತಕರು ಮತ್ತು ಸಂಗೀತಗಾರರಿಗೆ ಒಳ್ಳೆಯ ಫಲವನ್ನು ನೀಡುವುದು. ಆದರೆ ಚರ್ಮದ ಅಲರ್ಜಿ ಕಂಡುಬರಬಹುದು. ಕೆಲವರು ತಮ್ಮ ಜೀವನದಲ್ಲಿ ಸರಿಯಾದ ಸಂಗಾತಿಯನ್ನು ಹುಡುಕುವಲ್ಲಿ ವಿಫಲರಾಗುತ್ತಾರೆ. ಸರಿಯಾದ ವ್ಯಕ್ತಿಗಳನ್ನು ಬಿಟ್ಟು ತಪ್ಪು ಆಯ್ಕೆಯನ್ನು ಮಾಡುತ್ತಾರೆ. ಶುಕ್ರನು ಲೈಂಗಿಕ ಪ್ರವೃತ್ತಿಯನ್ನು ನಿಯಂತ್ರಿಸುತ್ತದೆ. ಜೊತೆಗೆ ವೀರ್ಯ ಹಾಗೂ ಅಂಡಾಶಯದ ಉತ್ಪಾದನೆಯಲ್ಲೂ ಪ್ರಭಾವ ಬೀರುವುದು. ಈ ಸಂಯೋಜನೆಯು ಅತಿಯಾದ ಲೈಂಗಿಕಾಸಕ್ತಿಗೆ ಕಾರಣವಾಗಬಹುದು. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ದಶೆ ಬದಲಾಗುವಾಗ ಈ ‘ಸಂಧಿ ಶಾಂತಿ’ ಮಾಡಲಾಗುತ್ತದೆ.

ಹಾಗಂತ ಎಲ್ಲ ಗ್ರಹಗಳಿಗೂ ಮಾಡಿಸುವುದಿಲ್ಲ. ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ, ಇನ್ನು ರಾಹುವಿನ ದಶೆ ಮುಗಿದು ಗುರು ದಶೆಯ ಶುರುವಿನಲ್ಲಿ, ಶುಕ್ರ ದಶೆಯ ನಂತರ ರವಿ ದಶೆ ಶುರುವಿನಲ್ಲಿ ಶಾಂತಿ ಮಾಡಿಸಿಕೊಳ್ಳಲಾಗುತ್ತದೆ. ಇವುಗಳನ್ನು ಕುಜ ರಾಹು ಸಂಧಿ ಶಾಂತಿ, ರಾಹು ಬೃಹಸ್ಪತಿ ಸಂಧಿ ಶಾಂತಿ ಹಾಗೂ ಶುಕ್ರಾದಿತ್ಯ ಸಂಧಿ ಶಾಂತಿ ಎನ್ನಲಾಗುತ್ತದೆ. ಜನ್ಮ ಜಾತಕದಲ್ಲಿ ದಶಾ ಭುಕ್ತಿ ವಿವರಗಳು ಇರುತ್ತವೆ. ಅದರಲ್ಲಿ ನೋಡಿದಾಗ ಈ ಸಂಧಿ ಸಮಯ ಯಾವುದು ಎಂದು ತಿಳಿಯುತ್ತದೆ. ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ರಾಹು ಪಾಪಗ್ರಹ ದೃಷ್ಟನಾದರೆ ತನ್ನ ಮಹಾದಶೆ ಅಥವಾ ಅಂತರ ದೆಶೆಯಲ್ಲಿ ಕಳ್ಳತನ ಆಗಿ ನಷ್ಟ, ವೃಣಾದಿ ಆರೋಗ್ಯ ಹಾನಿ ಹಾಗೂ ಸರ್ಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳಿಂದ ವೈರತ್ವ, ನೆಂಟರಿಷ್ಟರು ಹಾಗೂ ಬಂಧುಗಳಿಂದ ಜಗಳ, ಹೆಂಡತಿಯೊಂದಿಗೆ ವಿರಸ, ಮಕ್ಕಳೊಂದಿಗೆ ಮನಸ್ತಾಪ ಇತ್ಯಾದಿ ತೊಂದರೆಗಳನ್ನು ನೀಡುತ್ತಾನೆ.

