ಹಿಂದು ಸಂಪ್ರದಾಯದಂತೆ ಕುಬೇರನನ್ನು ಸಂಪತ್ತಿನ ಒಡೆಯ ಎಂದು ಕರೆಯುತ್ತಾರೆ ಲಕ್ಷ್ಮೀ ಅದೃಷ್ಟ ದೇವತೆ ಆಗಿದ್ದಾಳೆ ಧನ ಕನಕಕ್ಕೆ ಪ್ರಮುಖ ಅಧಿಪತಿ ಕುಬೇರ ಎಂಬ ಮಾತಿದೆ ದಪ್ಪ ದೇಹವನ್ನು ಹೊಂದಿರುವ ಕುಬೇರನು ಚಿನ್ನಗಳಿಂದ ಅಲಂಕರಿಸಲ್ಪಟ್ಟಿದ್ದಾರೆ ತಮ್ಮ ಕೈಯಲ್ಲಿ ಚಿನ್ನದ ನಾಣ್ಯವಿರುವ ಮಡಕೆಯನ್ನು ಹಿಡಿದುಕೊಂಡಿದ್ದಾರೆ ಧನದ ಮತ್ತು ಭಂಡಾರದ ಅಧಿಪತಿ ಎಂದು ಕುಬೇರನನ್ನು ಕರೆಯುತ್ತಾರೆ

ಧನವನ್ನು ಕಾಪಾಡುವ ಅಧಿಪತಿಯಾಗಿ ಕುಬೇರನನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬುದ್ಧ ಮತ್ತು ಜೈನ ಧರ್ಮದಲ್ಲಿ ಕೂಡ ಕುಬೇರನಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ.ತಿರುಪತಿ ತಿಮ್ಮಪ್ಪನಿಗೆ ಸಾಲ ಕೊಡುವಷ್ಟು ಕುಬೇರನು ಹೊಂದಿದ್ದನು ನಾವು ಈ ಲೇಖನದ ಮೂಲಕ ಕುಬೇರನ ಜನ್ಮ ರಹಸ್ಯವನ್ನು ತಿಳಿದುಕೊಳ್ಳೋಣ.

ಆರೋಗ್ಯ ಆಯುಷ್ಯದ ಜೊತೆಗೆ ಎಲ್ಲ ಸಿರಿ ಸಂಪತ್ತಿಗೆ ಎಲ್ಲರೂ ಇಷ್ಟ ಪಡುತ್ತಾರೆ ಹಿಂದು ಸಂಪ್ರದಾಯದಂತೆ ಕುಬೇರನನ್ನು ಸಂಪತ್ತಿನ ಒಡೆಯ ಎಂದು ಕರೆಯುತ್ತಾರೆ ತಿರುಪತಿ ತಿಮ್ಮಪ್ಪನಿಗೆ ಸಾಲ ಕೊಡುವಷ್ಟು ಕುಬೇರನು ಹೊಂದಿದ್ದನು ಹಾಗೆಯೇ ಕುಬೇರೆ ಅಧಿದೇವತೆ ಎಂದೇ ಕರೆಯಲಾಗುತ್ತದೆ ದಪ್ಪ ದೇಹ ಹೊಂದಿದ್ದ ಕುಬೇರ ಹಿಂದೂ ಧರ್ಮದಲ್ಲಿ ಒಂದೇ ಅಲ್ಲದೆ ಜೈನ್ ಬೌದ್ಧ ಧರ್ಮದಲ್ಲಿ ಸಹ ಕುಬೇರನನ್ನು ಪೂಜಿಸುತ್ತಾರೆ

