ನೀವು ಹೊಸದಾಗಿ ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು ಸರಿಯಾಗಿ ಇಲ್ಲ ಎಂದರೆ ರಿಜಿಸ್ಟರ್ ಆದರೆ ಕೋರ್ಟು ಮತ್ತು ಕಚೇರಿಯನ್ನು ಅಲೆಯುವ ಸಂದರ್ಭ ಬಂದರೂ ಬರಬಹುದು ಆಸ್ತಿ ಕರೀದಿಸುವವರು ಮೋಸ ಕೂಡ ಹೋಗಬಹುದು ಹಾಗಾದರೆ ನಾವಿಂದು ನಿಮಗೆ ಜಮೀನನ್ನು ಖರೀದಿ ಮಾಡುವುದಕ್ಕಿಂತ ಮೊದಲು ಯಾವೆಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಮತ್ತು ದಾಖಲೆಗಳಲ್ಲಿ ಯಾವ ಅಂಶವನ್ನು ಗಮನಿಸಬೇಕು ಎಂಬುದರ ಕುರಿತಾಗಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಮೊದಲನೆಯದಾಗಿ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು ಯಾವವು ಮತ್ತು ಅವುಗಳಲ್ಲಿ ಯಾವ ಅಂಶವನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದು ಆಕಾರಬಂದ, ಯಾವುದೇ ಒಂದು ಜಮೀನಿನ ಅಂತಿಮ ವಿಸ್ತೀರ್ಣವನ್ನು ಹೊಂದಿರುವ ದಾಖಲೆ ಪತ್ರವನ್ನು ಆಕಾರ್ ಬಂದ್ ಎನ್ನುತ್ತಾರೆ.
ಜಮೀನು ಖರೀದಿದಾರರು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಆಕಾರ್ ಬಂದ್ ನಲ್ಲಿ ಕೆಲವೊಂದು ಸಮಯದಲ್ಲಿ ಪಹಣಿಯಲ್ಲಿ ಇರುವ ಅಳತೆ ಮತ್ತು ಮಾಲಿಕನ ಹೆಸರು ಮತ್ತು ಆಕಾರದಲ್ಲಿರುವ ಅಳತೆ ಮತ್ತು ಮಾಲಿಕನ ಹೆಸರಿನಲ್ಲಿ ವ್ಯತ್ಯಾಸ ಕಂಡು ಬಂದರೂ ಬರಬಹುದು. ಹಾಗಾಗಿ ಈ ಎರಡು ದಾಖಲೆಗಳನ್ನು ಒಂದಕ್ಕೊಂದು ತಾಳೆ ಮಾಡಿ ನೋಡಬೇಕು. ಸಾಕಷ್ಟು ಸಂದರ್ಭಗಳಲ್ಲಿ ಆಕಾರ್ ಬಂದ್ ನಲ್ಲಿರುವಂತೆ ಪಹಣಿಯಲ್ಲಿ ಇರುವುದಿಲ್ಲ ಮತ್ತು ಕೆಲವು ಆಕಾರ್ ಬಂದ್ ಗಳಿಗೆ ಪಹಣಿ ಇರುವುದಿಲ್ಲ. ಕಾರಣ ತಾಂತ್ರಿಕ ತೊಂದರೆಗಳಿಂದ ಹಾಗೂ ಸಂಬಂಧಪಟ್ಟವರ ನಿರ್ಲಕ್ಷದಿಂದ ಬೋಗಸ್ ಪಹಣಿ ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಕಾರ್ ಬಂದ್ ಅನ್ನು ಪರಿಶೀಲನೆ ಮಾಡುವುದು ಉತ್ತಮ.
ಎರಡನೆಯದು ಪಹಣಿ, ಪಹಣಿಯಲ್ಲಿ ಮುಖ್ಯವಾಗಿ ಜಮೀನಿನಲ್ಲಿ ಎಷ್ಟು ಅ ಮತ್ತು ಬ ಖರಾಬ್ ಭೂಮಿ ಹೊಂದಿದೆ ಮತ್ತು ಜಮೀನಿನ ಮೇಲೆ ಸಾಲವಿದ್ದರೆ ಎಷ್ಟು ಸಾಲವಿದೆ ಎಂಬುದನ್ನು ಪಹಣಿಯಲ್ಲಿ ಇರುವ ಋಣಗಳ ಮುಖಾಂತರ ತಿಳಿದುಕೊಳ್ಳಬಹುದು ಮತ್ತು ಹಕ್ಕುಗಳು ಯಾವ ರೀತಿಯಾಗಿ ವರ್ಗಾವಣೆಯಾಗಿದೆ ಎಂಬುದು ಸರಳವಾಗಿ ಗೊತ್ತಾಗುತ್ತದೆ.