ಇಲ್ಲಿ ಅನುಭವೋಕ್ತಿಯಂತೆ ಗಮನಿಸಲೇಬೇಕಾದ ಅಂಶ ಎಂದರೆ ರಾಹು ದೆಶೆಯಲ್ಲಿ ರಾಹು ಜಾತಕದಲ್ಲಿ ದೋಷ ಪ್ರದನಾಗಿದ್ದರೆ ನ್ಯಾಯಾಲಯಗಳಿಗೆ ಅಲೆದಾಟವನ್ನೂ ಉಂಟುಮಾಡುತ್ತಾನೆ. ಇದೇ ರಾಹು ಪ್ರಯಾಣ ಕಾರಕನೂ ಆಗಿರುವುದರಿಂದ ಜಾತಕದಲ್ಲಿ ಹತ್ತನೇ ಮನೆಯಲ್ಲಿ ಇದ್ದರೆ ಉದ್ಯೋಗ ನಿಮಿತ್ತ ಹತ್ತಾರು ಸ್ಥಳಗಳಿಗೆ ಪ್ರಯಾಣವನ್ನು ನೀಡುತ್ತಾನೆ. ವಿದೇಶ ಪ್ರಯಾಣ ಯೋಗದಲ್ಲಿ ರಾಹು ಬಹಳ ಪ್ರಮುಖ ಪಾತ್ರ ವಹಿಸುತ್ತಾನೆ. ಆದ್ದರಿಂದಲೇ ವಿದೇಶದಲ್ಲಿ ಉದ್ಯೋಗ ಮಾಡುವ ಉತ್ತಮ ವಿದ್ಯಾರ್ಹತೆ ಅನುಭವ ಎರಡೂ ಇದ್ದರೂ ಜಾತಕದಲ್ಲಿ ರಾಹುವಿನ ಬಲದ ಕೊರತೆಯಿಂದಾಗಿ ಎಷ್ಟೋ ಜನ ವಿದೇಶಕ್ಕೆ ಹೊಗಲಾಗದೆ ಇಲ್ಲೇ ಸಿಕ್ಕ ಚಿಕ್ಕ ಕೆಲಸ ಹಾಗೂ ಕಡಿಮೆ ಸಂಬಳಕ್ಕೆ ತೃಪ್ತಿ ಪಡಬೇಕಾಗಿದೆ. ಇನ್ನು ಭೂ ವ್ಯವಹಾರ ಮಾಡುವ ಜನ ಗಮನಿಸಲೇಬೇಕಾದ ಅಂಶ ಎಂದರೆ ಭೂಮಿಯಲ್ಲಿ ರಾಹುನಡೆ ಯಾವ ಜಾಗದಲ್ಲಿ ಇರುತ್ತದೆಯೋ ಅಂಥ ಸ್ಥಳ ವಾಸಕ್ಕೆ ಯೋಗ್ಯ ಇರುವುದಿಲ್ಲ. ಅಷ್ಟೇ ಅಲ್ಲದೆ ಅದನ್ನು ಖರೀದಿಸಿದವರಿಗೆ ಆ ಜಾಗದಲ್ಲಿ ಮನೆ ಕಟ್ಟಲೂ ಆಗುವುದಿಲ್ಲ ಅಥವಾ ಅದನ್ನು ಮಾರುವುದಕ್ಕೂ ಆಗುವುದಿಲ್ಲ ಅದೇ ರಾಹು ನಡೆ ದೋಷ ಹೆಚ್ಚು ಇದ್ದರೆ ಆ ಜಾಗ ವ್ಯಾಜ್ಯದಲ್ಲಿ ಸಿಕ್ಕಿ ಅದನ್ನು ಪಡೆಯಲು ನ್ಯಾಯಾಲಯದ ಕದ ತಟ್ಟುವಂತೆ ಮಾಡುತ್ತದೆ.

ಇನ್ನು ರಾಹು ದೆಶೆ ಮನುಷ್ಯನಿಗೆ ಬರಬೇಕಾದರೆ ಕುಜದೆಶೆ ಮುಗಿದ ನಂತರವೇ. ಆದ್ದರಿಂದ ಅಲ್ಲಿ ಕುಜ-ರಾಹು ಸಂಧಿ ದೋಷ ಉಂಟಾಗುತ್ತದೆ. ಮೊದಲೇ ತಿಳಿದು ಶಾಂತಿ ಹವನ ಕರ್ಮಗಳನ್ನು ಮಾಡಿಸದೇ ಇದ್ದ ಪಕ್ಷದಲ್ಲಿ ರಾಹು ದೆಶೆಯ ಪ್ರಾರಂಭದಲ್ಲಿಯೇ ರಸ್ತೆ ಅಪಘಾತ ಅಥವಾ ಅಗ್ನಿ ಅನಾಹುತ ಆಗುವ ಸಂಭವ ಇರುತ್ತದೆ. ತನ್ನ ದಶಾಕಾಲ ಪ್ರಾರಂಭವಾದ ನಂತರ ಹದಿನೆಂಟು ವರ್ಷ ಇರುವ ರಾಹು ತನ್ನ ದಶಾಕಾಲದ ಆರಂಭದಲ್ಲಿ ನೋಡಲು ತೆಳ್ಳಗೆ ಸಣ್ಣಗೆ ಇರುವವರನ್ನು ಕೇವಲ ಎರಡು ಮೂರು ವರ್ಷಗಳಲ್ಲಿ ದಪ್ಪಗಾಗಿಸಿ ಬಿಡುತ್ತಾನೆ. ನಂತರ ತನ್ನ ದಶಾ ಕಾಲದಲ್ಲಿ ಅತ್ಯಂತ ಹೆಚ್ಚು ಹಣ ಖರ್ಚು ಮಾಡಿಸುವ ರಾಹು, ವೃಥಾ ಪ್ರಯಾಣವನ್ನೂ ಹೆಚ್ಚಿಸುತ್ತಾನೆ. ಇದರಿಂದಾಗಿ ಒಂದೇ ಓಡಾಟದಲ್ಲಿ, ಸ್ವಲ್ಪವೇ ಖರ್ಚಿನಲ್ಲಿ ಮುಗಿಯಬೇಕಾದ ಕೆಲಸಗಳು ರಾಹುದೆಶೆಯಲ್ಲಿ ಇರುವವರು ಮಾಡಲು ಕೈ ಹಾಕಿದರೆ ಹತ್ತಾರು ಓಡಾಟಗಳು, ಸಾವಿರಾರು ಅಥವಾ ಲಕ್ಷಾಂತರ ರುಪಾಯಿ ಖರ್ಚಾದ ನಂತರವೂ ಕೆಲಸ ಆಗದೇ ಚಿಂತಾಕ್ರಾಂತರಾಗಿರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!