Krishi sinchayi: ರೈತರಿಗೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಯಾರು ಅರ್ಹರು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು. ಯಾವಾಗ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಗುತ್ತದೆ. ರೈತರಿಗೆ ಸ್ಪಿಂಕ್ಲರ್ ಹಾಗೂ ಪೈಪ್ ಪಡೆಯಲು ಹೊಸ ಅರ್ಜಿಯನ್ನು ಕರೆಯಲಾಗಿದೆ ಅಷ್ಟೆ ಅಲ್ಲದೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಹೊಸ ಅರ್ಜಿ ಸಲ್ಲಿಸಲು ಕರೆಯಲಾಗಿದೆ. ರೈತರಿಗೆ ಸಹಾಯಧನ ಹಾಗೂ ಸಬ್ಸಿಡಿ ಯೋಜನೆಯನ್ನು ಒಳಗೊಂಡಿರುವ ಕೇಂದ್ರ ಸರ್ಕಾರದ ಕೃಷಿ ಸಿಂಚಾಯಿ ಯೋಜನೆಯಡಿ ಆಯಾ ಗ್ರಾಮಕ್ಕೆ ಸಂಬಂಧಿಸಿದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು.

ಕೃಷಿ ಪೂರಕ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡಲು ಸರ್ಕಾರದಿಂದ ರೈತರಿಗೆ ಅರ್ಜಿ ಆಹ್ವಾನಿಸಲಾಗಿದೆ. 2024 ಮತ್ತು 25 ನೆ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶೇಕಡಾ 50 ರಷ್ಟು ಸಹಾಯಧನದಲ್ಲಿ ರೈತರಿಗೆ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಹಾಗೂ ಪಿವಿಸಿ ಪೈಪ್ ಪಡೆಯಲು ಹಾಗೂ ನೀರು ಎತ್ತುವ ಸಾಧನವಾಗಿ ಪಂಪ ಸೆಟ್ ಪಡೆಯಬಹುದು ಅಂತಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ತಮಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ವಿಶಾಲ ಉದ್ದೇಶವೆಂದರೆ ಕ್ಷೇತ್ರ ಮಟ್ಟದಲ್ಲಿ ನೀರಾವರಿ ಹೂಡಿಕೆಗಳ ಒಮ್ಮುಖವನ್ನು ಸಾಧಿಸಬಹುದಾಗಿದೆ. ಜಮೀನಿನಲ್ಲಿ ನೀರಿನ ಬೌತಿಕ ಪ್ರವೇಶವನ್ನು ಹೆಚ್ಚಿಸಿ ಮತ್ತು ಖಚಿತವಾದ ನೀರಾವರಿಯಡಿಯಲ್ಲಿ ಕೃಷಿ ಪ್ರದೇಶವನ್ನು ವಿಸ್ತರಿಸಿ ಸೂಕ್ತವಾದ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳ ಮೂಲಕ ನೀರನ್ನು ಉತ್ತಮವಾಗಿ ಬಳಸಿಕೊಳ್ಳಲು ನೀರಿನ ಮೂಲಕ ಏಕೀಕರಣ ಮತ್ತು ಅದರ ಸಮರ್ಥ ಬಳಕೆ ಮಾಡಿ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಅವಧಿ ಮತ್ತು ಪ್ರಮಾಣದ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಜಮೀನಿನಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸಿ ನಿಖರ ನೀರಾವರಿ ಮತ್ತು ಇತರ ನೀರು ಕುಡಿಸುವ ತಂತ್ರಜ್ಞಾನ ಹಾಗೂ ನೀರು ಉಳಿಸುವ ತಂತ್ರಜ್ಞಾನ ಅಳವಡಿಕೆಯನ್ನು ಹೆಚ್ಚಿಸಿ, ಜಲಚರಗಳ ಮರು ಪೂರ್ಣವನ್ನು ಹೆಚ್ಚಿಸಿ ಸುಸ್ಥಿರ ಜಲ ಸಂರಕ್ಷಣೆ ಅಭ್ಯಾಸಗಳನ್ನು ಪರಿಚಯಿಸಿ ನೀರು ಮತ್ತು ಮಣ್ಣಿನ ಸರಂಕ್ಷಣೆ, ಅಂತರ್ಜಾಲದ ಪುನರ್ ಉತ್ಪಾದನೆ ಮಾಡುವುದಾಗಿದೆ.

ರೈತರಿಗೆ ಜೀವನೋಪಾಯದ ಆಯ್ಕೆಯನ್ನು ಒದಗಿಸುವುದು ಮತ್ತು ಇತರ ಎಲ್ಲ ಚಟುವಟಿಕೆಗಳ ಕಡೆಗೆ ಜಲಾನಯನ ವಿಧಾನವನ್ನು ಬಳಸಿಕೊಂಡು ಮಳೆಯಾಶ್ರಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕು. ರೈತರು ಬೆಳೆ ಬೆಳೆದರೆ ಮಾತ್ರ ನಮಗೆಲ್ಲ ಹೊಟ್ಟೆಗೆ ಅನ್ನ ಅಂತಹ ರೈತರಿಗೆ ಕೃಷಿ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತದೆ. ಹೆಚ್ಚಿನ ರೀತಿಯಲ್ಲಿ ಸರ್ಕಾರ ರೈತರಿಗೆ ಬೆಂಬಲ ಮಾಡಲಿ.

Leave a Reply

Your email address will not be published. Required fields are marked *