ಶ್ರೀಮತಿ ಪುಷ್ಪ ದೇವರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೊಮ್ಮಾವರ ಎಂಬ ಊರಿನಲ್ಲಿ ಒಂದು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದು ಲಕ್ಷ ಆದಾಯ ಗಳಿಸುತ್ತಾರೆ ಹಾಗಾದರೆ ದಾಳಿಂಬೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಮೊದಲು ಪುಷ್ಪ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹೀರೆ ಗಿಡ ಸೋರೆ ಗಿಡವನ್ನು ಬೆಳೆಸುತ್ತಿದ್ದರು ಆದರೆ ಅದರಿಂದ ನಿರೀಕ್ಷಿತ ಆದಾಯ ಬರಲಿಲ್ಲ, ಆ ಸಮಯದಲ್ಲಿ ಪುಷ್ಪ ಅವರ ಸ್ನೇಹಿತರೊಬ್ಬರು ತಮ್ಮ ಜಮೀನಿನಲ್ಲಿ ದಾಳಿಂಬೆ ಬೆಳೆ ಬೆಳೆದು ಫಸಲು ಪಡೆದಿದ್ದರು ಅದನ್ನು ನೋಡಿ ಇವರು ತಮ್ಮ ಜಮೀನಿನಲ್ಲಿಯೂ ದಾಳಿಂಬೆ ಬೆಳೆಯಬೇಕು ಎಂದು ಅವರ ಬಳಿ ಗಿಡ ತರಿಸಿಕೊಂಡರು. ಪುಷ್ಪ ಅವರಿಗೆ ದಾಳಿಂಬೆ ಬೆಳೆಯ ಬಗ್ಗೆ ಏನು ಗೊತ್ತಿರಲಿಲ್ಲ ಅವರ ಸ್ನೇಹಿತರ ಸಲಹೆಯನ್ನು ಪಡೆದುಕೊಂಡು ಅನುಭವ ಇಲ್ಲದೆ ಇರುವುದರಿಂದ ಒಬ್ಬ ಡಾಕ್ಟರ್ ಸಲಹೆ ಪಡೆಯಬೇಕಾಗುತ್ತದೆ.
ದಾಳಿಂಬೆ ಗಿಡವನ್ನು ಮಣ್ಣಿಗೆ ಹಾಕಿದ ನಂತರ ಕಡಿಮೆ ಸಮಯದಲ್ಲಿ ಬೆಳೆಯಿತು ಬೆಳೆಯುತ್ತಿದ್ದಂತೆ ಸ್ನೇಹಿತರು ಹಾಗೂ ಡಾಕ್ಟರ್ ಕಟಿಂಗ್ ಮಾಡಬೇಕು ಎಂದು ಹೇಳಿದರು ಅವರು ಹೇಳಿದಂತೆ ಕಟ್ಟಿಂಗ್ ಮಾಡಿಸಲಾಯಿತು ಮೊದಲನೆ ಫಸಲು 12 ಟನ್ ಬೆಳೆ ಬಂದಿದ್ದು. ಒಂದು ವರ್ಷಕ್ಕೆ ಒಂದು ಬಾರಿ ದಾಳಿಂಬೆ ಫಸಲು ಬರುತ್ತದೆ. ದಾಳಿಂಬೆ ಮಾರ್ಕೆಟಿಂಗ್ ಮಾಡುವವರು ಬಂದು ಫಿಕ್ಸ್ ಮಾಡಿದ ಬೆಲೆಗೆ ಅವರೆ ಕಾಯಿ ಕೊಯ್ದುಕೊಂಡು ಹೋಗುತ್ತಾರೆ.
ಇದು ಫಸಲು ಬರುವಾಗ ಗಿಡ ಡ್ರೈ ಆಗಿರಬೇಕು ಹೀಗಾಗಿ ಮಳೆಗಾಲದಲ್ಲಿ ಫಸಲು ಬಿಡುವುದಿಲ್ಲ ಬೇಸಿಗೆಯಲ್ಲಿ ಮಾತ್ರ ಫಸಲು ಬರುವಂತೆ ನೋಡಿಕೊಳ್ಳುತ್ತಾರೆ. ದಾಳಿಂಬೆ ಗಿಡಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಮೋಡವಾಯಿತೆಂದರೆ ಔಷಧಿ ಹೊಡೆಸಬೇಕು. ದಾಳಿಂಬೆ ಗಿಡಕ್ಕೆ ಹೆಚ್ಚು ಔಷಧಿ ಹೊಡೆಸಬೇಕು ದ್ರಾಕ್ಷಿ ಗಿಡದಂತೆ ಇದಕ್ಕೂ ಔಷಧಿ ಮಾಡಬೇಕಾಗುತ್ತದೆ.
