ಸೊಪ್ಪುಗಳಲ್ಲಿ ಕುತ್ತುಂಬರಿ ಸೊಪ್ಪು ಕೂಡ ಒಂದು. ಇದು ಇಲ್ಲದೆ ಕೆಲವು ಆಹಾರ ಪದಾರ್ಥಗಳು ಅಪೂರ್ಣವಾಗುತ್ತವೆ. ಆದರೆ ಕೊತ್ತಂಬರಿ ಸೊಪ್ಪು ಬೇಗನೆ ಕೊಳೆತುಹೋಗುತ್ತದೆ. ಇದನ್ನು ಸರಿಯಾಗಿ ಶೇಖರಿಸಿ ಇಡುವುದು ಎಲ್ಲರಿಗೂ ತಿಳಿದಿರುವುದಿಲ್ಲ. ಆದ್ದರಿಂದ ಕೊತ್ತಂಬರಿ ಸೊಪ್ಪನ್ನು ಯಾವರೀತಿಯಾಗಿ ಒಂದು ವಾರದ ತನಕ ಶೇಖರಿಸಿ ಇಡಬಹುದು ಎಂದು ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೊತ್ತಂಬರಿ ಸೊಪ್ಪು ಎಂದ ತಕ್ಷಣವೇ ನಮಗೆ ಒಂದು ದಿನದ ಉಪಯೋಗಕ್ಕೆ ಮಾತ್ರ ಬರುತ್ತದೆ ಎಂದು ತಿಳಿದುಕೊಂಡಿರುತ್ತೇವೆ. ಆದರೆ ಅದನ್ನು ಒಂದು ವಾರದ ವರೆಗೆ ಇಡಬಹುದು ಎಂದು ನಮಗೆ ತಿಳಿದಿಲ್ಲ. ಪ್ರಿಜ್ ನಲ್ಲಿ ಇಟ್ಟರು ಸಹ ಹೆಚ್ಚೆಂದರೆ ಎರಡು ದಿನ ಮಾತ್ರ ಇಡಲು ಸಾಧ್ಯ. ಹೀಗೆ ಇಟ್ಟರು ಅದು ಬೇಗ ಬಾಡಿಹೋಗುತ್ತದೆ. ಅದರಲ್ಲಿ ಯಾವುದೇ ಅದರ ಸಾರ ಇರುವುದಿಲ್ಲ. ಹೀಗಿದ್ದಾಗ ಅದನ್ನ ಇಡುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲು ಕಾಡುತ್ತದೆ. ಕೊತ್ತಂಬರಿ ಸೊಪ್ಪು ಎಂದ ತಕ್ಷಣ ಎಲ್ಲ ಅಡುಗೆಗೂ ಅದನ್ನ ಬಳಸುತ್ತಾರೆ.

ಪ್ರತಿದಿನವೂ ಬೇಕಾಗುತ್ತದೆ. ಆದರೆ ಅದನ್ನು ದಿನಾಲು ಸಂತೆಗೆ ಹೋಗಿ ತರಲು ಆಗುವದಿಲ್ಲ. ಹಳ್ಳಿಗಳಲ್ಲಾದರೆ ಅವರ ಕೈತೋಟದಲ್ಲಿ ಸ್ವಲ್ಪ ಸ್ವಲ್ಪ ಬೆಳೆದುಕೊಳ್ಳುತ್ತಾರೆ. ಆದರೆ ಪೇಟೆಗಳಲ್ಲಿ ಅದು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅವರು ಬೇಕು ಅಂದ ತಕ್ಷಣ ಸಂತೆಗೆ ಹೋಗಿ ತರಬೇಕಾಗುತ್ತದೆ. ದಿನಾಲು ಹೋಗಿ ತರಲು ಕಷ್ಟವಾಗುತ್ತದೆ. ಇಷ್ಟು ಕಷ್ಟ ಪಡುವಬದಲು ಅದಕ್ಕೇನಾದರೂ ಪರಿಹಾರ ಹುಡುಕಿಕೊಳ್ಳಲೇಬೇಕು. ಮೊದಲನೆಯದಾಗಿ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಅದರಲ್ಲಿರುವ ಕಸಗಳನ್ನೆಲ್ಲ ಬೇರೆಮಾಡಿ ಸ್ವಚ್ಛಗೊಳಿಸಬೇಕು.

ನಂತರ ಅದನ್ನ ಸ್ವಲ್ಪ ಹೊತ್ತು ನೀರು ಆರಲು ಬಿಡಬೇಕು. ನೀರು ಸ್ವಲ್ಪ ಆರಿದಮೇಲೆ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಬೇಕು. ಅದನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಹರಡಿಡಬೇಕು. ಎರಡು ಗಂಟೆಗಳ ನಂತರ ಅದು ಚೆನ್ನಾಗಿ ಒಣಗಿರುತ್ತದೆ. ಅದನ್ನ ಒಂದು ಗಾಜಿನ ಬಾಟಲಿ ಅಥವಾ ಪ್ಲಾಸ್ಟಿಕ್ ಬಾಟಲಿನಲ್ಲಿ ಸ್ವಲ್ಪವೂ ನೀರಿನ ಅಂಶ ಇರದಹಾಗೆ ಒಣಗಿಸಿ ನಂತರ ಬಾಟಲಿಯ ಒಳಗಡೆ ಒಂದು ಟಿಶ್ಯೂಪೇಪರ್ ಹಾಕಬೇಕು. ನಂತರ ಸೊಪ್ಪನ್ನು ತುಂಬಿ ಮುಚ್ಚಳಕ್ಕೆ ಒಂದು ಸ್ವಚ್ಛವಾಗಿರುವ ಪ್ಲಾಸ್ಟಿಕ್ ಅನ್ನು ಹಾಕಿ ಗಟ್ಟಿಯಾಗಿ ಮುಚ್ಚಲಹಾಕಿ ಇಡಬೇಕು. ಹೀಗೆ ಮಾಡುವದರಿಂದ ಸೊಪ್ಪನ್ನು ಒಂದುವಾರದವರೆಗೆ ಇಡಬಹುದು. ತಂದದಿನ ಹೇಗೆ ಇತ್ತೋ ಹಾಗೆಯೇ ಇರುತ್ತದೆ.

Leave a Reply

Your email address will not be published. Required fields are marked *