ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು. ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು, ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ, ಈ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ. ಈ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಅಧಿಕ ಪ್ರೊಟಿನ್‌ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ. ಇವುಗಳ ಸಾಕಣೆ ಅತ್ಯಂತ ಸುಲಭ ಹಾಗೂ ಸರಳ. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ್ನು ಪ್ರಾರಂಭಿಸಬಹುದು. ಇದರೊಂದಿಗೆ ತಜ್ಞರ ಸಲಹೆ ಮುನ್ನೆಚ್ಚರಿಕೆ ಮಾರುಕಟ್ಟೆಯ ವ್ಯವಹಾರ ಅತೀ ಮುಖ್ಯ. ಹಾಗಾದರೆ ಕೋಳಿ ಸಾಕಾಣಿಕೆ ಮಾಡುವುದು ಹೇಗೆ? ಅದಕ್ಕೆ ಏನೆಲ್ಲಾ ವಿಧಾನಗಳನ್ನು ಅನುಸರಿಸಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೋಳಿ ಫಾರ್ಮ್ ಇದು ಮೊದಲು ನಾವು ಹೆಚ್ಚು ಇನ್ವೆಸ್ಟ್ ಮಾಡಿ ಕ್ರಮೇಣ ನಮಗೆ ಅತೀ ಹೆಚ್ಚು ಲಾಭ ತಂದುಕೊಡುತ್ತದೆ. ಕೋಳಿ ಫಾರ್ಮ್ ಹಾಕಲು ಮೊದಲಿಗೆ ಹತ್ತರಿಂದ ಹದಿನೈದು ಲಕ್ಷ ಹೂಡಿಕೆ ಮಾಡಬೇಕು. ಈ ಹಣ ನಾವು ಎಷ್ಟು ಸಾವಿರ ಕೋಳಿಗಳನ್ನು ಹಾಕುತ್ತೇವೆ ಎನ್ನುವುದರ ಮೇಲೆ ಹಾಗೂ ಶೆಡ್ ನಿರ್ಮಾಣ , ನೀರಿನ ವ್ಯವಸ್ಥೆ ಇವೆಲ್ಲವುಗಳ ಮೇಲೆ ನಾವೆಷ್ಟು ಹಣವನ್ನು ಹೂಡಬದು ಎನ್ನುವುದು ನಿರ್ಧರಿತವಾಗುತ್ತದೆ. ಕೋಳಿ ಫಾರ್ಮ್ ಇದರಿಂದ ನಮಗೆ ಲಾಭವೋ ಅಥವಾ ನಷ್ಟವಾ ಅಂತಾ ನೋಡುವುದಾದರೆ ಇದು ಮುಖ್ಯವಾಗಿ ನಿರ್ವಹಣೆಯ ಮೇಲೆ ಮತ್ತು ವಾತಾವರಣ ಹಾಗೂ ನೀರಿನ ಮೇಲೆ ಕೂಡಾ ಅವಲಂಬಿಸಿ ಇರುತ್ತದೆ. ವಾತಾವರಣದಲ್ಲಿ ಬಿಸಿಲಿನ ಝಳ ಅತಿಯಾಗಿ ಇದ್ದರೂ ಕೋಳಿಗಳಿಗೆ ಆಗುವುದಿಲ್ಲ ಹಾಗೂ ಇನ್ನು ಮಳೆಗಾಲದಲ್ಲಿ ಕೂಡಾ ಗುಡುಗು ಸಿಡಿಲಿನ ಶಬ್ಧಕ್ಕೆ ಕೋಳಿಗಳು ಭಯ ಬೀಳುತ್ತವೆ. ಹಾಗಾಗಿ ಇದಕ್ಕೆ ಶ್ರಮ ಅತ್ಯಂತ ಮುಖ್ಯ. ಮೊದಲು ಚಿಕ್ಕದಾಗಿ ಫಾರ್ಮ್ ಆರಂಭ ಮಾಡಿದರೂ ನಂತರ ದೊಡ್ಡ ದೊಡ್ಡ ಶೆಡ್ ಗಲನ್ನು ಹಾಕಿ ಈ ಕೋಳಿ ಫಾರ್ಮ್ ಬೆಳೆಸಬಹುದು. ಇದರಲ್ಲಿ ಲಾಭ ಮತ್ತು ನಷ್ಟ ಎರಡನ್ನು ಕಂಡವರೂ ಸಾಕಷ್ಟು ಜನರು ಇದ್ದಾರೆ. ನಾವು ಲಾಭ ಮಾಡಿಕೊಳ್ಳಬೇಕೋ ಅಥವಾ ನಷ್ಟ ಎನ್ನುವುದು ನಮ್ಮ ನಮ್ಮ ಕೈಯ್ಯಲ್ಲಿ ಇರುತ್ತದೆ.

