ಹಿಂದಿನ ಕಾಲದಲ್ಲಿ ಕುಡಿಯಲು ವ್ಯವಸಾಯ ಮಾಡಲು ಕೆರೆ ಭಾವಿ ಅಲ್ಲಿನ ನೀರನ್ನು ಉಪಯೋಗಿಸುತ್ತಾ ಇದ್ದರು ಆದರೆ ಕಾಲ ಕ್ರಮೇಣ ಆದುನಿಕ ಜೀವನಕ್ಕೆ ಹೊಂದಿಕೊಂಡು ಜನರು ನೀರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಪೋಲು ಮಾಡುತ್ತ ಇಂದು ನೀರಿನ ಅಭಾವ ಕಂಡು ಬಂದಿದೆ ಹಾಗಾಗಿ ಇಂದು ಜನರು ಕೊಳವೆ ಬಾವಿಗಳನ್ನು ಅಳವಡಿಕೆಗೆ ಮೊರೆ ಹೋಗಿದ್ದು ಇದರಿಂದ ಜಲ ಸಂಪನ್ಮೂಲ ಹೊಡೆತ ಬಿದ್ದಿದೆ . ಅರಣ್ಯ ನಾಶದಿಂದ ಕಾಲ ಕಾಲಕ್ಕೆ ಬೀಳು ಮಳೆ ಕೂಡ ಕಡಿಮೆ ಆಗಿದೆ ಹಾಗಾಗಿ ಇಂದಿನ ರೈತರು ತಮ್ಮ ಹೊಲ ಗದ್ದೆಯಲ್ಲಿ ಕೊಳವೆ ಬಾವಿ ಮೊರೆ ಹೋಗಿದ್ದಾರೆ.
ಮೊದಲೆಲ್ಲ ಕೊಳವೆ ಬಾವಿಯನ್ನು ತೆಂಗಿನಕಾಯಿ ಮೂಲಕ ನೀರಿನ ಸೆಲೆ ಕಂಡು ಹಿಡಿತ ಇದ್ದರು ಆದರೆ ಇವಾಗ ತಂತ್ರಜ್ಞಾನ ಬದಲಾಗಿದ್ದು ಹೊಸ ಹೊಸ ಮಾರ್ಗಸೂಚಿ ಉಪಯೋಗಿಸಿ ಕೊಳವೆ ಬಾವಿ ಮೂಲಕ ನೀರು ಪಡೆಯುತ್ತಾರೆ. ಈ ಲೇಖನದಲ್ಲಿ ಬೋರ್ವೆಲ್ ಪಾಯಿಂಟುಗಳು ಸರದಾರ ಎಂದು ಖ್ಯಾತಿ ಹೊಂದಿರುವ ಮಂಚೆಗೌಡ ಅವರ ಅನುಭವವನ್ನು ತಿಳಿದುಕೊಳ್ಳೋಣ ಬನ್ನಿ
ಮಾಂಚೆಗೌಡ ಅವರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೋವಿಂದ ಹಳ್ಳಿಯವರು ಇವರು ಜಾಸ್ತಿಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಕಡೆ ಬೋರ್ ಪಾಯಿಂಟ್ ಕೊರೆಸಿದ್ದು ಎಲ್ಲ ಪಾಯಿಂಟುಗಳು ಯಶಸ್ವಿಯಾಗಿದೆ.
