Bigg Boss Varthur Santhosh Property: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 2 ವಾರಗಳ ಸಮಯ ಕಳೆದಿದೆ. ರೈತನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಅವರನ್ನು ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಹೊರತಂದು, ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಈ ಹಿಂದೆ ಯಾವ ಭಾಷೆಯ ಯಾವುದೇ ಸೀಸನ್ ನಲ್ಲಿ ಕೂಡ ಈ ರೀತಿಯ ಘಟನೆ ನಡೆದಿರಲಿಲ್ಲ. ಈ ರೀತಿ ಅರ್ಧದಲ್ಲೇ ಹೊರಬಂದಿರುವುದು ಇದೇ ಮೊದಲು. ಇದೀಗ ಸೆನ್ಸೇಷನ್ ಆಗಿರುವ ವರ್ತೂರ್ ಸಂತೋಷ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

ವರ್ತೂರ್ ಸಂತೋಷ್ ಪಕ್ಕಾ ಹಳ್ಳಿಯ ರೈತ, ವ್ಯವಸಾಯ ಮಾಡಿ ಜೀವನ ಸಾಗುತ್ತಿರುವ ವ್ಯಕ್ತಿ ಮಾತ್ರ ಎಂದುಕೊಂಡಿದ್ದರೆ, ಆ ಊಹೆ ಖಂಡಿತ ತಪ್ಪು. ವರ್ತೂರ್ ಸಂತೋಷ್ ಬಹಳ ಶ್ರೀಮಂತ ವ್ಯಕ್ತಿ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಇರಬೇಕು, ಹಳ್ಳಿಕಾರ್ ತಳಿ ಹಸುವಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಬಂದಿದ್ದ ವರ್ತೂರ್ ಸಂತೋಷ್ ಬಹಳ ದೊಡ್ಡ ಮನೆತನಕ್ಕೆ ಸೇರಿದ ಶ್ರೀಮಂತ ವ್ಯಕ್ತಿ ಎಂದರೆ ತಪ್ಪಲ್ಲ.

Bigg Boss Varthur Santhosh Property

ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕೆ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ, ಆದರೆ ಅವರ ಕುಟುಂಬದವರು ಅದು ಹುಲಿ ಉಗುರು ಅಂತ ಸಂತೋಷ್ ಗೆ ಗೊತ್ತಿರಲಿಲ್ಲ, ಇದೆಲ್ಲಾ ಯಾರೋ ಬೇಕು ಅಂತ ಮಾಡಿರೋದು ಎಂದು ಮಾಧ್ಯಮದ ಎದುರು ಹೇಳಿಕೆ ನೀಡಿದ್ದಾರೆ. ಈ ಒಂದು ವಿಚಾರದಿಂದ ಭಾರಿ ಸುದ್ದಿ ಆಗಿರುವ ವರ್ತೂರ್ ಸಂತೋಷ್ ಅವರ ಆಸ್ತಿ ಬಗ್ಗೆ ತಿಳಿಯೋಣ..

ವರ್ತೂರ್ ಸಂತೋಷ್ ಅವರ ಆದಾಯದ ಮೂಲ ಹಳ್ಳಿಯಲ್ಲಿ ವ್ಯವಸಾಯ ಮಾಡುವುದು ಮಾತ್ರವಲ್ಲ. ವರ್ತೂರ್ ಸಂತೋಷ್ ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಲ್ಲಿ ಕೂಡ ಭಾರಿ ಲಾಭ ಗಳಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅಕ್ಕಪಕ್ಕದಲ್ಲಿಯೇ ಎರಡೆರಡು ಅಪಾರ್ಟ್ಮೆಂಟ್ಸ್ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಕೋಲಾರದಲ್ಲಿ ಇವರ ಹೆಸರಿನಲ್ಲಿ ಸುಮಾರು 14 ಎಕರೆ ಫಾರ್ಮ್ ಹೌಸ್ ಕೂಡ ಇದೆ. ಇವರ ಮನೆ, ಧರಿಸುವ ಆಭರಣಗಳು ಇದೆಲ್ಲವನ್ನು ನೋಡಿದರೆ ವರ್ತೂರ್ ಸಂತೋಷ್ ಅವರ ಆಸ್ತಿ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಊಹಿಸಿಕೊಳ್ಳಬಹುದು.

By AS Naik

Leave a Reply

Your email address will not be published. Required fields are marked *