ಫ್ಯಾಕ್ಟರಿಗಳಲ್ಲಿ ಕೋಳಿ ಮರಿಗಳನ್ನು ಆರ್ಟಿಫಿಷಿಯಲ್ ಕಾವು ಕೊಟ್ಟು ಹೇಗೆ ತಯಾರಿಸುತ್ತಾರೆ, ಮರಿಗಳನ್ನು ಕಡಿಮೆ ಸಮಯದಲ್ಲಿ ಹೇಗೆ ಬೆಳೆಸುತ್ತಾರೆ ಹಾಗೂ ಫ್ಯಾಕ್ಟರಿಗಳಲ್ಲಿ ಕೋಳಿ ಮಾಂಸವನ್ನು ಹೇಗೆ ತಯಾರಿಸುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆಯಿದೆ. ಸಾಮಾನ್ಯವಾಗಿ ಮನೆಯಲ್ಲಿ ಸಾಕುವ ಕೋಳಿ 21 ದಿನಗಳಲ್ಲಿ ತಾನೆ ಕಾವು ಕೊಟ್ಟು ಮರಿಗಳನ್ನು ಮಾಡುತ್ತದೆ ಆದರೆ ಫ್ಯಾಕ್ಟರಿಗಳಲ್ಲಿ ಯಂತ್ರಗಳ ಮೂಲಕ ಆರ್ಟಿಫಿಷಿಯಲ್ ಕಾವು ಕೊಟ್ಟು ಮರಿಗಳನ್ನು ಮಾಡುತ್ತಾರೆ. ಮೊದಲು ಮೊಟ್ಟೆ ಫಾರಂನಲ್ಲಿ ಶೇಖರಿಸಿದ ಮೊಟ್ಟೆಗಳನ್ನು ಡಿವೈಡ್ ಮಾಡಿ ಅದರಲ್ಲಿ ಕೆಲವು ಮೊಟ್ಟೆಗಳನ್ನು ಅಂಗಡಿಗಳಿಗೆ ಕಳುಹಿಸುತ್ತಾರೆ. ಇನ್ನು ಕೆಲವು ಆಯ್ದ ಮೊಟ್ಟೆಗಳನ್ನು ಟ್ರಕ್ ಗಳ ಸಹಾಯದಿಂದ ಇನ್ ಕುಬೇಟರ್ ಫ್ಯಾಕ್ಟರಿಗಳಿಗೆ ಕಳುಹಿಸುತ್ತಾರೆ. ಫ್ಯಾಕ್ಟರಿಗಳಲ್ಲಿ ಮೊಟ್ಟೆಗಳನ್ನು ಟ್ರೇಗಳ ಸಹಾಯದಿಂದ ಇನ್ ಕುಬೇಟರ್ ನಲ್ಲಿ ಇಡುತ್ತಾರೆ. ಒಂದು ಇನ್ ಕುಬೇಟರ್ ನಲ್ಲಿ 60,000 ಮೊಟ್ಟೆಗಳನ್ನು 18 ದಿನಗಳವರೆಗೆ ಇಡುತ್ತಾರೆ. ಇನ್ ಕುಬೇಟರ್ ನಲ್ಲಿ ಮೊಟ್ಟೆಗಳು ಕೋಳಿ ಮರಿಗಳಾಗಿ ಬದಲಾಗಲು ಬೇಕಾಗುವ ಟೆಂಪರೇಚರ್ ಸೆಟ್ ಮಾಡುತ್ತಾರೆ.