ಮಣ್ಣಿಗೆ ಗಿಡವನ್ನು ನೆಟ್ಟಾಗ ನೀರು ಬೇಕು ನಂತರ ಫಸಲು ಬರುವ ಸಮಯದಲ್ಲಿ ಹೆಚ್ಚು ನೀರು ಕೊಡಬಾರದು. ಗಿಡದಲ್ಲಿ ಹೆಣ್ಣು ಹೂವು ಗಂಡು ಹೂವು ಎಂದು ಇರುತ್ತದೆ ಗಂಡು ಹೂವು ಉದುರೋಗುತ್ತದೆ ಹೆಣ್ಣು ಹೂವು ಕಾಯಾಗುತ್ತದೆ ಯಾವ ಗಿಡದಲ್ಲಿ ಹೆಣ್ಣು ಹೂವು ಜಾಸ್ತಿ ಬರುತ್ತದೆಯೊ ಆ ಗಿಡದಲ್ಲಿ ಕಾಯಿ ಹೆಚ್ಚು ಎಂದು ಹೇಳಬಹುದು. ಗಿಡಕ್ಕೆ ಜೇನು ಹುಳ ಇರಬೇಕಾಗುತ್ತದೆ ಜೇನು ಹುಳದ ಪೆಟ್ಟಿಗೆ ತಂದು ಇಟ್ಟರೆ ಗಿಡದಲ್ಲಿ ಹೆಚ್ಚು ಫಸಲು ಬರುತ್ತದೆ. ಬೆಳೆ ಹಾಕಿದ ಮೊದಲನೆ ವರ್ಷ ಖರ್ಚು ಹೆಚ್ಚಾಗುತ್ತದೆ ಜಮೀನಿಗೆ ಕಂಪೌಂಡ್ ಮಾಡಬೇಕು ನೆಟ್ ಹಾಕಬೇಕು, ದಾಳಿಂಬೆ ಗಿಡ ಬೆಳೆಯಲು ವ್ಯವಸ್ಥೆ ಮಾಡಿಕೊಳ್ಳಲು ಖರ್ಚು ಹೆಚ್ಚಾಗುತ್ತದೆ.
ಎರಡನೆ ವರ್ಷದಿಂದ ಬಲೆ ಹಾಕಿಕೊಳ್ಳಬೇಕು ಮತ್ತು ಆಳಿನ ಖರ್ಚು ಅಷ್ಟೆ ಇರುತ್ತದೆ. ಮೂರು ಎಕರೆಯಿಂದ ಪುಷ್ಪ ಅವರಿಗೆ 50 ಲಕ್ಷ ಆದಾಯವಾಗಿತ್ತು. ಪುಷ್ಪ ಅವರು ನಂತರದಲ್ಲಿ 5 ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆಯುತ್ತಿದ್ದಾರೆ. ದಾಳಿಂಬೆಗೆ ನೂರು ರೂಪಾಯಿ ಮೇಲೆ 150 ರೂಪಾಯಿ ಬೆಲೆ ಇದ್ದರೆ ಮಾತ್ರ ಹೆಚ್ಚಿನ ಆದಾಯ ಗಳಿಸಬಹುದು ಎಂದು ಪುಷ್ಪ ಅವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ಹೆಚ್ಚು ಮಳೆ ಬಂದರೂ ಕಾಯಿ ಉದುರಿ ಹೋಗುತ್ತದೆ ಆಗ ಲಾಸ್ ಆಗುತ್ತದೆ. ಒಟ್ಟಿನಲ್ಲಿ ಪುಷ್ಪ ಅವರಿಗೆ ದಾಳಿಂಬೆ ಬೆಳೆಯ ಬಗ್ಗೆ ಏನೂ ಗೊತ್ತಿಲ್ಲದೆ ಇದ್ದರೂ ಒಳ್ಳೆಯ ಆದಾಯವನ್ನು ಗಳಿಸಿದರು, ಅವರು ಹೇಳಿದಂತೆ ದಾಳಿಂಬೆ ಬೆಳೆ ಆದಾಯಕ್ಕೆ ಒಳ್ಳೆಯ ಬೆಳೆಯಾಗಿದೆ.