ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಈ ಕೋಳಿ ಸಾಕಾಣಿಕೆಯನ್ನು ಪ್ರಸ್ತುತ ಲಕ್ಷಾಂತರ ಜನರು ಉದ್ಯಮವನ್ನಾಗಿ ನಡೆಸುತ್ತಿದ್ದಾರೆ.
ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಇದೇ ರೀತಿಯಲ್ಲಿ ವಿನಾಯಕ್ ಏನು ಅವರು ಬಿವಿ380 ಎಂಬ ತಳಿಯ ಕೋಳಿಯನ್ನು ಸಾಕಾಣಿಕೆ ಮಾಡಿ ಆದಾಯವನ್ನೂ ಗಳಿಸುತ್ತಿದ್ದಾರೆ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ವಿನಾಯಕ್ ಅವರು ಮೊದಲು ಟೊಯೋಟಾ ಕೇರಳ ಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದನ್ನು ಬಿಟ್ಟು ನಂತರ ಬಿವಿ380 ತಳಿಯ ನೂರು ಕೋಳಿಗಳನ್ನು ತಂದು ಸಾಕಾಣಿಕೆಯನ್ನು ಆರಂಭಿಸುತ್ತಾರೆ. ಇದರಿಂದ ಅವರಿಗೆ ತುಂಬಾ ಆದಾಯ ದೊರಕುತ್ತದೆ. ಇವರು ಕೇರಳದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಬಿವಿ380 ತಳಿಯ ಮೊಟ್ಟೆ ಇಡುವ ಕೋಳಿಗಳನ್ನು ತಂದಿದ್ದಾರೆ. ಇನ್ನೊಂದು ವಿಶೇಷತೆಯಂದರೆ ಈ ಕೋಳಿಗಳು ಪ್ರತಿ 25 ತಾಸಿಗೆ ಒಂದು ಮೊಟ್ಟೆಯಿಡುತ್ತವೆ.
ಫಾರ್ಮ್ ಕೋಳಿಗಳಿಗಿಂತ ಇವು ಭಿನ್ನವಾಗಿದ್ದು ನೋಡಲು ಊರ ನಾಟಿ ಕೋಳಿಯಂತೆ ಕಾಣುತ್ತವೆ. ಬಿವಿ380 ತಳಿಯ ಕೋಳಿ ಮೊಟ್ಟೆಗಳು ಸಾವಯವ ಗುಣಮಟ್ಟವನ್ನು ಹೊಂದಿರುವ ಮೊಟ್ಟೆಗಳಾಗಿವೆ. ಮಾತ್ರವಲ್ಲದೆ ರೋಗ ರುಜಿನಗಳಿಂದ ಮುಕ್ತವಾದ ಮತ್ತು ಹಾನಿಕಾರಕ ಹಾರ್ಮೋನ್ಸ್ ಗಳನ್ನು ಹೊಂದಿರದ ಮೊಟ್ಟೆಗಳಾಗಿವೆ.
ಈ ಕೋಳಿಗಳು 380 ದಿನಗಳವರೆಗೂ ಮೊಟ್ಟೆಯನ್ನು ಇಡುತ್ತದೆ ಅಂದರೆ 13 ತಿಂಗಳವರೆಗೂ ಮೊಟ್ಟೆಯನ್ನು ಇಡುತ್ತದೆ. ಈ ಕೋಳಿಗಳಿಗೆ ಆಹಾರವಾಗಿ ಮೆಕ್ಕೆಜೋಳ, ಕಪ್ಪೆಚಿಪ್ಪು, ಮೀನಿನ ತಲೆ, ಸೋಯಾ ಎಲ್ಲವನ್ನೂ ಸೇರಿಸಿ ತಯಾರಿಸಿರುವ ಆಹಾರವನ್ನು ಕೊಡಲಾಗುತ್ತದೆ. ಒಂದು ಕೋಳಿಗೆ ಒಂದು ದಿನಕ್ಕೆ 120 ಗ್ರಾಂ ನಂತೆ 100 ಕೋಳಿಗೆ 12 ಕೆಜಿ ಆಹಾರ ಬೇಕಾಗುತ್ತದೆ. ಈ ಕೋಳಿಗಳು ಕೆಜಿಗಳಲ್ಲಿಯೇ ದೊರಕುತ್ತದೆ. ಅದರಲ್ಲಿಯೇ ತಂದು ಸಾಕಣಿಕೆ ಮಾಡುವುದರಿಂದ ಬೇಕಾದ ರೀತಿಯ ಶೆಡ್ಗಳನ್ನು ಮಾಡಿಕೊಂಡು ಅದನ್ನು ಸಾಕಾಣಿಕೆ ಮಾಡಬಹುದು.
ಈ ಕೋಳಿಗಳಿಗೆ ಸಂಪೂರ್ಣ ವ್ಯಾಕ್ಸಿನೇಷನ್ ಮಾಡಿರುವುದರಿಂದ ಯಾವುದೇ ರೋಗಗಳು ಬರುವುದಿಲ್ಲ. ಈ ಕೋಳಿಗಳು ಹೆಚ್ಚಾಗಿ ಎಲ್ಲ ವಾತಾವರಣಗಳಲ್ಲಿಯೂ ಆರೋಗ್ಯವಾಗಿ ಜೀವಿಸುತ್ತದೆ. ಆದಕಾರಣ ವಿನಾಯಕ್ ಅವರು ಈ ಕೋಳಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೋಳಿ ಖರೀದಿಗೆ ಮತ್ತು ಕೇಜ್ ಎಲ್ಲಾ ಒಳಗೊಂಡು 98000 ರೂ ಆಗಿರುತ್ತದೆ. ಕೋಳಿ ಸಾಕಾಣಿಕೆಗೆ ಕಡಿಮೆ ಜಾಗವು ಸಾಕಾಗುತ್ತದೆ. ಈ ಕೋಳಿಗಳಲ್ಲಿ ನೂರಕ್ಕೆ 95ರಷ್ಟು ಕೋಳಿಗಳು ಮೊಟ್ಟೆಯನ್ನು ಇಡುತ್ತದೆ.
ವಾತಾವರಣಕ್ಕೆ ಅನುಗುಣವಾಗಿ ಈ ಕೋಳಿಗಳು ಸ್ವಲ್ಪ ಹೆಚ್ಚು ಕಡಿಮೆ ಯಲ್ಲಿ ಮೊಟ್ಟೆಯನ್ನು ಇಡುತ್ತದೆ. ಈ ಮೊಟ್ಟೆಗಳನ್ನು ವಿನಾಯಕ ಅವರು ಕೆಲವು ಅಂಗಡಿಗಳಿಗೆ ಮತ್ತು ಮನೆಯ ಬಾಗಿಲಿನಲ್ಲಿ ಮಾರಾಟಮಾಡುತ್ತಾರೆ. ಈ ಕೋಳಿ ಮೊಟ್ಟೆಗಳಿಗೆ ಒಂದಕ್ಕೆ 10ರು ನಂತೆ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯಾಗಿ ಕೋಳಿ ಸಾಕಾಣಿಕೆಯಲ್ಲಿ ವಿನಾಯಕ್ ಅವರು ತಿಂಗಳಿಗೆ 15 ಸಾವಿರ ಲಾಭವನ್ನು ಗಳಿಸುತ್ತಿದ್ದಾರೆ.