ಇಂದಿನ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ನಮ್ಮ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಅನೇಕ ಯಂತ್ರಗಳ ಅವಶ್ಯಕತೆ ಇರುತ್ತದೆ ನಾವು ಇಂದು ಕೃಷಿಕರಿಗೆ ಸಹಾಯವಾಗುವಂತಹ ಪವರ್ ವಿಡರ್ ಯಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಇದು ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಯಾವ ರೀತಿಯಾಗಿ ಸಹಾಯಕವಾಗಿದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಪವರ್ ವೀಡರ್ ರೈತರಿಗೆ ಕೃಷಿ ಚಟುವಟಿಕೆಯನ್ನು ಸುಲಭವಾಗಿ ಕಡಿಮೆ ಕರ್ಚಿನಲ್ಲಿ ನಿರ್ವಹಿಸುವುದಕ್ಕೆ ಅತ್ಯಂತ ಪ್ರಮುಖವಾಗಿದೆ. ಈ ಒಂದು ಯಂತ್ರದಲ್ಲಿ ಐದು ಎಚ್ ಪಿ ಯಂತ್ರಗಳು ಒಂಬತ್ತು ಎಚ್ ಪಿ ಯಂತ್ರಗಳು ಹನ್ನೆರಡು ಎಚ್ ಪಿ ಯಂತ್ರಗಳು ಕೂಡ ಸಿಗುತ್ತದೆ.

ನಿಮಗೆ ಯಾವ ಯಂತ್ರಗಳು ಬೇಕು ಎನ್ನುವುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಈ ಒಂದು ಯಂತ್ರಕ್ಕೆ ನೀವು ಮೂವತ್ತು ರೀತಿಯ ಉಪಕರಣಗಳನ್ನು ಸೇರಿಸಿ ಬಳಸಬಹುದು. ಸಾಮಾನ್ಯವಾಗಿ ಹಿಂದಿನ ಕಾಲದಿಂದಲೂ ಹೊಲ ಉಳುವುದಕ್ಕೆ ದನಕರುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಬೆಳೆಗಳಿಗೆ ಕುಂಟೆಯನ್ನು ಹಾಕುವುದಕ್ಕು ದನಗಳನ್ನು ಬಳಸಲಾಗುತ್ತಿತ್ತು ಆದರೆ ಈಗ ಅವುಗಳ ಬದಲಾಗಿ ಯಂತ್ರಗಳು ಬಂದಿವೆ.

ಯಂತ್ರಗಳಿಗೆ ಹೋಲಿಸಿದರೆ ದನಕರುಗಳನ್ನು ನಿರ್ವಹಣೆ ಮಾಡುವುದಕ್ಕೆ ಖರ್ಚು ಹೆಚ್ಚಿಗೆ ತಗಲುತ್ತದೆ. ಯಂತ್ರ ಗಳನ್ನು ಬಳಸುವುದರಿಂದ ನಿಮಗೆ ಜಮೀನಿನಲ್ಲಿ ಬೆಳೆಗಳ ನಡುವೆ ಇರುವ ಸಣ್ಣ ಸಣ್ಣ ಕಳೆಗಳನ್ನು ತೆಗೆಯುವುದಕ್ಕೆ ಮಾಡುವಂತಹ ಕರ್ಚು ಉಳಿತಾಯವಾಗುತ್ತದೆ. ಮತ್ತು ಕಡಿಮೆ ಸಮಯ ಸಾಕಾಗುತ್ತದೆ.

ನೀವು ಐದು ಎಚ್ ಪಿ ಯಂತ್ರವನ್ನ ತೆಗೆದುಕೊಂಡರೆ ಅದರಲ್ಲಿ ಐದು ಲೀಟರ್ ಕೆಪ್ಯಾಸಿಟಿಯ ಟ್ಯಾಂಕ್ ಇರುತ್ತದೆ. ಅದಕ್ಕೆ ನೀವು ಪೆಟ್ರೋಲ್ ಬಳಸಬಹುದು. ಈ ಪವರ್ ವೀಡರ್ ಯಂತ್ರವನ್ನು ಬಳಸಿ ನೀವು ಒಂದು ಎಕರೆ ಜಮೀನಿನಲ್ಲಿ ಕೆಲಸ ಮಾಡಬೇಕು ಎಂದರೆ ಮೂರು ತಾಸುಗಳ ಸಮಯ ಬೇಕಾಗುತ್ತದೆ. ಒಂದು ತಾಸಿಗೆ ಎರಡರಿಂದ ಎರಡುವರೆ ಲೀಟರ್ ಪೆಟ್ರೋಲ್ ಬೇಕಾಗುತ್ತದೆ.

ಇನ್ನು ಯಂತ್ರವನ್ನು ನೀವು ಬಾಡಿಗೆಗೂ ಸಹ ಕೊಡಬಹುದು. ಇನ್ನು ನೀವು ಯಂತ್ರವನ್ನು ಖರೀದಿಸುವುದಕ್ಕೆ ನಿಮಗೆ ಸಬ್ಸಿಡಿ ಕೂಡ ದೊರೆಯುತ್ತದೆ. ಈ ಒಂದು ಯಂತ್ರಕ್ಕೆ ನೀವು ಮೂವತ್ತು ವಿಧವಾದ ಉಪಕರಣಗಳನ್ನು ಸೇರಿಸಿ ಬಳಸಬಹುದು.

ಒಂದು ನೇಗಿಲು ಬಳಸಬಹುದು ರೋಟರಿ ಬೆಡ್ ಮಾಡಬಹುದು ಸಾಲು ಮಾಡಬಹುದು ಕುಂಟೆ ಹಾಕಬಹುದು ಈ ರೀತಿಯ ಹಲವಾರು ಉಪಕರಣಗಳನ್ನು ಯಂತ್ರದಲ್ಲಿ ಬಳಸಬಹುದು. ಈ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಯಂತ್ರೋಪಕರಣಗಳು ಮಾರುಕಟ್ಟೆಗೆ ಬರುತ್ತಿವೆ ಅದರಲ್ಲಿ ಪವರ್ ಬಿಲ್ಡರ್ ಕೂಡ ಒಳ್ಳೆಯ ಯಂತ್ರವಾಗಿದೆ.

ಈಗಾಗಲೇ ಅನೇಕ ರೈತರು ಈ ಯಂತ್ರವನ್ನು ಬಳಸುವುದರ ಮೂಲಕ ಉತ್ತಮ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ರೈತರಿಗೆ ಅನೇಕ ರೀತಿಯಲ್ಲಿ ಸಹಾಯವನ್ನು ಮಾಡುತ್ತದೆ ನೀವು ಕೂಡ ಈ ಯಂತ್ರವನ್ನು ಉಪಯೋಗಿಸಿ ಕೃಷಿಯಲ್ಲಿ ಉತ್ತಮ ರೀತಿಯ ಕಾರ್ಯವನ್ನು ಮಾಡುವುದರ ಜೊತೆಗೆ ಒಳ್ಳೆಯ ಲಾಭವನ್ನು ಕೂಡ ಪಡೆಯಬಹುದಾಗಿದೆ. ಈ ಯಂತ್ರದ ಬಗ್ಗೆ ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಇದರ ಮಾಹಿತಿಯನ್ನು ತಿಳಿಸಿರಿ. video credit for krushivaani

Leave a Reply

Your email address will not be published. Required fields are marked *