ಜಗತ್ತಿನ ಸಕಲ ಐಶ್ವರ್ಯುವನ್ನು ಹೊಂದಿದವನು ಕುಬೇರ ಹಲವಾರು ಜನ್ಮದಲ್ಲಿ ಮನುಷ್ಯ ರೂಪವನ್ನು ತಾಳಿ ಕುಬೇರನಾದನು ಶಿವ ಪುರಾಣದ ಪ್ರಕಾರ ಯೋಗ್ಯ ದತ್ತ ಎಂಬ ಬ್ರಾಹ್ಮಣನು ಇದ್ದನು ಅವನಿಗೆ ಗುಣನಿಧಿ ಎಂಬ ಮಗನು ಇದ್ದನು ಯೋಗ್ಯದತ್ತನು ಸದಾ ಮಾನವೀಯ ಗುಣಗಳನ್ನು ಮಗನಿಗೆ ಹೇಳಿದರೆ ಗುಣ ನಿಧಿಯು ಸದಾ ಕೆಟ್ಟ ಕೆಲಸವನ್ನು ಮಾಡುತ್ತಿದ್ದನು ಆದರೆ ತಂದೆ ಎಸ್ಟೇ ಹೇಳಿದರು ಮಗನು ಕೇಳುವುದಿಲ್ಲ ಇದರಿಂದ ಬೇಸತ್ತ ಯೋಗ್ಯದತ್ತ ಗುಣ ನಿಧಿಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ .

ಮನೆಯಿಂದ ಹೊರಗೆ ಬಂದ ಗುಣನಿಧಿಯು ಕೆಲಸ ಮಾಡಲು ಆಗದೆ ಕಳ್ಳ ತನ ಮಾಡಲು ಶುರು ಮಾಡುತ್ತಾನೆ ಹೀಗೆ ಕಳ್ಳ ತನ ಮಾಡಲು ಹೋಗುತ್ತಿರುವಾಗ ದೇಗುಲವನ್ನು ನೋಡುತ್ತಾನೆ ಆಗ ದೇಗುಲದ ಒಳಗೆ ಹೋಗುವಾಗ ತನ್ನ ಬಟ್ಟೆಯನ್ನು ಹರಿದು ದೀಪದ ಹಾಗೆ ದೇಗುಲದ ಒಳಗೆ ಹೋಗುತ್ತಾನೆ ಆದರೆ ದೇಗುಲ ಕಾಯುವ ಸೈನಿಕರು ಗುಣನಿಧಿಯನ್ನು ರಾಜನ ಬಳಿ ಕರೆದುಕೊಂಡು ಹೋಗುತ್ತಾನೆ ಅಲ್ಲಿ ರಾಜಭಟರು ಇದುವರೆಗೂ ಮಾಡಿದ ಕಳ್ಳತನದ ಬಗ್ಗೆ ರಾಜರಿಗೆ ತಿಳಿಸುತ್ತಾರೆ

ಗುಣ ನಿಧಿಗೆ ಮರಣ ದಂಡನೆಯನ್ನು ವಿಧಿಸಲಾಗುತ್ತದೆ ಆಗ ನರಕಕ್ಕೆ ಹೋಗುತ್ತಾನೆ ಅಲ್ಲಿ ಸ್ವಲ್ಪ ದಿನದ ನಂತರ ಧೂತರು ನೀನು ಶಿವನಿಗೆ ದೀಪವನ್ನು ಬೇಳಗಿರುವೆ ಆದ್ದರಿಂದ ಇನ್ನೊಂದು ಜನ್ಮ ಸಿಗುತ್ತದೆ ಆದ್ದರಿಂದ ಇನ್ನೊಂದು ಜನ್ಮದಲ್ಲಿ ಅದರೂ ಸರಿಯಾಗಿ ಇರು ಒಳ್ಳೆಯ ಕೆಲಸ ಮಾಡಿ ಸ್ವರ್ಗಕ್ಕೆ ಸೇರು ಎಂದು ಧುತರು ಹೇಳುತ್ತಾರೆ . ಮತ್ತೊಂದು ಜನ್ಮದಲಿ ಅರಿಂದಧಾಮ ಎಂಬ ರಾಜನಿಗೆ ಜನಿಸುತ್ತಾನೆ ಅಲ್ಲಿ ಧಾಮ ಎಂಬ ಹೆಸರನ್ನು ಇಡಲಾಗಿತ್ತದೆ .