ಇದನ್ನು ನಾವೇ ಸ್ವಂತವಾಗಿ ಸಹ ಮಾಡಬಹುದು ಅಥವಾ ಯಾವುದೇ ಒಂದು ಕಂಪನಿಯ ಜೊತೆಯಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಸಹ ಆರಂಭಿಸಬಹುದು. ಸ್ವಂತವಾಗಿ ಮಾಡಿಕೊಂಡರೆ ಸ್ವಲ್ಪ ರಿಸ್ಕ್ ಜಾಸ್ತಿ. ಅಥವಾ ನಮಗೆ ಲಾಭ ಸ್ವಲ್ಪ ಕಡಿಮೆ ಬಂದರೂ ಸಾಕು ರಿಸ್ಕ್ ಬೇಡ ಅಂತಿದ್ದರೆ ಯಾವುದೇ ಕಂಪನಿಯ ಜೊತೆಯಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಅವರೇ ಕೋಳಿ ಮರಿಗಳನ್ನು, ಅವುಗಳಿಗೆ ನೀಡುವ ಆಹಾರ ಹಾಗೂ ಅದರ ಜೊತೆಗೆ ಕೋಳಿಗಳನ್ನು ಸಾಕಲು ಬೇಕಾದ ತರಬೇತಿ ಮತ್ತು ಉಪಕರಣಗಳನ್ನು ಸಹ ಅವರೇ ನೀಡುತ್ತಾರೆ. ಹಾಗಾಗಿ ಯಾವುದಾದ್ರೂ ಕಂಪನಿಗಳ ಜೊತೆಗೆ ಅಗ್ರಿಮೆಂಟ್ ಮಾಡಿಕೊಳ್ಳುವುದು ಉತ್ತಮ.

ಹೀಗಿದ್ದಾಗ ಕೋಳಿಗಳನ್ನು ಸಾಕುವುದು ಮಾತ್ರ ನಮಗೆ ಇರುವ ಕೆಲಸ ಆಗಿರುತ್ತದೆ. ಇನ್ನು ಕೋಳಿ ಮರಿಗಳನ್ನು ಹಾಕಿದಾಗ ಅವುಗಳಿಗೆ ಇಪ್ಪತ್ತು ದಿನಗಳ ವರೆಗೆ ಕಾವು ನೀಡಬೇಕು. ಇದಕ್ಕಾಗಿ ದೊಡ್ಡ ದೊಡ್ಡ ಬಲ್ಬ್ ಬಳಸಿ ೧೦೦ , ೨೦೦ ವೊಲ್ಟ್ ಬಲ್ಬ್ ಬಳಸಿ ಲೈಟ್ ಹಾಕಿತ್ತು ಖಾವು ನೀಡಲಾಗುತ್ತದೆ. ಐದು ಸಾವಿರ ಕೋಳಿಗಳನ್ನು ಸಾಕಿದರೆ ಒಂದು ಬೀಡ್ ಗೆ ನಲವತ್ತೈದು ದಿನಗಳಿಗೆ ಏನಿಲ್ಲಾ ಅಂದರೂ ನಲವತ್ತರಿಂದ ಐವತ್ತು ಸಾವಿರ ಲಾಭವನ್ನು ಪಡೆಯಬಹುದು. ಇದು ನಮ್ಮ ಶ್ರಮದ ಮೇಲೆ ಅವಲಂಬಿಸಿ ಇರುತ್ತದೆ.

ನೀರಿನ ವ್ಯವಸ್ಥೆ ಸರಿಯಾಗಿ ಇದ್ದಲ್ಲಿ ಕೋಳಿಯ ತೂಕ ಹೆಚ್ಚು ಬರುತ್ತದೆ ಎಂದು ಸಾಕಷ್ಟು ಕೋಳಿ ಫಾರ್ಮ್ ಮಾಲೀಕರ ಅಭಿಪ್ರಾಯ ಆಗಿರುತ್ತದೆ. ಅವುಗಳಿಗೆ ನೀರಿನ ವ್ಯವಸ್ಥೆಯನ್ನು ಶೆಡ್ ಮೇಲೆ ಮಾಡಿ ಕೆಳಗೆ ತಟ್ಟೆಗಳಲ್ಲಿ ವ್ಯವಸ್ಥೆ ಮಾಡಿರಬೇಕು ಅಂದರೆ ಕೋಳಿಗಳು ಅವುಗಳಿಗೆ ಬೇಕಾದಾಗ ಬಂದು ನೀರನ್ನು ಕುಡಿಯುತ್ತವೆ. ಅದೇ ರೀತಿ ಆಹಾರ ಕೂಡಾ ಹಾಕುತ್ತಲೇ ಇರಬೇಕು. ಅವುಗಳಿಗೆ ಕೆಳಗೆ ಮಣ್ಣು ಏನಾದರೂ ಹಾಕಿದ್ದರೆ ಅವುಗಳನ್ನು ಪ್ರತೀ ದಿನ ಸ್ವಚ್ಚ ಮಾಡುತ್ತಲೇ ಇರಬೇಕು.ಇಲ್ಲವಾದರೆ, ಸೋಮಾರಿತನ ತೋರಿಸಿ ವಾರಕ್ಕೆ ಒಂದೋ ಎರಡೋ ದಿನ ನಾವು ಮಾಡುತ್ತೇವೆ ಅಂದರೆ ನಷ್ಟ ಆಗುವುದು ನಮಗೇ. ಸರಿಯಾದ ವ್ಯವಸ್ಥೆ ಇಲ್ಲವಾದರೆ ಲಾಭ ದೊರೆಯುವುದಿಲ್ಲ.