ಖರೀದಿದಾರರು ಮುಖ್ಯವಾಗಿ ಪಹಣಿಯಲ್ಲಿ ಸಾಗುವಳಿದಾರರ ಹೆಸರನ್ನು ಗಮನಿಸಬೇಕು ಸದರಿ ಜಮೀನಿಗೆ ಎಷ್ಟು ಜನ ಸಾಗುವಳಿದಾರರು ಇದ್ದಾರೆ ಅಥವಾ ವಾಸ್ತವಿಕ ಹಕ್ಕುದಾರರು ಯಾರು ಇದ್ದಾರೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು
ಮೂರನೇದು ನಮೂನೆ 10. ಜಮೀನಿನ ಪೂರ್ಣ ಸರ್ವೆ ನಂಬರಿನಲ್ಲಿ ಅನೇಕ ಹಿಸ್ಸಾ ಸಂಖ್ಯೆಗಳು ಒಳಗೊಂಡಿರುವ ಹೊಲಗಳು ಇರುತ್ತವೆ. ಇಲ್ಲಿ ಪ್ರತ್ಯೇಕವಾದ ಒಂದು ಭಾಗದ ಹಿಸ್ಸಾ ನಂಬರಿನ ಭಾಗ ವಿಸ್ತೀರ್ಣ ಮತ್ತು ಜಮೀನಿನ ಮಾಲೀಕನ ಹೆಸರನ್ನು ಒಳಗೊಂಡಿರುತ್ತದೆ ಜಮೀನು ನಮೂನೆ ಹತ್ತನ ಒಳಗೊಂಡಿದ್ದರೆ ಸುಲಭವಾಗಿ ನೊಂದಣಿ ಆಗುವುದಕ್ಕೆ ಸಹಾಯವಾಗುತ್ತದೆ.
ನಾಲ್ಕನೆಯದಾಗಿ ಸರ್ವೆ ಸ್ಕೆಚ್, ಜಮೀನಿನ ಸಂಪೂರ್ಣ ಮಾಹಿತಿಯ ನಕ್ಷೆಯ ಮೂಲ ಪಡೆಯುವುದಕ್ಕೆ ಸರ್ವೆ ಸ್ಕೆಚ್ ಎಂದು ಕರೆಯುತ್ತಾರೆ. ಬಿಳಿ ಹಾಳೆಯ ಮೇಲೆ ಚಿತ್ರಸಹಿತ ಅಂಕಿಸಂಖ್ಯೆ ಬಂಡಿದಾರಿ ಕಾಲುದಾರಿ ಮೊದಲಾದ ಮಾಹಿತಿ ನಿಮಗೆ ಸರ್ವೆ ಸ್ಕೆಚ್ ನಲ್ಲಿ ಸಿಗುತ್ತದೆ. ಜಮೀನು ಖರೀದಿ ಮಾಡುವುದಕ್ಕಿಂತ ಮೊದಲು ಜಮೀನನ್ನ ಒಂದು ಬಾರಿ ಸರ್ವೆ ಮಾಡುವುದು ಒಳ್ಳೆಯದು.
ಯಾಕೆಂದರೆ ಒಂದೊಮ್ಮೆ ಜಮೀನು ವಾಸ್ತವದ ಅಳತೆಯಲ್ಲಿ ಕಡಿಮೆ ಇದ್ದರೂ ಇರಬಹುದು ಮತ್ತು ಅಳತೆಯಲ್ಲಿ ವ್ಯತ್ಯಾಸವಾದಾಗ ಜಮೀನಿನ ಸುತ್ತ ಮುತ್ತ ಇರುವ ಮಾಲೀಕರ ಜೊತೆ ಜಗಳ ಮಾಡುವ ಸಂಭವ ಬಂದರೂ ಬರಬಹುದು. ಆದ್ದರಿಂದ ಜಮೀನಿನ ಸರ್ವೆ ಮಾಡಿಸುವುದು ಒಳ್ಳೆಯದು ಸರ್ಕಾರದ ಪರವಾನಿಗೆ ಪಡೆದ ಭೂಮಾಪಕರಿಂದ ಬೇಗ ಸರ್ವೆ ಮಾಡಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.
