ದೈಹಿಕವಾಗಿ ಕಾಡುವಂತ ಒಂದಿಷ್ಟು ಸಮಸ್ಯೆಗಳನ್ನು ಮನೆಯಲ್ಲಿಯೇ ಮನೆಮದ್ದು ತಯಾರಿಸಿ ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಂತ ಮನೆಮದ್ದನ್ನು ಈ ಮೂಲಕ ತಿಳಿಯೋಣ. ಈ ಮನೆಮದ್ದು ಅಂದರೆ ಇದನ್ನು ಅಡುಗೆಯ ರೀತಿಯಲ್ಲಿ ಮಾಡಿ ಸೇವಿಸಬಹುದಾಗಿದೆ. ಅಡುಗೆ ಮಲೆನಾಡಿನಲ್ಲಿ ಹೆಚ್ಚು ಪ್ರಸಿದ್ದಿ ಅನ್ನೋದನ್ನ ತಿಳಿಯಲಾಗಿದೆ ಇದನ್ನು ಪುನರ್ಪುಳಿ ಅಡುಗೆ ಎಂಬುದಾಗಿ ಕರೆಯಲಗುತ್ತದೆ. ಇದನ್ನು ಮನೆಯಲ್ಲೇ ತಯಾರಿಸಿ ಸೇವನೆ ಮಾಡುವುದರಿಂದ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ಈ ಪುನರ್ಪುಳಿ ತಯಾರಿಸೋದು ಹೇಗೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.
ಔಷದಿ ಗುಣಗಳನ್ನು ಹೊಂದಿರುವಂತ ಪುನಪುಳಿ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮಲಬದ್ಧತೆ, ಅಜೀರ್ಣ, ಸಂಕಟ, ಪಿತ್ತ, ಮಾರ್ನಿಂಗ್ ಸಿಕ್ನೆಸ್, ಶೀತ ಮುಂತಾದ ಸಮಸ್ಯೆಗಳಿಗೆ ತಕ್ಷಣ ರಿಲೀಫ್ ನೀಡುತ್ತದೆ. ಈ ಅಡುಗೆಯನ್ನು ಬಹುತೇಕ ಜನರು ಮಳೆಗಾಲದಲ್ಲಿ ತಯಾರಿಸಿ ಸೇವನೆ ಮಾಡುತ್ತಾರೆ, ಯಾಕೆ ಅನ್ನೋದನ್ನ ಹೇಳುವುದಾರೆ ಮಳೆಗಾಲದಲ್ಲಿಯೇ ಹೆಚ್ಚು ರೋಗಗಳು ಬರೋದ್ರಿಂದ ಅವುಗಳಿಂದ ಮುಕ್ತಿ ಪಡೆಯಲು ಸಹಕಾರಿ ಆದ್ದರಿಂದ ಈ ಅಡುಗೆಯನ್ನು ಮಳೆಗಾಲದಲ್ಲಿ ರೋಗಗಳನ್ನು ನಿಯಂತ್ರಿಸಕೊಳ್ಳಲು ಬಳಸಲಾಗುತ್ತದೆ.
ಪುನರ್ಪುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಯಾವುವು ಅನ್ನೋದನ್ನ ನೋಡುವುದರೆ ಮೊದಲನೆಯದಾಗಿ ನಾಲ್ಕು ಒಣ ಪುನರ್ಪುಳಿ ಅಥವಾ ಅರ್ಧ ಕಪ್ ಕೋಕಂ ಸಿರಪ್ ಹಾಗೂ ಎರಡು ಚಮಚ ಕರಿಮೆಣಸಿನ ಕಾಳಿನ ಪುಡಿ,ಇದು ಶೀತಕ್ಕೆ ಒಳ್ಳೆಯದು ಒಂದು ಚಮಚ ತುಪ್ಪ, ಅರ್ಧ ಚಮಚ ಬೆಲ್ಲ, ಅರ್ಧ ಚಮಚ ಜೀರಿಗೆ, ಒಂದು ಹಸಿಮೆಣಸು, ಹತ್ತು ಕರಿಬೇವು, ಎರಡು ಚಮಚ ಕೊತ್ತಂಬರಿ ಸೊಪ್ಪು, ನೀರು ಹಾಗೂ ರುಚಿಗೆ ತಕ್ಕಸ್ಟು ಉಪ್ಪು ಇಷ್ಟು ಪೂರ್ಣಪುಳಿ ತಯಾರಿಸಲು ಬೇಕಾಗುವ ಪದಾರ್ಥಗಳು.
ಪುನರ್ಪುಳಿ ತಯಾರಿಸುವ ವಿಧಾನ: ಮೊದಲನೆಯದಾಗಿ ಹೇಳುವುದಾದರೆ ಪುನರ್ಪುಳಿಯನ್ನು ಅರ್ಧ ಗಂಟೆಗಳ ಕಾಲ ಒಂದು ಕಪ್ ಬಿಸಿನೀರಿನಲ್ಲಿ ನೆನಸಿಡಬೇಕು, ನಂತರ ಅದು ಮೆತ್ತಗಾದ ಬಳಿಕ ಚೆನ್ನಾಗಿ ಹಿಂಡಿ ರಸ ತೆಗೆಯಿರಿ. ಇದಾದ ಮೇಲೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿಯುತ್ತಿದ್ದಂತೆಯೇ ಪುನರ್ಪುಳಿ ರಸವನ್ನು ಬಾಣಲೆಗೆ ಸುರಿದುಬಿಡಿ. ಇದಾದ ಬಳಿಕ ಇದಕ್ಕೆ ಇನ್ನೊಂದು ಲೋಟ ನೀರು, ಉಪ್ಪು, ಹಸಿಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ.
ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಹತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಅರ್ಧ ಚಮಚ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಪೆಪ್ಪರ್ ಪೌಡರ್ ಹಾಕಿ ಗೊಟಾಯಿಸಿ ಇನ್ನೊಂದು ರೌಂಡ್ ಕುದಿಸಿ.
ಬಿಸಿಯಿದ್ದಾಗಲೇ ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಿ ಇಲ್ಲವೇ ಲೋಟಕ್ಕೆ ಹಾಕಿ ಕುಡಿದರೂ ಚೆನ್ನಾಗಿರುತ್ತದೆ, ರಸಂ ಸ್ವಲ್ಪ ಹುಳಿ ಇದ್ದರೆ ಇಷ್ಟವಾಗುತ್ತದೆ ಎನ್ನುವವರು ಸ್ವಲ್ಪ ಹುಣಸೆ ರಸ ಸೇರಿಸಬಹುದು. ಇದನ್ನು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಮುಖ್ಯವಾಗಿ ಅಡುಗೆ ಮನೆ ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೇಂದ್ರ ಬಿಂದುವಾಗಿದೆ ಆದ್ದರಿಂದ ಅಡುಗೆ ಮನೆ ಯಾವಾಗಲು ಸ್ವಾಚ್ಛವಾಗಿರಲಿ ಹಾಗೂ ಇಂತಹ ಅರೋಗ್ಯ ಪೂರ್ಣವಾಗಿರುವಂತ ಅಡುಗೆಯನ್ನು ಮಾಡಿ ಸವಿಯಿರಿ.