18 ದಿನಗಳ ನಂತರ ಮೊಟ್ಟೆಗಳನ್ನು ತೆಗೆದು ಸ್ಕ್ಯಾನ್ ಮಾಡುತ್ತಾರೆ. ಸ್ಕ್ಯಾನ್ ಮಾಡುವುದರಿಂದ ಯಾವ ಮೊಟ್ಟೆ ಮರಿಯಾಗುವುದಿಲ್ಲ ಎಂಬುದನ್ನು ತಿಳಿಯಬಹುದಾಗಿದೆ. ಮರಿಗಳಾಗದೆ ಇರುವ ಮೊಟ್ಟೆಗಳನ್ನು ಬೇರೆ ಮಾಡುತ್ತಾರೆ. ನಂತರ ಯಂತ್ರದ ಸಹಾಯದಿಂದ ಮೊಟ್ಟೆಗಳನ್ನು ಪ್ಲಾಸ್ಟಿಕ್ ಟ್ರೇಗಳಿಗೆ ಬದಲಾಯಿಸುತ್ತಾರೆ. ನಂತರ ಮೊಟ್ಟೆಗಳಿಂದ ಆರೋಗ್ಯವಾಗಿ ಕೋಳಿ ಮರಿ ಹೊರಬರಲು ಮತ್ತು ಮರಿಗಳಿಗೆ ಖಾಯಿಲೆ ಬರಬಾರದು ಎಂದು ಮೊಟ್ಟೆಗಳಿಗೆ ಯಂತ್ರದ ಸಹಾಯದಿಂದ ಸರ್ಟಿಫೈಡ್ ಆರ್ಗಾನಿಕ್ ವ್ಯಾಕ್ಸಿನ್ ಕೊಡಲಾಗುತ್ತದೆ. ಪ್ಲಾಸ್ಟಿಕ್ ಟ್ರೇಗಳ ಸೈಡ್ ನಲ್ಲಿ ಕೋಳಿ ಮರಿಗಳಿಗೆ ತಿನ್ನಲು ಆಹಾರವನ್ನು ತುಂಬಿಸಲಾಗುತ್ತದೆ. ನಂತರ ಆ ಟ್ರೇಗಳನ್ನು ಮತ್ತೊಂದು ಇನ್ ಕುಬೇಟರ್ ನಲ್ಲಿ ಮೂರು ದಿನಗಳ ಕಾಲ ಇಡುತ್ತಾರೆ. ಹೀಗೆ 21 ದಿನಗಳ ನಂತರ ಮೊಟ್ಟೆಯಿಂದ ಕೋಳಿ ಮರಿಗಳು ಹೊರ ಬರುತ್ತವೆ. ಕೋಳಿ ಮರಿಗಳನ್ನು ಕನ್ವೇಯರ್ ಬೆಲ್ಟ್ ಗಳ ಸಹಾಯದಿಂದ ಚೆಕ್ಕಿಂಗ್ ಗೆ ಕಳುಹಿಸಲಾಗುತ್ತದೆ ಅಲ್ಲಿ ಅವುಗಳಿಗೆ ತೊಂದರೆ ಇದೆಯಾ ಎಂದು ಗಮನಿಸಿ ಬೇರೆ ಮಾಡುತ್ತಾರೆ.
ನಂತರ ಮರಿಗಳನ್ನು ಫಾರಂಗೆ ಕಳುಹಿಸಲಾಗುತ್ತದೆ ಅಲ್ಲಿ ಮರಿಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಹೈ ಪ್ರೊಟೀನ್ ಇರುವ ಆಹಾರವನ್ನು, ಔಷಧಿ ಮಿಕ್ಸ್ ಮಾಡಿದ ನೀರನ್ನು ಕೊಡಲಾಗುತ್ತದೆ. ಒಂದೊಂದು ಫಾರಂನಲ್ಲಿ ಬೇರೆ ಬೇರೆ ರೀತಿ ಟೆಕ್ನಾಲಜಿ ಬಳಸಿಕೊಂಡು ಕೋಳಿ ಮರಿಗಳನ್ನು ಬೆಳೆಸುತ್ತಾರೆ. ಫಾರಂಗಳಲ್ಲಿ ಒಂದೆ ರೀತಿಯ ಟೆಂಪರೇಚರ್ ಇರಲು 24ಗಂಟೆಗಳ ಕಾಲ ಕೂಲರ್ಸ್ ಮತ್ತು ಲೈಟ್ಸ್ ಆನ್ ಮಾಡಿ ಇಡುತ್ತಾರೆ. ಮರಿಗಳು ಕೇವಲ 48 ದಿನಗಳಲ್ಲಿ ಬೆಳೆದು ದೊಡ್ಡದಾಗುತ್ತದೆ. ಮೊಟ್ಟೆ ಇಡುವ ಕೋಳಿಗಳು ಬೆಳೆಯಲು ಹೆಚ್ಚು ಸಮಯ ಬೇಕಾಗುತ್ತದೆ. ಕೋಳಿ ಮೊಟ್ಟೆ ಫಾರಂನಲ್ಲಿ ಒಂದೊಂದು ಕೋಳಿ ಪ್ರತಿವರ್ಷ ಸುಮಾರು 250 ಮೊಟ್ಟೆಗಳವರೆಗೆ ಇಡುತ್ತದೆ. ಕೆಲವು ಫಾರಂಗಳಲ್ಲಿ ಮೊಟ್ಟೆಗಳನ್ನು ಮನುಷ್ಯರೆ ಶೇಖರಿಸುತ್ತಾರೆ. ಇನ್ನು ಕೆಲವು ಫಾರಂಗಳಲ್ಲಿ ಯಂತ್ರಗಳ ಸಹಾಯದಿಂದ ಮೊಟ್ಟೆಗಳನ್ನು ಶೇಖರಿಸುತ್ತಾರೆ. ದೊಡ್ಡ ದೊಡ್ಡ ಫಾರಂಗಳಲ್ಲಿ ಆಟೋಮೆಟಿಕ್ ಸಿಸ್ಟಮ್ ಇರುತ್ತದೆ.

ಸಣ್ಣ ಫಾರಂಗಳಲ್ಲಿ ಮಾಂಸಕ್ಕಾಗಿ ಕೋಳಿಗಳನ್ನು ಮ್ಯಾನ್ಯುವೆಲ್ ಆಗಿ ಟ್ರಕ್ ಗಳಿಗೆ ಲೋಡ್ ಮಾಡುತ್ತಾರೆ. ದೊಡ್ಡ ದೊಡ್ಡ ಫಾರಂಗಳಲ್ಲಿ ಆಟೋಮೆಟಿಕ್ ಯಂತ್ರದ ಸಹಾಯದಿಂದ ಲೋಡ್ ಮಾಡುತ್ತಾರೆ. ನಂತರ ಅವುಗಳನ್ನು ಮಾಂಸದ ಅಂಗಡಿಗಳಿಗೆ ಅಥವಾ ಮೀಟ್ ಫ್ಯಾಕ್ಟರಿಗಳಿಗೆ ಕಳುಹಿಸುತ್ತಾರೆ. ಮೀಟ್ ಫ್ಯಾಕ್ಟರಿಗಳಲ್ಲಿ ಕೋಳಿಗಳನ್ನು ಒಂದು ಹ್ಯಾಂಗರ್ ಲೈನ್ ಗೆ ತೂಗಿ ಹಾಕುತ್ತಾರೆ ನಂತರ ಯಂತ್ರಗಳ ಸಹಾಯದಿಂದ ಕಟ್ ಮಾಡುತ್ತಾರೆ. ನಂತರ ಅವುಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಿ ರೆಕ್ಕೆಪುಕ್ಕಗಳನ್ನು ತೆಗೆಯುತ್ತಾರೆ. ನಂತರ ಚಿಕನ್, ಕಬಾಬ್ ಮುಂತಾದವುಗಳನ್ನು ತಯಾರಿಸಲಾಗುತ್ತದೆ. ಹೀಗೆ ಮಾಡುವಾಗ ಫ್ಯಾಕ್ಟರಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಲಾಗುತ್ತದೆ. ಫ್ಯಾಕ್ಟರಿಗಳಲ್ಲಿ ಕೋಳಿ ಮಾಂಸ ತಯಾರಿಸುವ ಪ್ರೊಸೆಸ್ ಅನ್ನು ವೀಡಿಯೋ ಮೂಲಕ ನೋಡಬಹುದಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466