ಕೋಗಿಲೆಯ ಮತ್ತು ಕಾಗೆಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕೋಗಿಲೆಯ ಕೂಗು ಕೇಳಲು ಬಹಳ ಇಂಪಾಗಿ ಇರತ್ತೆ ಹಾಗೇ ಕಾಗೆಯ ಕೂಗು ಕರ್ಕಶವಾಗಿರತ್ತೆ. ಆದರೆ ಕಾಗೆ ಇಲ್ಲದೆ ಕೋಗಿಲೆ ಇಲ್ಲ. ಕೋಗಿಲೆಗೆ ತನ್ನ ಮೊಟ್ಟೆಯನ್ನು ಮರಿ ಮಾಡಲು ಬರುವುದಿಲ್ಲ ಹಾಗಾಗಿ ಕಳ್ಳತನದಲ್ಲಿ ಕಾಗೆಯ ಗೂಡಿನಲ್ಲಿ ಮೊಟ್ಟೆ ಇಟ್ಟು ತನ್ನ ವಂಶಾಭಿವೃದ್ಧಿಯನ್ನು ಮಾಡುತ್ತದೆ. ಈ ಲೇಖನದಲ್ಲಿ ನಾವು ಕೋಗಿಲೆ ಯಾವ ಯಾವ ಪಕ್ಷಿಗಳ ಗೂಡಿನಲ್ಲಿ ಮೊಟ್ಟೆ ಇಡತ್ತೆ ಹಾಗೂ ಕೋಗಿಲೆ ಮರಿಗಳು ಹೇಗೆಲ್ಲ ಭಯಂಕರವಾಗಿ ಇರುತ್ತವೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.
ಕೋಗಿಲೆ ಕಾಗೆಯ ಗೂಡಿನಲ್ಲಿ ಕಳ್ಳತನದಲ್ಲಿ ತನ್ನ ಮೊಟ್ಟೆಯನ್ನು ಇಡುತ್ತದೆ. ಕೋಗಿಲೆ ಕಾಗೆಯ ಗೂಡಿನಲ್ಲಿ ಮೊಟ್ಟೆ ಇಡುವಂತಹ ಸಮಯದಲ್ಲಿ ಕಾಗೆಗೆ ಕಾಣಿಸಿಕೊಂಡರೆ ಅದು ಕೋಗಿಲೆಯ ಮೇಲೆ ಧಾಳಿ ಮಾಡುತ್ತದೆ. ಹಳ್ಳಿಗಳ ಕಡೆಯಲ್ಲಿ ಇಂತಹ ದೃಶ್ಯಗಳನ್ನು ಬಹಳ ಕಾಣಬಹುದು. ಅದೇ ರೀತಿ ಕೋಗಿಲೆ ಮೊಟ್ಟೆ ಇಟ್ಟ ನಂತರ ಕಾಗೆ ಇಟ್ಟ ಮೊಟ್ಟೆಗಳನ್ನು ನಾಶ ಮಾಡುತ್ತದೆ. ಒಂದುವೇಳೆ ಅದು ಸಾಧ್ಯ ಆಗದೆ ಇದ್ದರೆ ಕೋಗಿಲೆಯ ಮರಿ ಹೊರಬಂದ ನಂತರ ಅವೇ ಕಾಗೆಯ ಮೊಟ್ಟೆಗಳನ್ನು ನಾಶ ಮಾಡುತ್ತವೆ. ಕಾಗೆ ಕೋಗಿಲೆಯ ಮರಿ ಎಂದು ತಿಳಿಯದೇ ಆಹಾರವನ್ನು ನೀಡುತ್ತವೆ. ತಾಯಿ ಪ್ರೀತಿಯನ್ನು ಈ ಮೂಕ ಪ್ರಾಣಿ ಪಕ್ಷಿಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು.
ಡೋರಿಯನ್ ರೆಡ್ ಸ್ಟಾರ್ ಕೋಗಿಲೆ ಕಾಗೆಯ ಗೂಡಿನಲ್ಲಿ ಮಾತ್ರ ಅಲ್ಲದೆ ಈ ಡೋರಿಯನ್ ರೆಡ್ ಸ್ಟಾರ್ ಎಂಬ ಹಕ್ಕಿಯ ಗೂಡಿನಲ್ಲಿ ಸಹ ಮೊಟ್ಟೆ ಇಡುತ್ತದೆ. ಕೋಗಿಲೆಯ ಮರಿಗೆ ಅದು ಹೊರಗೆ ಬಂದಾಗ ಕಣ್ಣು ಬಂದಿರುವುದೇ ಇಲ್ಲ ಆದರೂ ಸಹ ಗೂಡಿನಲ್ಲಿ ಇರುವಂತಹ ಬೇರೆ ಮೊಟ್ಟೆಗಳನ್ನು ಹೊರಹಾಕುತ್ತೆ.