ಇವರು ಈ ವ್ಯವಹಾರ 2019-20 ಶುರು ಮಾಡಿದ್ದು ಇವರು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ ಇವರಲ್ಲಿ ನಾಲ್ಕು ವಿಧದ ತಂತ್ರಜ್ಞಾನ ಉಪಕರಣಗಳು ಯಾವುದೆಂದರೆ ಜಿಪಿಎಸ್ ಡೌಸಿಗ್ ವಿಧಾನ ದೇಟೆಕ್ಟಿವೆ ವಿಧಾನ ಮತ್ತೆ ಸ್ಕ್ಯಾನಿಂಗ್ ವಿಧಾನ ದೆಟೆಕ್ಟಿವೆ ವಿಧಾನ 50% ಅಷ್ಟೆ ಉಪಯೋಗ ಇನ್ನು 50% ಈ ವಿಧಾನ ಫಲ ನೀಡುತ್ತದೆ ಎನ್ನುವುದು ಸಮಂಜಸವಲ್ಲ ಸ್ಕ್ಯಾನಿಂಗ್ ವಿಧಾನದಲ್ಲಿ 42 ಫ್ರಿಕ್ಯುಎನ್ಸಿ ಭೂಮಿಯನ್ನು ಸ್ಕ್ಯಾನ್ ಮಾಡಿ ಪದರವನ್ನು ಅಳ ಅಗಲವನ್ನು ಲೆಕ್ಕ ಹಾಕಿ ಎಷ್ಟು ಅಡಿಯಲ್ಲಿ ನೀರು ಸಿಗುತದೆ ಎಂದು ಖಚಿತವಾಗಿ ಮಾಹಿತಿ ನೀಡಬಹುದು
ಇವರು ರೈತ ಕುಟುಂಬದಿಂದ ಬಂದಿದ್ದು ಮೊದಲು ತೆಂಗಿನಕಾಯಿ ಮೂಲಕ ನೀಡಿದ ಐದು ಪಾಯಿಂಟ್ ವ್ಯರ್ಥ ಆಗಿದ್ದು ಕೊನೆಗೆ ಈವರೆಗೆ ಕ್ಯಾಮೆರಾ ಮೂಲಕ ಪಾಯಿಂಟ್ ನೋಡಿ ಸರಿಯಾಗಿ ನೋಡ್ತಾ ಇಲ್ಲ ಎಂದು ಅರಿತು ಸ್ವತಃ ತಾವು ಪಾಯಿಂಟ್ ಮಾಡಲು ಮುಂದುವರಿಯುತ್ತಾರೆ ಸುಮಾರು 2500ಕ್ಕು ಹೆಚ್ಚು ಕೊಳವೆ ಬಾವಿ ಪಾಯಿಂಟ್ ಯಶಸ್ವಿ ಆಗಿದೆ ಇನ್ನು ಇವರು ಅಲ್ಲಿ ಇರುವ ಯಂತ್ರ ಟರ್ಕಿ ತಂದಿದ್ದು ಇವರು ರಾಜ್ಯದ ಯಾವುದೇ ಊರಿಗೆ ನೀರು ದೇವಸ್ತಾನ ಚರ್ಚ್ ಮಸೀದಿ ಗಳಿಗೆ ಉಚಿತ ಪಾಯಿಂಟ್ ಹಾಕಿ ಕೊಡುತ್ತಾರೆ
ಇನ್ನು 100% ಖಚಿತವಾಗಿ ಅಲ್ಲೇ ಇದ್ದು ನೇರವಾಗಿ ಡ್ರಿಲ್ ಮಾಡಿ ನೀರು ಚಿಮ್ಮಿಸಿ ಒಂದುವೇಳೆ ವಿಫಲ ಅದಲ್ಲಿ ಅರ್ಧದಷ್ಟು ಹಣವನ್ನು ವಾಪಸ್ಸು ನೀಡುತ್ತಾರೆ ಇನ್ನು ದಿನಕ್ಕೆ ಒಂದು ಇಲ್ಲ ಎರಡು ಬಿಂದು ಅಷ್ಟೆ ಮಾಡಲಾಗುವುದು ಮೊದಲಿಗೆ ಜಿ ಪಿ ಎಸ್ ಅಲ್ಲಿ ಸ್ಥಳವನ್ನು ಪರಿಶೀಲಿಸಿ ಒಂದು ಜಾಗವನ್ನು ಗುರುತಿಸಿ 360 ಡಿಗ್ರಿಯಲ್ಲಿ ಕುಂದುಕೊರತೆ ಹುಡುಕಿ ದೆಟೆಕ್ಟರ್ ಸಾಧನ ಅಲ್ಲಿ ಕಂಡು ಬರುತ್ತದೆ ಇನ್ನು ಹಲವಾರು ಬಾರಿ ಪ್ರಯತ್ನ ವಿಫಲ ವಾಗಲು ಕಾರಣವೇನೆಂದರೆ ದೇಟೆಕ್ಟರೂ ಸಣ್ಣ ಅಂತರ ಅಲ್ಲಿ ಬಿಂದು ಕಾಣದೆ ದೊಡ್ಡ ಅಂತರ ಅಲ್ಲಿ ನೀರಿನ ಬಿಂದು ಸಿಗುತ್ತದೆ ಆದರೆ ವೀದೇಶಿ ತಂತ್ರಜ್ಞಾನದ ಸಾಧನದಲ್ಲಿ ಪ್ರತಿಯೊಂದು ಅಡಿಗೂ ಮಾಡಿದಾಗ ಸ್ಕ್ಯಾನ್ ಮಾಡಿದಾಗ ಬಿಂದು ಕಾಣಿಸುತ್ತೆ ಚಿತ್ರದುರ್ಗದ ವಿಪುಲವಾದ ಸ್ಥಳದಲ್ಲಿ 3 ಅಡಿ ಅಂತರದಲ್ಲಿ ಹೊಸ ಬಿಂದು ವಿನ ಮೂಲಕ ಕೊಳವೆ ಬಾವಿ ಕೊರೆಸಿ ನೀರು ಚಿಮ್ಮಿಸಿ ಹಾಸ್ಯಾಸ್ಪದ ಮಾಡುತ ಇದ್ದ ಜನರಿಗೆ ತಮ್ಮ ಕಾರ್ಯ ಮೂಲಕ ಉತ್ತರ ನೀಡಿದ್ದಾರೆ ಇನ್ನು ಇವರು ಯಾವುದೇ ಯೂಟ್ಯೂಬ್ ಚಾನಲ್ ಇಲ್ಲ ಜನರ ಬಾಯಿಂದ ಬಾಯಿಗೆ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರೆ ಆಶ್ಚರ್ಯ
ರೈತರ ಅವರು ತಮ್ಮ ಹೊಲದಲ್ಲಿ ಕೊಳವೆ ಬಾವಿ ಕೊರೆಸಿ ಒಂದು ವೇಳೆ ವಿಫಲವಾದಲ್ಲಿ 50% ಹಣವನ್ನು ಮರುಪಾವತಿ ಮಾಡುತಾರೆ . ಇಂದಿನ ದಿನ ಕೊಳವೆ ಬಾವಿ ಜಾಸ್ತಿಯಾಗಿದ್ದು ಭೂಮಿ ಬಂಜರು ಆಗಿದೆ ಕಾರಣ ಭೂಮಿ ತಾಯಿ ಒಡಲಿಂದ ನೀರನ್ನು ನಾವು ಉಪಯೋಗಿಸಿ ಆದರೆ ಅದನ್ನು ಪುನಃ ಮರಳಿಸುವ ಪ್ರಯತ್ನ ಯಾರು ಮಾಡಿಲ್ಲ. ಇಂದು ಸರಕಾರ ಅಂತರ್ಜಾಲ ಕಡಿಮೆ ಆಗಿದ್ದು ಅದುಕ್ಕೆ ಹಲವಾರು ಯೋಜನೆ ಜಾರಿಗೊಳಿಸಿದೆ ಅದರಲ್ಲಿ ಮಳೆ ನೀರು ಸಂಗ್ರಹ ಒಂದು ಸರ್ಕಾರವು 20000 ಅಷ್ಟು ಸಹಾಯಧನ ನೀಡಲಿದ್ದು ಆದಷ್ಟು ಇಂದಿನ ಜನರು ತಮ್ಮ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸುವ ಮಾರ್ಗವನ್ನು ಹೇಳಿಕೊಟ್ಟರೆ ಉತ್ತಮ ಇಲ್ಲವಾದಲ್ಲಿ ಮುಂದೆ ಒಂದು ದಿನ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬರುವುದು ಖಂಡಿತ
ಪ್ರಾರಂಭ ದಿನಗಳಲ್ಲಿ 200-300 ಅಡಿಯಲ್ಲಿ ನೀರು ಸಿಗುತ ಇದ್ದು ಇಂದು ಸಾವಿರ ಅಡಿಯಷ್ಟು ಕೊರೆದು ನೀರು ಚಿಮ್ಮಿಸಿ ಬೇಕು ಆದರೆ ಇದು ಕ್ಲೋರೈಡ್ ನೀರು ಆಗಿದ್ದು ಮನುಷ್ಯನಿಗೆ ಕಿಡ್ನಿ ಕಲ್ಲು ಸಮಸ್ಯೆಗೆ ದಾರಿ ಯಾಗಿದೆ . ಆದಷ್ಟು ಮಳೆ ನೀರು ತಮ್ಮ ಮನೆಯಲ್ಲಿ ಸಂಗ್ರಹ ಮಾಡಿ ಇದರಿಂದ ಮುಂದಿನ ಪೀಳಿಗೆಗೆ ಉಪಯುಕ್ತ ಎಂದು ಸಲಹೆ ನೀಡಿದ್ದಾರೆ.