ಐದನೆಯದು 11 ಇ ಸ್ಕೆಚ್, ಒಂದು ಪೂರ್ಣ ಜಮೀನನ್ನು ವಿಂಗಡನೆ ಮಾಡಿ ಅದನ್ನು ಮಾರುತ್ತಿದ್ದರೆ ಪೂರ್ಣ ಜಮೀನಿನಲ್ಲಿ ಪ್ರತ್ಯೇಕಗೊಂಡ ಜಮೀನಿಗೆ 11ಇ ಸ್ಕೆಚ್ ಬೇಕಾಗುತ್ತದೆ. ಆರನೆಯದು ಖರೀದಿ ಪತ್ರ ಈ ಹಿಂದೆ ಜಮೀನು ಯಾರಿಂದ ಖರೀದಿಯಾಗಿದೆ ಖರೀದಿದಾರರು ಯಾರು ಜಮೀನನ್ನು ಮಾರಾಟ ಮಾಡಿರುವವರು ಯಾರು ಎಂಬ ಹಲವಾರು ಮಾಹಿತಿ ಖರೀದಿ ಪತ್ರದಲ್ಲಿ ಇರುತ್ತದೆ ಇದರಲ್ಲಿ ಖರೀದಿ ಮಾಡುತ್ತಿರುವ ಜಮೀನಿನ ಚೆಕ್ಕುಬಂದಿ ವಿವರವನ್ನು ಕೂಡ ನೋಡಬಹುದು.
ಏಳನೆಯದು ಮುಟೇಶನ್ ದಾಖಲೆ, ಮುಟೇಶನ್ ರಿಪೋರ್ಟ್ ಜಮೀನು ಮೊದಲಿನಿಂದ ಹಿಡಿದು ಇಲ್ಲಿಯವರೆಗೆ ಯಾರಿಂದ ಯಾರು ಯಾರಿಗೆ ಹೋಗಿದೆ ಮತ್ತು ಜಮೀನು ಯಾವ ಯಾವ ರೂಪದಲ್ಲಿ ದಾನ ಕ್ರಯಾ ವಿವಾದ ಹೀಗೆ ಪ್ರತಿಯೊಂದು ಹಂತದಲ್ಲಿ ಏನೇನು ಆಗಿದೆ ಎಂಬುದನ್ನು ಈ ವರದಿಯಲ್ಲಿ ನೋಡಬಹುದು. ಇದನ್ನು ನೆಮ್ಮದಿ ಕೇಂದ್ರದಿಂದ ಪಡೆದುಕೊಳ್ಳಬಹುದು.
ಎಂಟನೆಯದು ಎನ್ ಟಿ ಸಿ. ಈ ದಾಖಲೆಯಲ್ಲಿ ಜಮೀನು ಈ ಹಿಂದೆ ಉಳುವವನೇ ಭೂಮಿಯ ಒಡೆಯ ಬಂದಾಗ ಆಗಿತ್ತು ಅಥವಾ ಜಮೀನಿಗೆ ಸಂಬಂಧಿಸಿದಂತೆ ಯಾರಾದರೂ ಅರ್ಜಿಯನ್ನು ಸಲ್ಲಿಸಿದ್ದರೆ ಎಂಬ ಮಾಹಿತಿ ಒಳಗೊಂಡಿರುತ್ತದೆ ಇದು ತಾಲೂಕ ಆಫೀಸಿನಲ್ಲಿ ದೊರೆಯುತ್ತದೆ. ಒಂಬತ್ತನೆಯದು ಸಾಗುವಳಿ ಚೀಟಿ. ಒಂದು ವೇಳೆ ಜಮೀನು ಬಗರಹುಕುಂ ಅಥವಾ ಸರ್ಕಾರದ ಯಾವುದೇ ಯೋಜನೆಗಳಲ್ಲಿ ಜಮೀನನ್ನು ಮಂಜೂರು ಮಾಡಿತ್ತು ಎಂದರೆ ತಹಶೀಲ್ದಾರ್ ಮೂಲಕ ಜಮೀನನ್ನು ಹೊಂದಿರುವವರು ಸಾಗುವಳಿ ಚೀಟಿಯನ್ನು ಪಡೆದುಕೊಂಡಿರುತ್ತಾರೆ.
