ಸೌತೆಕಾಯಿ ಅನ್ನೋದು ಆರೋಗ್ಯಕ್ಕೆ ಒಳ್ಳೆಯ ನೈಸರ್ಗಿಕ ಗುಣಗಳನ್ನು ಹೊಂದಿರುವಂತ ತರಕಾರಿಯಾಗಿದೆ ಆದ್ರೆ ಕೆಲವರು ಸೌತೆಕಾಯಿಯನ್ನು ಮಿತವಾಗಿ ಬಳಸಿ ಹಿತವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ, ಇನ್ನು ಕೆಲವರು ಅತಿಯಾಗಿ ಸೇವನೆ ಮಾಡಿ ಅನಾರೋಗ್ಯಕ್ಕೆ ಹಿಡಗುತ್ತಾರೆ. ಸೌತೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಕೆಲವರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಡಯಟ್ ರೀತಿಯಲ್ಲಿ ಸೌತೆಕಾಯಿಯನ್ನು ಬಳಸುತ್ತಾರೆ, ಇನ್ನು ಕೆಲವರು ಊಟದ ಜೊತೆಗೆ ಸೌತೆಕಾಯಿಯನ್ನು ಬಳಸುತ್ತಾರೆ. ಹೀಗೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿರುವಂತ ಸೌತೆಕಾಯಿಯನ್ನು ಬಳಸಿ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಆದ್ರೆ ಅತಿಯಾಗಿ ಸೇವನೆ ಮಾಡಿದರೆ ಅಮೃತವು ಕೂಡ ವಿಷವಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವಂತ ವಿಚಾರ, ಆದ್ದರಿಂದ ಮಿತವಾಗಿ ಸೇವನೆ ಮಾಡುವುದು ಉತ್ತಮ. ಅತಿಯಾಗಿ ಸೇವನೆ ಮಾಡುವುದರಿಂದ ದೇಹದ ಮೇಲೆ ಇದರ ಪರಿಣಾಮ ಹೇಗೆ ಬೀರುತ್ತೆ ಅನ್ನೋದನ್ನ ನೋಡುವುದಾದರೆ ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ವಿಷಕಾರಿ ಅಂಶವಿರುತ್ತದೆ. ನೀವು ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ನಿಮ್ಮೆ ದೇಹದಲ್ಲಿ ಟಾಕ್ಸಿಕ್ ಅಂಶ ಸೇರುತ್ತದೆ. ಇದರಿಂದ ನಿಮ್ಮ ಲಿವರ್, ಪ್ಯಾಂಕ್ರಿಯಾಟಿಕ್ ಮತ್ತು ಮೂತ್ರಪಿಂಡ ಊತವಾಗುತ್ತದೆ.

ಇನ್ನು ಸೌತೆಕಾಯಿಯನ್ನು ಇಂತಹ ದೈಹಿಕ ಸಮಸ್ಯೆ ಇರೋರು ತಿನ್ನೋದು ಒಳ್ಳೆಯದಲ್ಲ ಹೌದು ಸೌತೆಕಾಯಿ ತಣ್ಣಗಿನ ಪದಾರ್ಥ ನಿಮಗೆ ಕಫ ಶೀತ ನೆಗಡಿ ಅಥವಾ ಉಸಿರಾಟದ ಸಮಸ್ಯೆ ಇದ್ದರೆ ಸೌತೆಕಾಯಿ ಸೇವನೆ ಮಾಡಬಾರದು. ಒಂದುವೇಳೆ ಇದರ ಸೇವನೆ ಮಾಡಿದರೆ ಸಮಸ್ಯೆ ಇನ್ನು ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *