ರಾಜ್ಯದ ರೈತರು ಎಫ್ ಐ ಡಿ (FID)(unique farmer ID) ಮಾಡಿಸಿಕೊಳ್ಳುವುದರ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ. ನೀವೇನಾದರೂ ರೈತರಾಗಿದ್ದರೆ ಮೊದಲು ನಿಮ್ಮ ಬಳಿ FID ಆಗಿದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ. ಇದು ಇದ್ದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಜಮಾ ಆಗುತ್ತದೆ. ಮತ್ತು ಸರ್ಕಾರದ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇಲ್ಲದಿದಲ್ಲಿ ನಿಮಗೆ ಬ್ಯಾಂಕ್ ಖಾತೆಗೆ ಯಾವುದೇ ಹಣ ಜಮಾ ಆಗುವುದಿಲ್ಲ ಮತ್ತು ನೀವು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳದೇ ಖಂಡಿತ ವಂಚಿತರಾಗುತ್ತಿರಿ.

FID ಎಂದರೆ, ಪ್ರತಿ ಜನಸಾಮಾನ್ಯರಿಗೂ ಹೇಗೆ ಆಧಾರ್ ಕಾರ್ಡ್ ಗುರುತಿನ ಚೀಟಿ ಇರುತ್ತದೆಯೋ ಹಾಗೆ ಪ್ರತಿ ರೈತನಿಗೂ ಈ FID ಎಂಬುದು ಗುರುತಿನ ಚೀಟಿ ಆಗಿರುತ್ತದೆ. ಇದರ ಮೂಲಕ ರೈತರು ಸರ್ಕಾರದ ಪ್ರಯೋಜನಗಳನ್ನು ಸುಲಭವಾಗಿ ಪಡೆಯಬಹುದು. ಕೃಷಿ ಇಲಾಖೆಗೆ ಸಂಬಂಧಿಸಿದ ಮತ್ತು ಕೃಷಿಗೆ ಸಬಂದ ಪಟ್ಟ ಮಾಹಿತಿಗೆ Farmers Registration and unified beneficiary information systems (FRUITS ) ಇದರ ಅಡಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸುವುದು ರೈತರಿಗೆ ಕಡ್ಡಾಯವಾಗಿದೆ. ಅಂದರೆ ಪ್ರತಿಯೊಬ್ಬ ರೈತ FIDಮತ್ತು FRUITS ರೆಜಿಸ್ಟ್ರೇಷನ್ ಮಾಡಿಸಿರಲೇಬೇಕು.

ಕೃಷಿಕ ಈ ಒಂದು ಪೋರ್ಟಲ್ ಅಲ್ಲಿ ತನ್ನ ಕೃಷಿ ಜಮೀನಿನ ವಿವರಗಳನ್ನು ನೋಂದಾಯಿಸಿದರೆ ರೈತನಿಗೆ FID ನಂಬರ್ ಸಿಗುತ್ತದೆ. ಮತ್ತು ಸರ್ಕಾರ ನೀಡುವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದರಿಂದ FID ಮಾಡದೆ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ FID ಮಾಡಿಸಬೇಕಾಗುತ್ತದೆ.

ಇನ್ನು ಕಲಬುರಗಿ ಜಿಲ್ಲೆಯಲ್ಲಿ FID ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮಾ ಆಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಇನ್ನೂ ಎಫ್‌ಐಡಿ(FID) ಮಾಡಿಸದೇ ಇರುವ ರೈತರಿಗೆ ಬರ ಪರಿಹಾರ, ತೊಗರಿ ನೆಟೆ ರೋಗ ಪರಿಹಾರ ಮೊತ್ತ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಏಕೆಂದರೆ ಈ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರಿಂದ
FID ಮಾಡಿಸುವುದು ಕಡ್ಡಾಯವಾಗಿದೆ.

ಆದ್ದರಿಂದ ಇದುವರೆಗೂ ಎಫ್‌ಐಡಿ (FID)ಮಾಡಿಸದೇ ಇರುವ ಜಿಲ್ಲೆಯ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ (FID) ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ. ಇದನ್ನೂ ಓದಿ ಇನ್ಮುಂದೆ ಹೊಲದಲ್ಲಿ ಬಂಡಿ ಹಾಗೂ ಕಾಲು ದಾರಿ ಮುಚ್ಚುವ ಹಾಗಿಲ್ಲ, ಸರ್ಕಾರದಿಂದ ಹೊಸ ಆದೇಶ

By AS Naik

Leave a Reply

Your email address will not be published. Required fields are marked *