ಪ್ರತಿಯೊಬ್ಬರು ಜಮೀನು ಖರೀದಿಸುವ ಮುನ್ನ ಕೆಲವೊಂದು ದಾಖಲೆಗಳನ್ನು ಗಮಿಸಬೇಕಾಗುತ್ತದೆ ಹಾಗೂ ಕೆಲವು ಜನರು ಮಧ್ಯವರ್ತಿಗಳಿಂದ ಮೋಸ ಹೋಗುತ್ತಾರೆ ಆದರೆ ಜಮೀನು ಖರೀದಿಸುವ ಮುನ್ನ ಕೆಲವು ವಿಷಯ ಮತ್ತು ದಾಖಲೆಗಳು ಪರಿಶೀಲನೆಯನ್ನು ಮಾಡಬೇಕು ಹಾಗೂ ಆಸ್ತಿ ಖರೀದಿ ವೇಳೆ ಆದಷ್ಟು ಜಾಗೃತೆ ವಹಿಸುವುದು ಅತ್ಯಗತ್ಯ ಹಾಗೂ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸಿರುವುದನ್ನು ದೃಢೀಕರಿಸುವ ರಸೀದಿಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು ಹಾಗೂ ಕೆಲವು ಸಲ ರಿಜಿಸ್ಟರ್ ಆದರೂ ಸಹ ಜಮೀನನ್ನು ಕೈ ಬಿಡುವ ಸಾಧ್ಯತೆಗಳು ಇರುತ್ತದೆ ಹೀಗಾಗಿ ನಾವು ಈ ಲೇಖನದ ಮೂಲಕ ಜಮೀನು ಖರೀದಿಗೆ ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಜಮೀನು ಖರೀದಿಸುವಾಗ ಕೆಲವು ದಾಖಲೆಗಳನ್ನು ಚೆಕ್ ಮಾಡಬೇಕು ಕೆಲವೊಂದು ಸಮಯದಲ್ಲಿ ದಾಖಲೆಗಳು ಸರಿಯಾಗಿ ಇಲ್ಲದೇ ಇದ್ದರೂ ರಿಜಿಸ್ಟರ್ ಆದರೂ ಸಹ ಕೋರ್ಟ್ ಅಲೆಯುವ ಸಂದರ್ಭ ಬರುವಂತ ಲಕ್ಷಣ ಇರುತ್ತದೆ ಹಾಗೆಯೇ ಕರ್ನಾಟಕದಲ್ಲಿ ಜಮೀನು ಖರೀದಿಸುವಾಗ ಕೆಲವು ದಾಖಲೆಯನ್ನು ಪರಿಶೀಲಿಸಬೇಕಾಗುತ್ತದೆ ಅದರಲ್ಲಿ ಆಕಾರ ಬಂದ್ ಅನ್ನು ಚೆಕ್ ಮಾಡಬೇಕು ಯಾವುದೇ ಒಂದು ಜಮೀನಿನ ಸಂಪೂರ್ಣ ಮಾಹಿತಿಯನ್ನು ಆಕಾರ ಬಂದ್ ಎಂದು ಕರೆಯುತ್ತಾರೆ
ಜಮೀನು ಖರೀದಿಸುವಾಗ ಆಕಾರ ಬಂದ್ ಮತ್ತು ಪಹಣಿಯಲ್ಲಿ ರುವ ವ್ಯತ್ಯಾಸವನ್ನು ನೋಡಿಕೊಳ್ಳಬೇಕು ಹಾಗೆಯೇ ಜಮೀನು ಖರೀದಿಸುವವರಿಗೆ ಆಕಾರ ಬಂದ್ ಅಲ್ಲಿರುವ ವಿಷಯಗಳ ಬಗ್ಗೆ ಕೂಲಂಕುಶವಾಗಿ ನೋಡಿ ಜಮೀನು ಖರೀದಿಸಬೇಕು ಮತ್ತು ಜಮೀನು ಖರೀದಿಸುವ ಮುನ್ನ ಪಹಣಿಯಲ್ಲಿ ಎಸ್ಟು ಅ ಮತ್ತು ಬ ದ ಭೂಮಿ ಹೊಂದಿದೆ ಮತ್ತು ಜಮೀನಿನ ಮೇಲೆ ಸಾಲ ಇದ್ದರೆ ಎಸ್ಟು ಸಾಲ ಇದೆ ಎಂಬುದನ್ನು ಪಹಣಿಯಲ್ಲಿರುವ ಋಣ ಗಳ ಮೂಲಕ ತಿಳಿಯಬಹುದು ವಾಸ್ತವವಾಗಿ ಆಸ್ತಿಯ ಹಕ್ಕು ಬದಲಾವಣೆಯಾಗಿದೆ ಎಂಬುದನ್ನು ಗಮನಿಸಬೇಕು.
