ಮನೆಕಟ್ಟಲು ಗ್ರಾಮಪಂಚಾಯ್ತಿಯಿಂದ ಅನುಮತಿ ಪಡೆಯುವುದು ಹೇಗೆ, ಏನೆಲ್ಲಾ ದಾಖಲೆಬೇಕು ನೋಡಿ

0 10,947

ನಮ್ಮದೆ ಸ್ವಂತ ಮನೆ ಕಟ್ಟಬೇಕೆಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಹಳ್ಳಿಗಳಲ್ಲಿ ಮನೆ ಕಟ್ಟಬೇಕೆಂದರೆ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಹಾಗಾದರೆ ಗ್ರಾಮ ಪಂಚಾಯತಿಯಿಂದ ಮನೆ ಕಟ್ಟಲು ಅನುಮತಿ ಹೇಗೆ ಪಡೆಯುವುದು ಅದರ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಗ್ರಾಮೀಣ ಭಾಗದಲ್ಲಿ ಹೊಸದಾಗಿ ಮನೆ ಕಟ್ಟಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮನೆ ಕಟ್ಟಲು ಅನುಮತಿ ಕೇಳಬೇಕಾದರೆ ಕೆಲವು ದಾಖಲೆಗಳು ಅವಶ್ಯವಾಗಿರುತ್ತದೆ ಕಡ್ಡಾಯವಾಗಿ ಮನೆ ಹಕ್ಕು ಪತ್ರ ಬೇಕಾಗುತ್ತದೆ. ಮನೆ ಹಕ್ಕು ಪತ್ರ ಗ್ರಾಮ ಪಂಚಾಯತಿಯಲ್ಲಿ ಪಡೆಯಬೇಕಾಗುತ್ತದೆ.

ಆಧಾರ್ ಕಾರ್ಡ್ ಹಾಗೂ ಸ್ಥಳೀಯ ಸಿವಿಲ್ ಎಂಜಿನಿಯರ್ ನಿಂದ ಪಡೆದ ಮನೆಯ ನೀಲಿ ನಕ್ಷೆ ಇದರಿಂದ ಗುಣಮಟ್ಟದ ಮನೆ ಕಟ್ಟಲು ಸಹಾಯವಾಗುತ್ತದೆ, ಮನೆ ಕಂದಾಯ ರಶೀದಿ, ಮನೆ ಕಟ್ಟ ಬೇಕಿರುವ ಖಾಲಿ ಜಾಗದ ಫೋಟೊ, ಮನೆಯ ಜೊತೆಗೆ ಶೌಚಾಲಯವನ್ನು ಕಟ್ಟುತ್ತೇವೆ ಎಂದು ಹೇಳಿಕೆ ಪತ್ರ ಕೊಡಬೇಕು ಇದರಿಂದ ಶೌಚಾಲಯ ನಿರ್ಮಿಸಲು ಸರ್ಕಾರದಿಂದ 12,000 ST ಹಾಗು SC ಅವರಿಗೆ 15000ರೂಪಾಯಿ ಸಹಾಯಧನ ಸಿಗುತ್ತದೆ.

ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಅರ್ಜಿಯೊಂದಿಗೆ ವ್ಯಾಪ್ತಿಗೆ ಬರುವ ಗ್ರಾಮಪಂಚಾಯತಿಗೆ ಸಲ್ಲಿಸಬೇಕು. ನಂತರ ಗ್ರಾಮ ಪಂಚಾಯತಿಗೆ ಬಂದ ಅರ್ಜಿಗಳನ್ನು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಪರಿಶೀಲಿಸಿದ ನಂತರ ಮನೆ ಕಟ್ಟುವ ಸ್ಥಳಕ್ಕೆ ಪರಿಶೀಲನೆಗೆ ಬರುತ್ತಾರೆ. ಪಿಡಿಓ ಪರಿಶೀಲನೆಗೆ ಬಂದಾಗ ಕೆಲವು ಮಾರ್ಪಾಡುಗಳನ್ನು ಮಾಡಬಹುದು, ನಿರ್ಬಂಧಗಳನ್ನು ಹಾಕಬಹುದು. ದಾಖಲಾತಿಗಳು ಸರಿಯಾಗಿದ್ದರೆ ಕಡತಗಳನ್ನು ಮುಂದಿನ ಗ್ರಾಮಪಂಚಾಯತಿ ಸಾಮಾನ್ಯ ಸಭೆಯಲ್ಲಿ ಇಡಲಾಗುತ್ತದೆ.

ಸಾಮಾನ್ಯ ಸಭೆಯಲ್ಲಿ ಮನೆ ಕಟ್ಟಲು ಅನುಮತಿ ಸಿಕ್ಕರೆ ಅಧಿಕಾರಿಗಳು ಮುಂದಿನ 30ದಿನಗಳಲ್ಲಿ ಆಕ್ಷೇಪಣೆಗೆ ನೊಟೀಸ್ ಹೊರಡಿಸಿ ಗ್ರಾಮದಲ್ಲಿ ಪ್ರಚಾರ ಮಾಡಲಾಗುತ್ತದೆ. ನಿಗದಿಪಡಿಸಿದ ದಿನಾಂಕದೊಳಗೆ ಯಾರಿಂದಲೂ ಆಕ್ಷೇಪಣೆ ಸಲ್ಲಿಕೆಯಾಗದೆ ಇದ್ದಲ್ಲಿ ಪಿಡಿಓ ಮನೆ ಕಟ್ಟಲು ಅನುಮತಿ ಕೊಡುತ್ತಾರೆ. ಈ ರೀತಿಯಾಗಿ ಮನೆ ಕಟ್ಟಲು ಗ್ರಾಮ ಪಂಚಾಯತಿಯಲ್ಲಿ ಅನುಮತಿ ಪಡೆದು ಮನೆ ಕಟ್ಟಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮನೆ ಕಟ್ಟುವವರಿಗೆ ಈ ಮಾಹಿತಿ ಉಪಯುಕ್ತವಾಗಿದೆ.

Leave A Reply

Your email address will not be published.