ರೀಡ್ ವಾರ್ಬ್ಲ್ಯಾರ್ ಈ ಹಕ್ಕಿ ಗದ್ದೆಗಳಲ್ಲಿ ಇರತ್ತೆ . ಕೋಗಿಲೆ ಇದರ ಗೂಡಿನಲ್ಲಿ ಸಹ ಮೊಟ್ಟೆಗಳನ್ನು ಇಡುತ್ತವೆ. ಕೋಗಿಲೆ ಮರಿ ರೀಡ್ ವಾರ್ಬ್ಲ್ಯಾರ್ ಹಕ್ಕಿಯ ಮೊಟ್ಟೆಗಳನ್ನು ಗೂಡಿನಿಂದ ಹೊರ ಹಾಕಿದರೂ ಸಹ ಆ ಹಕ್ಕಿ ಕೋಗಿಲೆಯ ಮರಿಗೆ ಆಹಾರವನ್ನು ನೀಡುತ್ತದೆ. ಕೊನೆಗೆ ಆ ಗೂಡಿಗಿಂತಲೂ ಕೋಗಿಲೆಮರಿ ದೊಡ್ಡದಾಗಿ ಬೆಳೆಯುತ್ತೆ ಆದರೂ ಸಹ ತನ್ನ ಮರಿ ಎಂದೇ ಭಾವಿಸಿ ಆಹಾರವನ್ನು ನೀಡುತ್ತದೆ.
ಮೇಡಾವ್ ಪಿಪಿಟ್ ಇದು ನೆಲದ ಮೇಲೆ ಹುಲ್ಲಿನಲ್ಲಿ ಮೊಟ್ಟೆ ಇಡುವ ಹಕ್ಕಿ. ಕೊನೆಗೆ ಕೋಗಿಲೆ ಇದನ್ನೂ ಸಹ ಬಿಡಲಿಲ್ಲ. ಇದರ ಗೂಡಿನಲ್ಲಿ ಸಹ ಮೊಟ್ಟೆ ಇಡತ್ತೆ. ಈ ಹಕ್ಕಿ ಕೂಡಾ ಕೋಗಿಲೆ ಮರಿಗೆ ಆಹಾರ ನೀಡುತ್ತೆ. ಈ ರೀತಿ ಬಹಳಷ್ಟು ಬೇರೆ ಬೇರೆ ಹಕ್ಕಿಗಳ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಡತ್ತೆ. ಅಷ್ಟೇ ಅಲ್ಲದೇ ಬೇರೆ ಪಕ್ಷಿಗಳ ಮರಿಗಳು ಗುಡಿನಲ್ಲಿದ್ದರೂ ಸಹ ಅವುಗಳನ್ನ ಗೂಡಿನಿಂದ ಹೊರ ಹಾಕುತ್ತವೆ. ತಮ್ಮ ಸ್ವಂತ ಮರಿಗಳನ್ನು ಗೂಡಿನಿಂದ ಹೊರ ಹಾಕಿದರೂ ಸಹ ಬೇರೆ ಪಕ್ಷಿಗಳು ಕೋಗಿಲೆಯ ಮರಿಗಳಿಗೆ ಆಹಾರವನ್ನು ನೀಡುತ್ತವೆ. ಆದರೆ ಇದು ಕೊಗಿಲೆಗಳ ಕ್ರೂರ ತನ ಅಲ್ಲ. ಪ್ರಕೃತಿಯ ಜೀವನ ಚಕ್ರದ ಒಂದು ಭಾಗ. ಅಂದರೆ ಬೇರೆ ಜಾತಿಯ ಹಕ್ಕಿಗಳ ಸಂತಾನ ಹೆಚ್ಚಾಗದಂತೆ ಸಮತೋಲನ ಕಾಪಾಡುವುದು ಇದರ ಕೆಲಸ ಇದು ಪ್ರಕೃತಿಯ ನಿಯಮವನ್ನು ಪಾಲಿಸುವ ಅಮೇಜಿಂಗ್ ಬರ್ಡ್ ಈ ವಿಡಿಯೋ ನೋಡಿ.