ಕುದುರೆ ಲಾಳ ಅನ್ನೋದು ವಸ್ತು ದೋಷವನ್ನು ನಿವಾರಿಸುವ ಒಂದು ಸಾಧನವೆಂಬುದಾಗಿ ಹೇಳಬಹುದಾಗಿದೆ, ಕುದುರೆ ಲಾಳವನ್ನು ಮನೆಯಲ್ಲಿನ ಕೆಟ್ಟ ದೃಷ್ಟಿ ನಿವಾರಿಸಲು ಹಾಗೂ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಿಸಿಕೊಳ್ಳಲು ಈ ಕುದುರೆ ಲಾಳವನ್ನು ಬಳಸಿಕೊಳ್ಳುತ್ತಾರೆ. ಇದರಲ್ಲಿರುವ ಇನ್ನು ಹಲವು ವಿಶೇಷತೆ ಏನು ಇದನ್ನು ಹೇಗೆ ಬಳಸಬಹುದು ಎಂಬುದನ್ನು ಮುಂದೆ ತಿಳಿಯೋಣ.
ಮನೆಯಲ್ಲಿನ ಕೆಲವೊಂದು ವಸ್ತುಗಳು ಮನೆಯ ವಾತಾವರಣವನ್ನು ಬದಲಾವಣೆ ಮಾಡಬಲ್ಲದು ಅವುಗಳಲ್ಲಿ ಈ ಕುದುರೆ ಲಾಳ ಕೂಡ ಒಂದು ಅನ್ನೋದನ್ನ ವಾಸ್ತು ತಜ್ಞರು ಹೇಳುತ್ತಾರೆ, ಅಷ್ಟೇ ಅಲ್ಲದೆ ಕೆಲವರು ಈ ಕುದುರೆ ಲಾಳವನ್ನು ಮನೆಯಲ್ಲಿ ಕೆಲಸ ಮಾಡುವಂತ ಆಫೀಸ್ ಕಚೇರಿಗಳಲ್ಲಿ ಬಳಸುತ್ತಾರೆ. ಆರ್ಥಿಕ ಸಮಸ್ಯೆ ನಿವಾರಿಸಲು ಹಾಗೂ ವಾಸ್ತು ದೋಷ ನಿವಾರಿಸಿ ಮನೆಯಲ್ಲಿ ಧನಾತ್ಮಕ ಶಕ್ತಿ ಪಡೆಯಲು ಸಹಕಾರಿ ಈ ಕುದುರೆ ಲಾಳ.
ಮನೆಯಲ್ಲಿ ಏನಾದರು ಸಮಸ್ಯೆಗಳು ಮೇಲಿಂದ ಮೇಲೆ ಉದ್ಬವಿಸುತ್ತಿದ್ದರೆ ಈ ಕುದುರೆ ಲಾಳವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ದವಸಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬದಲ್ಲಿ ಹಾಕಿಡಿ. ಇದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇನ್ನು ಮನೆಯಲ್ಲಿ ಆರ್ಥಿಕ ಸಮಸ್ಯೆ ಏನಾದರು ಕಂಡು ಬಂದಲ್ಲಿ ಒಂದು ಶುದ್ಧವಾದ ಬಟ್ಟೆಯಲ್ಲಿ ಲಾಳವನ್ನು ಕಟ್ಟಿ ಅದನ್ನು ಲಾಕರ್ ಅಥವಾ ಹಣಕಾಸು ಇಡುವಂತ ಸ್ಥಳದಲ್ಲಿ ಇದನ್ನು ಇಡುವುದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ನಿವಾರಣೆಯಾಗುವುದು. ಗ್ರಹ ದೋಷ ನಿವಾರಣೆ ಮಾಡುತ್ತದೆ.
ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ನೇತು ಹಾಕುವುದರಿಂದ ಮನೆಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ ಹಾಗೂ ಯಾವುದೇ ಮಾಟ ಮಂತ್ರ ವಾಮಾಚಾರ ತಗಲುವುದಿಲ್ಲ. ಮುಖ್ಯವಾಗಿ ಕುದುರೆಯನ್ನು ಅಶ್ವ, ಇದನ್ನು ದೇವತೆಗಳ ವಾಹನ ಎಂದು ಪರಿಗಣಿಸುತ್ತೇವೆ.
ವಿಶೇಷವಾಗಿ ಲಕ್ಷ್ಮೀನಾರಾಯಣ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಅಶ್ವ ಹೊಲೆದವರಲ್ಲಿ ಅಭಿವೃದ್ಧಿಯಾಗುತ್ತದೆ, ಅಶ್ವದ ಲಾಳದಲ್ಲಿ ಶನೇಶ್ವರನ ಕೃಪೆ ಹಾಗೂ ಲಕ್ಷ್ಮೀನಾರಾಯಣನ ಕೃಪೆ ಇರುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಐಶ್ವರ್ಯ ನೆಲೆಸಿರುತ್ತದೆ.