ಖರೀದಿದಾರರು ಜಮೀನಿನ ಸಾಗುವಳಿದಾರರ ಹೆಸರನ್ನು ನೋಡಬೇಕು ಮೂರನೇಯ ದಾಖಲೆಯಾಗಿ ಪ್ರತ್ಯೇಕ ಜಮೀನಿನ ವಿಸ್ತೀರ್ಣ ಜಮೀನಿನ ಫಾರ್ಮ್ ಹತ್ತು ಇರುವ ದಾಖಲೆಗಳು ಇರಬೇಕು ಇದರಲ್ಲಿ ಜಮೀನಿನ ಮಾಲೀಕರ ಹೆಸರು ಮತ್ತು ನಿರ್ದಿಷ್ಟವಾದ ಜಮೀನಿನ ವಿಸ್ತೀರ್ಣ ಇರುತ್ತದೆ ಮತ್ತು ಜಮೀನು ಖರೀದಿಸುವಾಗ ಸರ್ವೆ ಸ್ಕೆಚ್ ಅನ್ನು ಪರಿಶೀಲಿಸಬೇಕು ಜಮೀನಿನ ಸಂಪೂರ್ಣ ನಕ್ಷೆಯನ್ನು ಸರ್ವೆ ಸ್ಕೆಚ್ ಎಂದು ಕರೆಯುತ್ತಾರೆ ಬಿಳಿ ಹಾಳೆಯ ಮೇಲೆ ಚಿತ್ರ ಸಹಿತ ಅಂಕಿಸಂಖ್ಯೆ ಮತ್ತು ಬಂಡಿದಾರಿ ಮತ್ತು ಕಾಲುದಾರಿಗಳ ಸಂಪೂರ್ಣ ಮಾಹಿತಿ ಇರುತ್ತದೆ
ಜಮೀನು ಖರೀದಿಸುವ ಮುನ್ನ ಒಂದು ಸಲ ಸರ್ವೆ ಮಾಡಿದರೆ ತುಂಬಾ ಒಳ್ಳೆಯದು ಇದರಿಂದ ವಾಸ್ತವಿಕತೆಯನ್ನು ತಿಳಿಯಬಹುದು ಇಲೆವೆನ್ ಈ ಸ್ಕೆಚ್ ಸಹ ನೋಡಿಕೊಳ್ಳಬೇಕು ಪೂರ್ಣ ಜಮೀನಿನಲ್ಲಿ ಪ್ರತೇಕಗೊಂಡ ಜಮೀನಿಗೆ ಇಲೆವೆನ್ ಈ ಸ್ಕೆಚ್ ಎಂದು ಕರೆಯುತ್ತಾರೆ ಹಾಗೆಯೇ ಖರೀದಿ ಪತ್ರ ಸಹ ಇರಬೇಕು ಮತ್ತು ಯಾರಿಂದ ಜಮೀನು ಖರೀದಿಯಾಗಿದೆ ಮತ್ತು ಖರೀದಿದಾರರ ಮಾಹಿತಿಯನ್ನು ಒಳಗೊಂಡಿರುತ್ತದೆ ಖರೀದಿ ಮಾಡುತ್ತಿರುವ ಜಮೀನಿನ ಚೆಕ್ ಬಂದಿಯ ವಿವರಗಳನ್ನು ನೋಡಬೇಕು ಸೆಲ್ ಡೀಡ್ ಸರಿಯಾಗಿ ಇದೆಯೋ ಇಲ್ಲವೋ ಎಂದು ನೋಡಲು ಕಾವೇರಿ ಆನ್ಲೈನ್ ಡಾಟ್ ಕರ್ನಾಟಕ ಡಾಟ್ ಗವರ್ನಮೆಂಟ್ ಡಾಟ್ ಇನ್ ವೆಬ್ ಸೈಟ್ ನಲ್ಲಿ ಚೆಕ್ ಮಾಡಬೇಕು .
ಜಮೀನು ಮೊದಲಿನಿಂದ ಹಿಡಿದು ಯಾರಿಂದ ಯಾರಿಗೆ ಜಮೀನು ವರ್ಗಾಯಿಸಲಾಯಿತು ಎಂಬುದನ್ನು ಮುಟೇಷನ್ ರಿಪೋರ್ಟ್ ಅಲ್ಲಿ ನೋಡಬಹುದಾಗಿದೆ ಇದನ್ನು ನೆಮ್ಮದಿ ಕೇಂದ್ರದ ಮೂಲಕ ನೋಡಬಹುದಾಗಿದೆ ನಂತರದಲ್ಲಿ ಎನ್ ಟಿ ಸಿ ಯ ಬಗ್ಗೆ ಗಮನ ಹರಿಸಬೇಕು ಇದರಲ್ಲಿ ಜಮೀನು ಈ ಹಿಂದೆ ಉಳುವನೆ ಹೊಲದೊಡೆಯ ಕಾಯ್ದೆ ಬಂದಾಗ ಆಗಿರುವುದು ಅಲ್ಲವೋಎಂದು ಪರಿಶೀಲಿಸಬೇಕು ಹಾಗೂ ಸಾಗುವಳಿ ಚೀಟಿಯ ಬಗ್ಗೆ ಗಮನ ಹರಿಸಬೇಕು ಸರಕಾರದಿಂದ ಮಂಜೂರು ಆದರೆ ಸಾಗುವಳಿ ಚೀಟಿಯನ್ನು ಹೊಂದಿರುತ್ತಾರೆ ಅದನ್ನು ಪರಿಶೀಲಿಸಬೇಕು ಜಮೀನು ಕೊಂಡವರು ಹತ್ತು ವರ್ಷದಿಂದ ಇಪ್ಪತ್ತು ವರ್ಷದವರೆಗೆ ಪರಭಾರೆ ಮಾಡುವಂತಿಲ್ಲ
ಹಾಗೆಯೇ ಜಮೀನು ಖರೀದಿಸುವಾಗ ಈ ಸಿ ಯನ್ನು ಪರಿಶೀಲಿಸಬೇಕು ಸದರಿ ಭೂಮಿಯ ಹೆಸರಿನಲ್ಲಿ ಎಸ್ಟು ಸಾಲವಿದೆ ಮತ್ತುಋಣಭಾರಗಳು ಮತ್ತು ನಿರ್ದಿಷ್ಟ ಮಾಹಿತಿ ಇರುತ್ತದೆ ಉಪ ನೋಂದಣಿ ಕಚೇರಿಯಲ್ಲಿ ಕಾವೇರಿ ಆನ್ಲೈನ್ ಡಾಟ್ ಇನ್ ಗವರ್ನಮೆಂಟ್ ಡಾಟ್ ಇನ್ ಅಲ್ಲಿ ಈ ಸಿ ಸಿಗುತ್ತದೆ ಹಾಗೆಯೇ ಪಿ ಟಿ ಸಿ ಎಲ್ ಈ ಕಾಯ್ದೆಗೆ ಒಳಪಡುವ ಭೂಮಿ ಖರೀದಿಸಲು ಬರುವುದಿಲ್ಲ ಇದನ್ನು ಪರಿಶೀಲಿಸಿದ ನಂತರವೇ ಭೂಮಿ ಖರೀದಿಸಲು ನಿರ್ಧರಿಸಬೇಕು ಪಿತ್ರಾರ್ಜಿತ ಆಸ್ತಿ ಖರೀದಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಸೈನ್ ಖರೀದಿ ಪತ್ರದ ಮೇಲೆ ಇರಬೇಕು ಜಮೀನು ಖರೀದಿ ಮಾಡುವರು ರೈತ ನಾಗಿರಬೇಕು ಜಮೀನಿನ ಬಗ್ಗೆ ಸ್ವಲ್ಪ ಗೊಂಡಲವಿದ್ದರು ವಕೀಲರನ್ನು ಭೇಟಿ ಮಾಡಿ ಪರಿಶೀಲಿಸಬೇಕು. ಈ ಮೇಲಿನ ಅಂಶವನ್ನು ಗಮನಿಸಿ ಜಮೀನನ್ನು ಖರೀದಿಸಬೇಕು.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರ ಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430