ಅರಿಂದಧಾಮ ಧಾಮನಿಗೆ ಒಳ್ಳೆಯ ಶಿಕ್ಷಣ ನೀಡುತ್ತಾನೆ ಅರಿಂದಧಾಮನ ಮರಣ ನಂತರ ಧಾಮನು ಆಳ್ವಿಕೆ ಮಾಡುತ್ತಾನೆ ಹಿಂದಿನ ಜನ್ಮದಲ್ಲಿ ಪಾಪದಿಂದ ಮುಕ್ತಿ ಹೊಂದಲು ಶಿವನು ಅವಕಾಶ ನೀಡಿದ್ದಾನೆ ಹೀಗಾಗಿ ಸಾಧ್ಯ ವಾದಷ್ಟು ಒಳ್ಳೆ ಕೆಲಸ ಮಾಡಬೇಕು ಎಂದು ಧಾಮನು ರಾಜ್ಯದ ತುಂಬೆಲ್ಲ ಶಿವ ಗುಡಿಯನ್ನು ಕಟ್ಟಿಸಿದನು ಮತ್ತು ರಾಜ್ಯದ ಎಲ್ಲಾ ಜನರು ಶಿವನಿಗೆ ದೀಪ ಹಚ್ಚಲು ಹೇಳುತ್ತಾನೆ ಈತನ ಆಳ್ವಿಕೆ ಯಲ್ಲಿ ಜನರು ಸುಖ ಶಾಂತಿಯಿಂದ ಬದುಕುತ್ತಾರೆ.

ಅನೇಕ ಕಾಲದ ವರೆಗೆ ಉತ್ತಮ ಆಳ್ವಿಕೆ ನಡೆಸಿದ ಧಾಮನು ಮರಣ ಹೊಂದುತ್ತಾನೆ ಹಿಂದಿನ ಜನ್ಮದ ಪುಣ್ಯದ ಫಲವಾಗಿ ಬ್ರಹ್ಮ ದೇವನ ಪುತ್ರನಾದ ಪೂಲಸ್ಥ ನ ಮಗನಾದ ವಿಶ್ವಾಸ ನ ಮಗನಿಗೆ ವೈಷ್ರಾವಣ ಧರ್ಮ ವಂತ ಹಾಗೂ ಸತ್ಯವಂತನು ಆಗಿದ್ದನು ಸಹಸ್ರಾರು ವರ್ಷದ ವರೆಗೆ ಶಿವನ ಕುರಿತು ತಪಸ್ಸನ್ನು ಮಾಡಿದನು ಈತನ ತಪಸ್ಸಿಗೆ ಶಿವನು ಮೆಚ್ಚಿ ಪ್ರತ್ಯಕ್ಷನಾಗಿ ಆತನನ್ನು ಸಂಪತ್ತಿನ ಓಡೆಯನನ್ನಾಗಿ ಮಾಡುತ್ತಾನೆ

ಶಿವ ಪುರಾಣದಲ್ಲಿ ಈ ರೀತಿ ಕುಬೇರನ ಜನ್ಮ ಪುರಾಣವನ್ನು ತಿಳಿಸಲಾಗಿದೆ ಕಳ್ಳನಾಗಿದ್ದ ಗುಣನಿಧಿಯು ಶಿವನ ಅನುಗ್ರಹದಿಂದ ಕುಬೇರನಾದನು ಹಿಂದೂ ಪುರಾಣದ ಪ್ರಕಾರ ಕುಬೇರನನ್ನು ಪೂಜಿಸಿದರೆ ಮನೆಯಲ್ಲಿ ಈ ಐಶ್ವರ್ಯ ತುಂಬು ತುಳುಕುತ್ತದೆ ಹೀಗೆ ಕಳ್ಳನು ಸಹ ಒಳ್ಳೆಯವನಾಗಿ ಶಿವನಿಂದ ಸಂಪತ್ತಿನ ಒಡೆಯನಾದನು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!