ಜಮೀನಿನ ಸರ್ವೆ ಮತ್ತು ಹದ್ದು ಬಸ್ತು ಇವುಗಳ ನಡುವೆ ಇರುವ ವ್ಯತ್ಯಾಸ?. ಯಾವ ಉದ್ದೇಶದಿಂದ ಜಮೀನಿಗೆ ಅಳತೆ ಮಾಡಿಸಬೇಕು ಎಂದು ತಿಳಿಯಬೇಕು ;ಸರ್ವೇ ಎಂದರೆ ಒಂದು ಜಾಮೀನಿನ ಪೂರ್ತಿ ಅಳತೆ ಮಾಡುವುದನ್ನು ಮತ್ತು ಎಲ್ಲಾ ವಿಧಾನವಾಗಿ ಜಮೀನನ್ನು ಅಳತೆ ಮಾಡುವುದನ್ನು ಸರ್ವೆ ಎಂದು ಕರೆಯಲಾಗುತ್ತದೆ.ಜಮೀನಿಗೆ ಗುರುತಿಸುವ ಬೌಂಡರಿ ಇಲ್ಲದೆ ಹೋದರೆ, ಮೊದಲು ಇದ್ದ ಕಲ್ಲುಗಳು ಕಾಣೆಯಾಗಿದ್ದರೆ ಇಲ್ಲವೇ ಅಕ್ಕಪಕ್ಕದ ಜಮೀನಿನ ಮಾಲೀಕರು ಜಮೀನನ್ನು ಒತ್ತುವರಿ ಮಾಡಿದ್ದರೆ ಜಮೀನಿಗೆ ಬೌಂಡರಿ ಹಾಕಿಸಲು ಮಾಡಿಸುವ ಸರ್ವೆ ಆನ್ನು ಹದ್ದು ಬಸ್ತು ಎನ್ನಲಾಗುತ್ತದೆ.
ಸರ್ವೆ ಮತ್ತು ಹದ್ದು ಬಸ್ತಿಗೆ ಇರುವ ವ್ಯತ್ಯಾಸವನ್ನು ತಿಳಿಯೋಣ ಬನ್ನಿ ;
ಸರ್ವೆ ಮಾಡುವ ಉದ್ದೇಶ 11 E ಸ್ಕೆಚ್, ತತ್ಕಾಲ್ ಪೋಡಿ ಮತ್ತು ಪೋಡಿ ಸರ್ವೆ .
ಜಮೀನಿಗೆ ಹದ್ದು ಬಸ್ತು ಎಂದರೆ ಗಡಿಯನ್ನು ಕಂಡು ಹಿಡಿದು ಅದರ ವರದಿಯನ್ನು ಕೊಡುವುದು. ಸಾಮಾನ್ಯವಾಗಿ ಸರ್ವೆ ಮಾಡುವ ಸಮಯದಲ್ಲಿ ಅರ್ಜಿ ಹಾಕುವಾಗ ಮಾರಾಟ ಮಾಡುವ ಜನರ ಮತ್ತು ಖರೀದಿ ಮಾಡುವ ಜನರ ಆಧಾರ್ ಕಾರ್ಡ್, ಪಹಣಿ ಇದರ ಜೊತೆಗೆ 11 B ನಮೂನೆ ಫಾರ್ಮ್ ಅರ್ಜಿ ಬೇಕಾಗುತ್ತದೆ. ಹದ್ದು ಬಸ್ತಿಗೆ ಅರ್ಜಿ ಸಲ್ಲಿಕೆ ಮಾಡ್ಬೇಕು ಎಂದರೆ ಜಮೀನಿನ ಮಾಲೀಕನ ಆಧಾರ್ ಕಾರ್ಡ್, ಪಹಣಿ ಮತ್ತು ಜಮೀನಿನ ನಾಲ್ಕು ಭಾಗದಲ್ಲಿ ಇರುವ ಬೇರೆ ಜಮೀನಿನವರ ಹೆಸರು, ವಿಳಾಸವನ್ನು ಹಾಗು ಚೆಕ್ಕುಬಂದಿ ವಿವರವನ್ನು ಎಲ್ಲಾ ಸೇರಿಸಿ ಕೊಡಬೇಕಾಗುತ್ತದೆ.
