ನಾವಿಂದು ರೈತರಿಗೆ ಸಹಾಯವಾಗುವಂತಹ ಒಂದು ಆಪ್ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದು ರೈತರಿಗೆ ತುಂಬಾ ಉಪಯುಕ್ತವಾದಂತಹದ್ದಾಗಿದೆ ಈ ಅಪ್ಲಿಕೇಶನ್ ಮೂಲಕ ರೈತರು ಯಾವುದೇ ಬೆಳೆಯ ಬೆಲೆಯನ್ನು ಬೇಕಾದರೂ ಕುಳಿತಲ್ಲಿಯೇ ತಿಳಿಯಬಹುದಾಗಿದೆ. ಜೊತೆಗೆ ರೈತರು ಇದರಿಂದ ಪ್ರತಿ ದಿನದ ಹವಾಮಾನ ವರದಿಯನ್ನು ಕೂಡ ತಿಳಿಯಬಹುದಾಗಿದೆ. ಅದು ಕೂಡ ಉಚಿತವಾಗಿ ಮತ್ತು ಈ ಆಪ್ ನಲ್ಲಿ ಯಾವ ಸಮಯದಲ್ಲಿ ಯಾವ ಬೆಳಗಳನ್ನು ಬೆಳೆದರೆ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂಬ ಮಾಹಿತಿಯನ್ನು ಕೂಡ ತಿಳಿಯಬಹುದಾಗಿದೆ. ಹಾಗೂ ಬೆಳೆಗಳಿಗೆ ಸಂಬಂಧಿಸಿದಂತೆ ಯಾವ ಯಾವ ಔಷಧಿಗಳನ್ನು ಬಳಸಬೇಕು ಎಂಬುದನ್ನು ಕೂಡ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಇನ್ನು ವಿಶೇಷವಾಗಿ ನೀವು ಕನ್ನಡದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಇನ್ನು ಆ ಆಪ್ ಯಾವುದು ಎಂದು ನೋಡಿದರೆ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇಸ್ಟೋರ್ ಗೆ ಹೋಗಬೇಕು ಅಲ್ಲಿ ನೀವು ಮೈ ಆರ್ ಎಂ ಎಲ್ ಎಂದು ಹುಡುಕಬೇಕಾಗುತ್ತದೆ. ನಂತರ ಅಲ್ಲಿ ಆರ್ ಎಂ ಎಲ್ ಕೃಷಿ ಮಿತ್ರ ಎಂಬ ಆಪ್ ಕಾಣಿಸುತ್ತದೆ. ಅದನ್ನ ನೀವು ಇನ್ಸ್ಟಾಲ್ ಮಾಡಿಕೊಳ್ಳಬೇಕು ನೀವು ಬೇಕಾದರೆ ಅಲ್ಲಿ ಆ ಆಪ್ ಗೆ ಸಂಬಂಧಿಸಿದಂತೆ ರೇಟಿಂಗ್ ಗಳನ್ನು ನೋಡಬಹುದು ತುಂಬಾ ಚೆನ್ನಾಗಿದೆ. ಅಪ್ಲಿಕೇಶನ್ ನನ್ನ ನೀವು ಡೌನ್ ಲೋಡ್ ಮಾಡಿಕೊಂಡ ನಂತರ ಅದನ್ನು ಓಪನ್ ಮಾಡಬೇಕು ಆಗ ಲೊಕೇಶನ್ ಅಲೋ ಕೇಳುತ್ತದೆ ಅದನ್ನು ಓಪನ್ ಮಾಡಬೇಕು.
ಅದು ಏರಿಯಾವನ್ನು ಆಟೋಮೆಟಿಕ್ ಆಗಿ ಆಯ್ಕೆ ಮಾಡಿಕೊಳ್ಳುತ್ತದೆ ನೀವು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮಗೆ ಭಾಷೆ ಆಯ್ಕೆ ಇರುತ್ತದೆ ಅಲ್ಲಿ ನೀವು ಕನ್ನಡ ಅಥವಾ ಇಂಗ್ಲಿಷ್ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆಯನ್ನು ನಂತರ ನಿಮ್ಮ ತಾಲೂಕನ್ನ ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಮೊಬೈಲ್ ನಂಬರನ್ನು ಹಾಕಬೇಕು. ನಂತರ ಅಲ್ಲಿ ಒಂದು ರೈಟ್ ಗುರುತನ್ನ ಹಾಕಿ ನೊಂದಾಯಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಬೇಕು ನಂತರ ನಿಮ್ಮ ಮೊಬೈಲ್ ವೆರಿಫೈ ಆಗುತ್ತದೆ ಅಲ್ಲಿಗೆ ನಿಮ್ಮ ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಗಿಯುತ್ತದೆ.
ಅಲ್ಲಿ ನೀವು ಹವಾಮಾನವನ್ನು ತಿಳಿಯಬಹುದು ಸಲಹೆಗಳನ್ನು ಪಡೆದುಕೊಳ್ಳಬಹುದು ಜೊತೆಗೆ ಅಲ್ಲಿ ಸೋಡಾಕ್ ಎನ್ನುವ ಆಯ್ಕೆ ಇರುತ್ತದೆ ಅಲ್ಲಿ ನೀವು ಮಣ್ಣಿನ ಪರೀಕ್ಷೆಯನ್ನು ಮಾಡಬಹುದು. ಈ ರೀತಿಯಾಗಿ ಈ ಅಪ್ಲಿಕೇಶನ್ನಲ್ಲಿ ರೈತರಿಗೆ ಸಹಾಯವಾಗುವಂತಹ ಅನೇಕ ಆಯ್ಕೆಗಳಿವೆ ಇವುಗಳನ್ನು ಬಳಸುವುದರಿಂದ ರೈತರು ತಮ್ಮ ಬೇಸಾಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ರೈತರಿಗೆ ತುಂಬಾ ಸಹಾಯವಾಗಿದ್ದು ರೈತರ ಇದನ್ನು ಸುಲಭವಾಗಿ ಬಳಸಬಹುದು ಈ ಆಪ್ ನ ಬಗ್ಗೆ ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ತಿಳಿಸಿರಿ.