KSP Constable new recruitment 2023: ಒಂದು ವೇಳೆ ನೀವು ಕೂಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ಆಸೆ ಇದ್ದರೆ, ಶೀಘ್ರದಲ್ಲೇ ನಿಮ್ಮ ಆಸೆ ನೆರವೇರವ ಸೂಚನೆ ಸಿಕ್ಕಿದೆ. ಒಟ್ಟು 2400 ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

ಮೈಸೂರಿನ ಸಿಎಆರ್ ಗ್ರೌಂಡ್ ನಲ್ಲಿ ಶನಿವಾರ ಪೊಲೀಸ್ ಸಂಸ್ಕರಣಾ ದಿನಾಚರಣೆ ನಡೆಯಿತು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಆಗ ಮಾತನಾಡಿದ ಸಿಎಂ ಅವರು 2400 ಕಾನ್ಸ್ಟೇಬಲ್ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ. “ಈಗ ಖಾಲಿ ಇರುವ 2400 ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ.

ಗೃಹ 2025 ಎನ್ನುವ ಯೋಜನೆಯಲ್ಲಿ ಒಟ್ಟು 2,225 ಪೊಲೀಸ್ ಪೇದೆಗಳ ವಸತಿ ವ್ಯವಸ್ಥೆಗಾಗಿ 450 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗುತ್ತದೆ..” ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಇದಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು, ಮತ್ತು ಅವರ ಮನೆಯವರಿಗಾಗಿ ಆರೋಗ್ಯ ಭಾಗ್ಯ ಯೋಜನೆಯಲ್ಲಿ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ..

KSP Constable new recruitment 2023

ಅಷ್ಟೇ ಅಲ್ಲದೇ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವಕಾರು ಮತ್ತು ಅವರ ಪತ್ನಿ ಹಾಗೂ ಕುಟುಂಬಕ್ಕೆ ಅನಾರೋಗ್ಯ ಉಂಟಾದರೆ ಚಿಕಿತ್ಸೆಗಾಗಿ 25ಕೋಟಿ ರೂಪಾಯಿಯನ್ನು ಅನುದಾನ ನೀಡಲಾಗಿದೆ. ಜೊತೆಗೆ ನಮ್ಮ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕಾಗಿ 7 ಕಡೆಗಳಲ್ಲಿ Police Public School ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ ಪೊಲೀಸ್ ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತದೆ.

ಸ್ಪೆಷಲ್ ಗುಂಪು ಯೋಜನೆಯಲ್ಲಿ 25 ಲಕ್ಷ ಬಿಡುಗಡೆ ಆಗಲಿದೆ, ಹಾಗೆಯೇ ಸರ್ವಿಸ್ ನಲ್ಲಿರುವ ಪೊಲೀಸ್ ಹುತಾತ್ಮರಾದರೆ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ ಸಿದ್ದರಾಮಯ್ಯ ಅವರು. ಮುಂದುವರೆದು ಮಾತನಾಡಿ, “ಭಾರತದಲ್ಲಿ ನಮ್ಮ ರಾಜ್ಯದ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಕಾನೂನು ರಕ್ಷಣೆಯ ವೇಳೆ ಪೊಲೀಸರು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಾರೆ.

ಕೆಲವೊಮ್ಮೆ ಪ್ರಾಣ ಕಳೆದುಕೊಳ್ಳುವ ಹಾಗೆ ಆಗುತ್ತದೆ, ನಮ್ಮ ದೇಶದಲ್ಲಿ ಆಗಸ್ಟ್ 23ರಿಂದ ಸೆಪ್ಟೆಂಬರ್ 22ರವರೆಗು 189 ಪೊಲೀಸರು ಕರ್ತವ್ಯದಲ್ಲಿ ಇರುವಾಗ ಮರಣ ಹೊಂದಿದ್ದಾರೆ. ನಮ್ಮ ರಾಜ್ಯದ 16 ಪೊಲೀಸ್ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ..” ಎಂದು ಹೇಳಿದ್ದಾರೆ ಸಿಎಂ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದು ಸಿಹಿ ಸುದ್ದಿ ಆಗಿದ್ದು, ಶೀಘ್ರದಲ್ಲೇ ನೀವು ಕೆಲಸಕ್ಕೆ ಅಪ್ಲೈ ಮಾಡಬಹುದು. ಇದನ್ನೂ ಓದಿ ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಆಗಿರುವ ವರ್ತೂರ್ ಸಂತೋಷ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!