11 E ಸ್ಕೆಚ್ ಮತ್ತು ಪೋಡಿ ಸರ್ವೆಗೆ ಸಂಬಂಧಪಟ್ಟ ವ್ಯಕ್ತಿಗಳು ಹಾಜರಾತಿ ಹಾಕಿದರೆ ಸಾಕು.
ಹದ್ದು ಬಸ್ತಿಗೆ ಭೂ ಮಾಪಕರು ಸರ್ವೆ ಮಾಡುವ ಮುನ್ನ ಅಕ್ಕಪಕ್ಕದ ಜಮೀನಿನ ಜನರಿಗೆ ಮತ್ತು ಬೇಕಾದ ಜನರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್’ನಲ್ಲಿ ನಿಗದಿ ಪಡಿಸಿದ ದಿನದಂದು ಎಲ್ಲರ ಎದುರಲ್ಲಿ ಸರ್ವೆ ಕಾರ್ಯವನ್ನು ಮಾಡುವರು ಎಲ್ಲರ ಹಾಜರಾತಿ ಕಡ್ಡಾಯ.
11 E ಸ್ಕೆಚ್ ಮತ್ತು ಪೋಡಿ ಸರ್ವೆಯಲ್ಲಿ ನೂತನ ಪ್ರತ್ಯೇಕ ನಕ್ಷೆ ಮಾಡುವರು ಮತ್ತು ಅದಕ್ಕೆ ಸಂಬಂಧಪಟ್ಟ ಆಕಾರ, ಟಿಪ್ಪಣಿ, ಫಾರಂ 10 ದಾಖಲೆಗಳನ್ನು ಹೊಸದಾಗಿ ತಯಾರಿಕೆ ಮಾಡುವರು.
ಹದ್ದು ಬಸ್ತು ಸರ್ವೆ ಮಾಡುವಾಗ ಮೂಲ ದಾಖಲೆ ಮತ್ತು ಟಿಪ್ಪಣಿ ಪ್ರಕಾರ ಭೂಮಿ ಗಡಿಯನ್ನು ಗುರುತಿಸಿ ಅಳತೆ ಮಾಡಿ ವಾಸ್ತವಿಕ ವರದಿ ಮಾಡಿ ಕೊಡುವರು. ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿ ಅಥವಾ ವಿಭಾಗ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ 11 E ಸ್ಕೆಚ್ ಮತ್ತು ಪೋಡಿ ಆಧಾರದ ಮೇಲೆ ಸರ್ವೆ ಮಾಡಿಸಬಹುದು.
ಹದ್ದು ಬಸ್ತು ಸರ್ವೇ ಕಾರ್ಯ ಮಾಡುವಾಗ ಅಕ್ಕಪಕ್ಕದ ಜಮೀನಿನ ಮಾಲೀಕರು ಅರ್ಜಿದಾರರ ಜಮೀನನ್ನು ಒತ್ತುವರಿ ಮಾಡಿದ್ದರೆ, ಗುರುತು ನಶಿಸಿ ಹೋಗಿದ್ದರೆ, ಕಲ್ಲಿನ ಗೂಟ ಇಲ್ಲದೆ ಹೋದರೆ ಹದ್ದು ಬಸ್ತು ಸರ್ವೇಗೆ ಅರ್ಜಿ ಹಾಕಿ ಗಡಿಯನ್ನು ಭದ್ರ ಮಾಡಿಕೊಳ್ಳಬಹುದು. ಸೆರ್ವೆಯಲ್ಲಿ ನೋಂದಣಿ ಮಾಡುವುದು, ಮ್ಯೂಟೇಷನ್ ಮಾಡಿಸುವುದು ಕಡ್ಡಾಯ ಜಮೀನು ವಿಭಾಗ ಅಥವಾ ವಿಸ್ತರಣಾ ಪ್ರಕ್ರಿಯೆಗೆ ನೋಂದಣಿ ಖಂಡಿತವಾಗಿ ಮಾಡಿಸಬೇಕು ಎನ್ನುವ ಕಂದಾಯ ನಿಯಮವಿದೆ.