ಇನ್ನು ಇದರ ಖರ್ಚಿನ ಬಗ್ಗೆ ನೋಡುವುದಾದರೆ, ಯಾವುದೋ ಒಂದು ಕಂಪನಿಯ ಜೊತೆಯಲ್ಲಿ ಅಗ್ರಿಮೆಂಟ್ ಮಾಡಿಕೊಂಡರೆ ಎಲ್ಲಾ ಖರ್ಚುಗಳನ್ನು ಕಂಪನಿ ನೋಡಿಕೊಳ್ಳುತ್ತದೆ. ಆದರೆ ಇಲ್ಲಿ ನಮ್ಮ ಖರ್ಚು ಏನೂ ಅಂದರೆ ಶೆಡ್ ನಿರ್ವಹಣೆ, ಕಾವು ಕೊಡಲು ಬಳಸಿದ ವಿದ್ಯುತ್ ಬಿಲ್, ನಿರ್ವಹಣೆಯ ಖರ್ಚು ಕೋಳಿ ಫಾರ್ಮ್ ಆರಂಭಿಸಿದ ವ್ಯಕ್ತಿಗೆ ಬೀಳುತ್ತದೆ. ಲಾಭದಲ್ಲಿ ಈ ಎಲ್ಲಾ ಖರ್ಚು ಸರಿ ಹೊಂದುವುದರಿಂದ ಮತ್ತು ಉಳಿದೆಲ್ಲಾ ಖರ್ಚುಗಳನ್ನು ಕಂಪನಿ ನೋಡಿಕೊಳ್ಳುವುದರಿಂದ ಇಲ್ಲಿ ಅಷ್ಟೊಂದು ನಷ್ಟ ಅನುಭವಿಸಿರುವ ಸಂದರ್ಭ ಬರುವುದಿಲ್ಲ.

ಇನ್ನು ಕಂಪನಿಯ ಜೊತೆ ಸರಿಯಾಗಿ ಹೊಂದಾಣಿಕೆ ಇದ್ದರಂತೂ ಸ್ವಲ್ಪ ಹೆಚ್ಚೇ ಲಾಭವನ್ನು ಪಡೆಯಬಹುದು ಕಂಪನಿ ಕಡೆಯಿಂದ ಹೆಚ್ಚೆಚ್ಚು ಸಹಾಯ, ಪ್ರೋತ್ಸಾಹ ಕೂಡಾ ಪಡೆದುಕೊಳ್ಳಬಹುದು. ಇಲ್ಲಿ ಮುಖ್ಯವಾಗಿ ಕೋಳಿಗಳಿಗೆ ನಿಮ್ಮ ಊರಿನ ಅಥವಾ ಜಮೀನಿನ ಜಾಗದ ವಾತಾವರಣ ಹೊಂದಿಕೆ ಆಗುತ್ತದೋ ಇಲ್ಲವೋ ಎಂದು ನೋಡಬೇಕು. ಆರಂಭದಲ್ಲಿ ಸ್ವಲ್ಪ ಖರ್ಚು ಜಾಸ್ತಿ ಎನಿಸಿದರೂ ನಂತರ ಉತ್ತಮ ಲಾಭವನ್ನೇ ಪಡೆಯಬಹುದು. ಕೋಳಿಗಳನ್ನು ಸಾಯದೆ ಇರುವ ಹಾಗೆ ನೋಡಿಕೊಳ್ಳಬೇಕು ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಆದಷ್ಟು ಕೋಳಿ ಫಾರ್ಮ್ ಗಳಿಗೆ ಭೇಟಿ ನೀಡಿ ಅಲ್ಲಿ ಮಾಹಿತಿ ಸಂಗ್ರಹ ಮಾಡಿ ಅವರ ಅನುಭವ ಕೇಳಿ ಕೋಳಿ ಫಾರ್ಮ್ ಆರಂಭ ಮಾಡಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!