ಸಾಗುವಳಿ ಚೀಟಿಯನ್ನು ಪಡೆದುಕೊಂಡವರು ಜಮೀನನ್ನು ಇಷ್ಟು ವರ್ಷ ಎಂದು ಯಾರಿಗೂ ಪರಭಾರೆ ಮಾಡುವಂತಿಲ್ಲ ಎಂಬುದಿರುತ್ತದೆ. ಉದಾಹರಣೆಗೆ ಹತ್ತು ವರ್ಷ ಇರಬಹುದು ಹದಿನೈದು ವರ್ಷ ಇರಬಹುದು ಅಥವಾ ಇಪ್ಪತ್ತು ವರ್ಷ ಇರಬಹುದು. ಒಂದು ವೇಳೆ ಸಾಗುವಳಿ ಚೀಟಿಯ ಅವಧಿ ಮುಗಿದಿದ್ದರೆ ಅವರು ತಹಶೀಲ್ದಾರರಿಂದ ಎನ್ ಒ ಸಿ ಪಡೆದುಕೊಂಡು ಜಮೀನನ್ನು ಮಾರಾಟ ಮಾಡಬಹುದು
ಹತ್ತನೆಯದು ಇಸಿ. ಖರೀದಿದಾರರು ಮುಖ್ಯವಾಗಿ ಗಮನಿಸಬೇಕಾದದ್ದು ಇಸಿ ಈ ಪ್ರಮಾಣ ಪತ್ರದಿಂದ ಸದರಿ ಭೂಮಿಯ ಹೆಸರಿನಲ್ಲಿ ಎಷ್ಟು ಸಾಲವಿದೆ ಮತ್ತು ಋಣಗಳು ಮತ್ತು ನಿರ್ದಿಷ್ಟ ಹಕ್ಕುಗಳು ಎಲ್ಲದರ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದನ್ನು ಉಪ ನೋಂದಣಿ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಪಡೆದುಕೊಳ್ಳಬಹುದು. ಹನ್ನೊಂದನೆಯದು ಪಿ ಟಿ ಸಿ ಎಲ್. ಪ್ರೀವೆಂಟೇಶನ್ ಆಫ್ ಸರ್ಟನ್ ಲ್ಯಾಂಡ್ ಆಕ್ಟ್ ಈ ಕಾಯಿದೆಗೆ ಒಳಪಡುವ ಭೂಮಿಯನ್ನು ಖರೀದಿಸುವುದಕ್ಕೆ ಬರುವುದಿಲ್ಲ. ಖರೀದಿ ಮಾಡಬೇಕಾದಂತಹ ಭೂಮಿಯು ಪಿತ್ರಾರ್ಜಿತವಾದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆಯನ್ನು ಪಡೆದುಕೊಳ್ಳುವುದು ಹಾಗೂ ಖರೀದಿ ಪತ್ರದಲ್ಲಿ ಎಲ್ಲರ ಸಹಿಯನ್ನು ಪಡೆದುಕೊಳ್ಳುವುದು ಉತ್ತಮ.
ಜಮೀನು ಖರೀದಿ ಮಾಡುವವರು ರೈತರಾಗಿರಬೇಕು ಇಲ್ಲವೇ ಅವರು ಮೂಲತಹ ರೈತರ ಕುಟುಂಬದವರಾಗಿರಬೇಕು. ಇನ್ನು ಖರೀದಿ ಮಾಡುತ್ತಿರುವ ಜಮೀನಿನ ಬಗ್ಗೆ ಗೊಂದಲವಿದ್ದರೆ ನಿಮ್ಮ ಸ್ಥಳೀಯ ವಕೀಲರನ್ನು ಭೇಟಿ ಮಾಡಿ ದಾಖಲೆಗಳ ಸಹಿತ ವಿಚಾರಣೆ ಮಾಡಿಕೊಳ್ಳುವುದು ಒಳ್ಳೆಯದು. ಈ ರೀತಿಯಾಗಿ ನೀವೇನಾದರೂ ಕೃಷಿ ಭೂಮಿಯನ್ನು ಖರೀದಿ ಮಾಡುತ್ತಿದ್ದರೆ ನಾವು ಮೇಲೆ ತಿಳಿಸಿರುವ ನಿಯಮಗಳನ್ನು ಪಾಲಿಸುವುದು ಒಳ್ಳೆಯದು.