ಹದ್ದು ಬಸ್ತು ಹಾಕುವಾಗ ಒತ್ತುವರಿ ಆಗಿರುವ ಜಮೀನಿನ ನಕ್ಷೆ ತಯಾರಿಸಿ ಕೊಡುವರು, ವಿಸ್ತೀರ್ಣ ಆಗಿರುವ ವರದಿ, ಸಾಕ್ಷಿಗಳ ಹೇಳಿಕೆ ದಾಖಲಿಸಿ ನಕ್ಷೆ ಸಹಿತ ವಿವರಣೆ ಬರೆದು ಅಧಿಕೃತ ಪತ್ರ ತಯಾರಿಸಿ ಕೊಡುವರು.
ಸರ್ವೆ ಮತ್ತು ಹದ್ದು ಬಸ್ತು ಮಾಡುವಾಗ ಗಮನದಲ್ಲಿ ಇರಬೇಕಾದ ಮುಖ್ಯವಾದ ಅಂಶಗಳು ಯಾವುದು :-
ಹದ್ದು ಬಸ್ತು ವರದಿಯನ್ನು ನ್ಯಾಯಾಲಯದಲ್ಲಿ, ಪೊಲೀಸ್ ಠಾಣೆಗಳಲ್ಲಿ ಮತ್ತು ಕಂದಾಯ ಮೇಲಧಿಕಾರಿ ಕಚೇರಿಗಳಲ್ಲಿ ನ್ಯಾಯ ಪಡೆಯಲು ಬಳಸಬಹುದು. ಭೂ ಮಾಲೀಕತ್ವದ ಪಹಣಿ ಇದ್ದು ಎಂದರೆ ಒಂದೇ ಆಸ್ತಿಗೆ ಹೆಚ್ಚು ಜನ ಮಾಲೀಕರು ಇದ್ದರೆ ಹದ್ದು ಬಸ್ತು ಹಾಕಲು ಆಗುವುದಿಲ್ಲ. ಭೂ ಮಾಲೀಕರ ಕಬ್ಜೆ ಅದರ ಪ್ರಕಾರ ಇರುವುದಿಲ್ಲ. ಅದಕ್ಕಾಗಿ ರೈತರು ಮೊದಲು ತಾತ್ಕಲ್ ಪೋಡಿ ಅರ್ಜಿ ಹಾಕಿ ನಂತರ ಪ್ರತ್ಯೇಕ ನಕ್ಷೆ ಬಂದ ಮೇಲೆ ಹದ್ದು ಬಸ್ತಿಗೆ ಅರ್ಜಿ ಹಾಕಬಹುದು.
ಸಾಮಾನ್ಯ ಸರ್ವೆ ಪೋಡಿ ಮತ್ತು 11 E ಸ್ಕೆಚ್ ಮಾಡಿಸಲು ಸದರಿ ಸರ್ವೆ ನಂಬರ್ ಮುಖ್ಯ ಗುರುತಿನ ಸ್ಥಳದಿಂದ ಅಳತೆ ಪ್ರಾರಂಭ ಮಾಡಿ ಮುಗಿಸುವರು. ಆದರೆ, ಪೂರ್ಣ ಹದ್ದು ಬಸ್ತಿನ ಸರ್ವೆ ನಂಬರ್ ಕಂಡುಹಿಡಿಯಲು ಊರಿನ ಸೀಮೆಯಿಂದ ಎಂದರೆ ಎರಡು ಊರುಗಳ ನಡುವೆ ಇರುವ ಗಡಿಯಿಂದ ಆರಂಭ ಮಾಡಬೇಕು. ಇದು, ಕೇವಲ ಕೇಳಿ ತಿಳಿದುಕೊಂಡಿರುವ ಮಾಹಿತಿ. ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಕಂದಾಯ ಇಲಾಖೆಗೆ ಭೇಟಿ ನೀಡಿ ಪಡೆಯಬಹುದು.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456