ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಲೇಬೇಕಾದ ಒಂದು ಸೊಪ್ಪು ಈ ಕೊತ್ತಂಬರಿ ಸೊಪ್ಪು ಸರ್ವಕಾಲಕ್ಕೂ ಈ ಸೊಪ್ಪನ್ನು ನಮ್ಮ ಜನರು ಅಡುಗೆಗಾಗಿ ಹೆಚ್ಚಾಗಿ ಮಾಂಸಾಹಾರದಲ್ಲಿ ಕೊತ್ತಂಬರಿ ಸೊಪ್ಪು ಇಲ್ಲದೆ ಆಹಾರ ರುಚಿಸುವುದೇ ಇಲ್ಲ ಕೊತ್ತಂಬರಿ ಸೊಪ್ಪು ತನ್ನದೇ ಆದ ಮಹತ್ವ ಹೊಂದಿದ್ದು ಮಾರುಕಟ್ಟೆಯಲ್ಲೂ ಅದರದ್ದೇ ಆದ ಸ್ಥಾನ ಕಾಯ್ದುಕೊಂಡಿರುತ್ತದೆ ಸರ್ವೇ ಸಾಮಾನ್ಯವಾಗಿ ಅಜೀರ್ಣದ ಸಮಸ್ಯೆ ಇರುವ ಜನರು ಮಜ್ಜಿಗೆಯ ಜೊತೆಗೆ ಕೊತ್ತಂಬರಿ ಸೊಪ್ಪನ್ನು ಸೇವಿಸುತ್ತಾರೆ ಹಾಗೆಯೇ ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ ತಿಂಡಿಯ ರುಚಿಯೇ ಬೇರೇ ಚಟ್ನಿಯಂತು ತಿನ್ನಲು ಬಹಳ ರುಚಿಯಾಗಿರುತ್ತದೆ.
ಇಂತಹ ಕೊತ್ತಂಬರಿ ಸೊಪ್ಪು ಬರಿಯ ರುಚಿಗಷ್ಟೇ ಅಲ್ಲದೇ ತೇವಾಂಶ ಸಾರಜನಕ ಮೇದಸ್ಸು ಖನಿಜಾಂಶ ಕಾರ್ಬೊ ಹೈಡ್ರೇಟ್ಸ್ ಕ್ಯಾಲ್ಸಿಯಮ್ ಫಾಸ್ಪರಸ್ ಕಬ್ಬಿಣದ ಅಂಶ ತೀಯಾಮಿನ್ ರೈಬೋಫ್ಲಾವಿನ್ ನಿಯಾಸಿನ್ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಪೋಟಾಸಿಯಮ್ ಆಕ್ಸಾಲಿಕ್ ಆಸಿಡ್ ನಂತಹ ಹಲವಾರು ಜೀವಸತ್ವಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ ಅಲ್ಲದೇ ಈ ಸೊಪ್ಪು ಹಲವಾರು ರೋಗಗಳಿಗೆ ರಾಮಭಾಣ ಕೂಡ ಹೌದು ಕೊತ್ತಂಬರಿ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಾವಿಂದು ಕಣ್ಣಾಯಿಸೋಣ ಬನ್ನಿ
ಪ್ರತಿದಿನ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರಸಿ ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ, ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಬಿಸಿಲಿನ ತಾಪದಿಂದ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿಗೆ ಹಿಂಡಿದರೆ ರಕ್ತಸ್ರಾವ ತಕ್ಷಣವೇ ನಿಲುತ್ತದೆ
ಎರಡು ಚಮಚ ಕೊತ್ತಂಬರಿ ಸೊಪ್ಪಿನ ತಾಜಾ ರಸವನ್ನು ಒಂದು ಲೋಟ ಮಜ್ಜಿಗೆಯಲ್ಲಿ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ವಾಂತಿ ಹಾಗೂ ಬಿಕ್ಕಳಿಕೆ ನಿವಾರಣೆಯಾಗುತ್ತದೆ, ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಹಸಿಯಾಗಿ ಊಟದ ನಂತರ ಅಗಿದು ತಿನ್ನುವುದರಿಂದ ಹಲ್ಲುಗಳು ಗಟ್ಟಿಮುಟ್ಟಾಗುತ್ತವೆ ಅಲ್ಲದೇ ದಂತಕ್ಷಯದ ಸಮಸ್ಯೆ ದೂರಾಗುತ್ತದೆ.