ನಾವಿಂದು ನಿಮಗೆ ಒಬ್ಬ ವಿಶೇಷ ವ್ಯಕ್ತಿಯ ಬಗ್ಗೆ ಪರಿಚಯವನ್ನು ಮಾಡಿಕೊಡುತ್ತೇವೆ ಇವರು ಮೂಲತಹ ರಾಯಚೂರಿನ ಸಿಂದನೂರಿನ ಚಿಕ್ಕ ಬೇರಗಿ ಗ್ರಾಮದವರು. ಇವರು ಕೇವಲ ಯುವತಿ ಮಾತ್ರ ಅಲ್ಲ ಕೆಚ್ಚೆದೆಯ ಕನ್ನಡತಿಯು ಹೌದು. ಹಾಗಾದರೆ ಅವರು ಯಾರು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಅವರೇ ಅಕ್ಕ ಎಂದು ಖ್ಯಾತಿಯಾಗಿರುವ ಅನು ಅವರು. ಇವತ್ತಿನ ದಿನ ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರು ಹೆಚ್ಚು ಕೇಳಿಬರುತ್ತಿದೆ.

ಇವರ ಹೆಸರು ಅನು ಇವರು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡ ನಂತರ ಜನರು ಇವರನ್ನು ಅಕ್ಕ ಎಂದು ಗೌರವದಿಂದ ಕರೆದರು. ಇವರಿಗೂ ಕೂಡ ಅಕ್ಕ ಅನು ಎಂದು ಕರೆಸಿಕೊಳ್ಳುವುದಕ್ಕೆ ಇಷ್ಟವಂತೆ. ಇವರ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಾರೆ ಅದರಲ್ಲಿ ಹೆಣ್ಣುಮಕ್ಕಳು ಸಮಾಜಸೇವೆ ಸೇವೆಗೆಂದು ಹೊರಗೆ ಬರುವುದು ತುಂಬಾ ಅಪರೂಪ. ಆದರೆ ಇವರು ಅದರಿಂದ ಹೊರಬಂದು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಮುಖ್ಯ ಉದ್ದೇಶ ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಅನೇಕ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಕನ್ನಡ ನಾಡು-ನುಡಿ ಉಳಿಯಬೇಕೆಂದರೆ ಮೊದಲು ಕನ್ನಡ ಶಾಲೆಗಳು ಉಳಿಯಬೇಕು ಎಂಬುದು ಇವರ ಅಭಿಪ್ರಾಯ. ಕನ್ನಡ ಶಾಲೆಗಳಿಗೆ ಯಾಕೆ ಮಕ್ಕಳು ಬರುತ್ತಿಲ್ಲ ಎಂದರೆ ಖಾಸಗಿ ಶಾಲೆಗಳಲ್ಲಿ ಇರುವಷ್ಟು ಸೌಲಭ್ಯಗಳು ಕನ್ನಡ ಶಾಲೆಗಳಲ್ಲಿ ಇರುವುದಿಲ್ಲ ಹಾಗಾಗಿ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಬೇಕಾಗುವಂತಹ ವರ್ಣರಂಜಿತ ಚಿತ್ರಗಳು ಮ್ಯಾಪ್ ಗಳನ್ನು ಬಿಡಿಸುವುದು ಜೊತೆಗೆ ಶಾಲೆಯ ವಾತಾವರಣವನ್ನು ಶುಚಿ ಗೊಳಿಸುವುದು ಈ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಇವರು ಇದುವರೆಗೂ ಸುಮಾರು ನಲವತ್ತು ಶಾಲೆಗಳಿಗೆ ಹೊಸರೂಪವನ್ನು ನೀಡಿದ್ದಾರೆ.

ಇದರ ಜೊತೆಗೆ ಸ್ವಚ್ಛ ಭಾರತ ಅಭಿಯಾನದಡಿ ಹಳ್ಳಿಗಳಲ್ಲಿ ಕೂಡ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಇರುವುದಿಲ್ಲ. ಆ ಕಾರಣದಿಂದಾಗಿ ಹಲವು ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಆ ಕಾರಣದಿಂದ ಅವರು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿ ಊರಿನವರ ಜೊತೆಗೆ ಸೇರಿಕೊಂಡು ಹಳ್ಳಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಇದರ ಜೊತೆಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಅಭಿಯಾನವನ್ನು ಕೂಡ ಇವರು ಮಾಡಿದ್ದಾರೆ. ಇವರು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಅನೇಕ ಜನರು ಇವರ ತಂದೆತಾಯಿಗಳಿಗೆ ಅವಮಾನವನ್ನು ಮಾಡಿದ್ದರು ಆ ಕಾರಣದಿಂದಾಗಿ ಇವರ ತಂದೆ ತಾಯಿಗೆ ಇವರು ಮುಂದೆ ಓದುವುದು ಇಷ್ಟವಿರಲಿಲ್ಲ. ಆದರೆ ಅನು ಅವರು ಬೆಂಗಳೂರಿಗೆ ಬಂದು ತಮ್ಮ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಇವರು ಈಗ ಕಲಾವಿಭಾಗದಲ್ಲಿ ಅಂತಿಮ ವರ್ಷ ಓದುತ್ತಿದ್ದಾರೆ. ಇವರಿಗೆ ತಾವು ಡಿವೈಎಸ್ಪಿ ಆಗಬೇಕೆಂಬ ಆಸೆ ಇದೆ.

ಕನ್ನಡ ಭಾಷೆ ಉಳಿಯಬೇಕೆಂದರೆ ಕನ್ನಡ ನಾಡು ಉಳಿಯಬೇಕೆಂದರೆ ಕೇವಲ ಹೋರಾಟ ಮಾತ್ರ ಮಾಡುವುದರಿಂದ ಯಾವುದು ಸಾಧ್ಯವಾಗುವುದಿಲ್ಲ ಅದಕ್ಕೆ ಬೇಕಾದ ಕೆಲಸಗಳನ್ನು ಮಾಡಬೇಕು ಎನ್ನುವುದು ಅವರ ಅಭಿಪ್ರಾಯ. ಇವರು ಪಿಯುಸಿ ಇಂದಲೇ ಕನ್ನಡ ಶಾಲೆಗಳನ್ನು ಉಳಿಸಬೇಕು ಎಂಬ ಅಭಿಯಾನವನ್ನು ಇವರು ಪ್ರಾರಂಭಿಸಿದರು ಆಗವರಿಗೆ ಯಾವುದೇ ರೀತಿಯ ಬೆಂಬಲ ಇರಲಿಲ್ಲ ಕರ್ನಾಟಕ ಎಂಬುದು ಕನ್ನಡಮಯವಾಗಬೇಕು

ಎಲ್ಲ ಕಡೆಗಳಲ್ಲಿ ಕನ್ನಡ ಬೆಳಗಬೇಕು ಹಿಂದುಳಿದ ಪ್ರದೇಶಗಳಲ್ಲಿ ಇರುವವರಿಗೆ ಉದ್ಯೋಗ ಸಿಗಬೇಕು ಎಂಬುದು ಅವರ ಆಸೆ. ರಾಜಕೀಯವಾಗಿ ಪ್ರೇರಿತವಾಗಿದೆ ತಮ್ಮ ತಂಡವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿಯಾಗಿ ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡಿರುವ ಅನು ಅವರ ಕನಸುಗಳು ನನಸಾಗಲಿ ಕನ್ನಡ ಬೆಳೆಸುವ ಅವರ ಗುರಿ ಯಶಸ್ವಿಯಾಗಲಿ ಎಂದು ನಾವು ಹಾರೈಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *