ಮಳೆ, ನೈಸರ್ಗಿಕ ವಿಕೋಪದ ಬಗ್ಗೆ ಮತ್ತೊಮ್ಮೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಶ್ರೀ

0 0

ಈ ಹಿಂದೆ ಹೂತ ಹೆಣಗಳು ಪ್ರೇತವಾಗಿ ಮಾತನಾಡುತ್ತವೆ ಎಂದು ಮಾಹಾಮಾರಿ ಕೊರೋನಾ ರೋಗದ ಕುರಿತು ಬೆಚ್ಚಿ ಬೀಳಿಸುವಂತಹ ಭವಿಷ್ಯ ನುಡಿದ ಕೋಡಿಮಠದ ಶ್ರೀ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಇದೀಗ ಮತ್ತೊಮ್ಮೆ ಮಳೆ, ನೈಸರ್ಗಿಕ ವಿಕೋಪದ ಬಗ್ಗೆ ಭವಿಷ್ಯವನ್ನು ನುಡಿದಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಹಾಗಾದರೆ ಮಳೆ ಕುರಿತು ನುಡಿದಿರುವ ಭವಿಷ್ಯ ಏನು, ಏನಾಗಲಿದೆ ಕರ್ನಾಟಕದ ಪರಿಸ್ಥಿತಿ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.

ಜೂನ 20ರ ಬಳಿಕ ಕೊರೋನಾ ಅಲೆ ಕಡಿಮೆಯಾಗಲಿದೆ, ನಡೆದುಕೊಂಡು ಹೋಗುತ್ತಿರುವಾಗಲೆ ಮನುಷ್ಯ ಬಿದ್ದು ಸಾಯುತ್ತಾನೆ, ಕುಂಭದಲಿ ಗುರು ಬರಲು ತುಂಬುವುದು ಕೆರೆಕಟ್ಟೆ, ಕಾರ್ತಿಕ ಮಾಸದವರೆಗೂ ಕೊರೋನಾ ಬೆನ್ನು ಹತ್ತಲಿದೆ ಎಂದು ಈ ಹಿಂದೆಯೇ ಭವಿಷ್ಯವಾಣಿ ನುಡಿದಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮಿಜಿಯವರು

ಈಗ ಮಳೆ ಮತ್ತು ಪ್ರಾಕೃತಿಕ ವಿಕೋಪದ ಕುರಿತು ಬೆಚ್ಚಿ ಬೀಳಿಸುವಂತಹ ಭವಿಷ್ಯ ವಾಣಿಯನ್ನು ನುಡಿದಿದ್ದು, ಪ್ರಕೃತಿಯ ನಾಲ್ಕು ದಿಕ್ಕುಗಳಲ್ಲಿ ದೋಷವಿದೆ ಎಂದು ಹೇಳಿರುವ ಶ್ರೀಗಳು, ಮಳೆ ಮತ್ತು ನೈಸರ್ಗಿಕ ವಿಕೋಪಗಳು ಇನ್ನೂ ಮೂರು ತಿಂಗಳು ಮುಂದುವರಿಯಲಿದ್ದು ಜನರಿಗೆ ಇದರಿಂದ ಸಾಕಷ್ಟು ತೊಂದರೆಯಾಗಲಿದೆ ಎಂದು ಹೇಳಿದರು.

ವಿಶೇಷವಾಗಿ ನೈಸರ್ಗಿಕ ವಿಕೋಪ ,ಪ್ರವಾಹದಿಂದ ಕರ್ನಾಟಕ ರಾಜ್ಯದ ಮೇಲಾಗುವ ಪರಿಣಾಮದ ಕುರಿತು ತಿಳಿಸಿದ್ದಾರೆ. ಮಳೆ ಪ್ರವಾಹದಿಂದ ರಾಜ್ಯದ ಬಹುತೇಕ ಭಾಗದ ಜನರು ತತ್ತರಿಸುತ್ತಿದ್ದು, ಕೆಲವು ದಿನಗಳ ಹಿಂದೆ ಎಲ್ಲೆಡೆ ಮಳೆಯಿಲ್ಲದೆ, ಕುಡಿಯಲು ನೀರಿಲ್ಲದೆ ಆಕಾಶ ನೋಡುತ್ತಿದ್ದ ಜನರು ಈಗ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾರೆ.

ಜನರು ಮನೆ, ಜಮೀನು, ಆಸ್ತಿಪಾಸ್ತಿ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ರಾಜ್ಯದ ಹೆಚ್ಚು ಪಾಲಿನ ಭೂಮಿ ನೀರಿನಲ್ಲಿ ಮುಳುಗಿಹೋಗಿದೆ, ಮನೆಗಳು ನೆಲ ಕಚ್ಚಿವೆ ಆದರೆ ಈಗ ಕೆಲವೆಡೆ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗುತ್ತಿದ್ದು, ಪ್ರವಾಹದ ಪರಿಸ್ಥಿತಿ ಇಳಿಮುಖವಾಗಿದೆ. ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಆದರೆ ಮಳೆ ಇಷ್ಟಕ್ಕೆ ನಿಲ್ಲುವುದಿಲ್ಲ. ಈ ಅಪಾಯಕಾರಿ ಮಳೆ ಅಬ್ಬರ ಇನ್ನೂ ಮುಂದುವರೆಯಲಿದೆ ಎಂದಿದ್ದಾರೆ ಶ್ರೀಗಳು.

ಈಗಾಗಲೇ ಮಳೆಗಾಲದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಕರ್ನಾಟಕ ತತ್ತರಿಸಿ ಹೋಗಿದೆ ಹೀಗಿರುವಾಗ ಕೋಡಿ ಮಠದ ಶ್ರೀಗಳು ಜಲಕಂಟಕ ಸಂಭವಿಸಲಿದೆ, ಈ ವರ್ಷ ಮತ್ತಷ್ಟು ವಾಯು ಆಘಾತ, ಭೂ ಆಘಾತ ಸಂಭವಿಸಲಿದೆ, ಈಗ ಜಲ ಆಘಾತ ಸಂಭವಿಸುತ್ತಿದ್ದು ಮುಂದಿನ ದಿನಗಳಲ್ಲಿ ಭೂ ಆಘಾತ ಉಂಟಾಗಲಿದ್ದು ಭೂಮಿ ನಡುಗುವುದು, ಭೂ ಕುಸಿತ, ಕಟ್ಟಡ ಕುಸಿತಗಳಂತಹ ಘಟನೆಗಳು ನಡೆಯಲಿದೆ. ಜಗತ್ತು ಹಿಂದೆಂದು ಕೇಳರಿಯದ ವಾಯು ಆಘಾತವೊಂದು ಉಂಟಾಗಲಿದೆ ಎಂದು ನೈಸರ್ಗಿಕ ವಿಕೋಪದ ಕುರಿತು ಮುನ್ಸೂಚನೆ ನೀಡಿದ್ದಾರೆ

ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಮಳೆಯಾಗುತ್ತಿದ್ದು, ಕಾರ್ತಿಕ ಮಾಸದವರೆಗೂ ಮುಂದುವರಿಯಲಿದ್ದು, ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಪ್ರಕೃತಿಯ ಸಂಪತ್ತು ನಾಶವಾಗುತ್ತಿದೆ. ಇದಕ್ಕೆಲ್ಲ ಸೂರ್ಯ ಮತ್ತು ಚಂದ್ರ ಗ್ರಹಣ ಈ ಸಾರಿ ಒಂದೆ ಬಾರಿ ಬಂದಿರುವುದೇ ಕಾರಣ ಹಾಗೆಯೇ ಜನರಲ್ಲಿ ಭಕ್ತಿಭಾವಗಳು, ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಕೃತಿ ಈ ರೀತಿ ಜನರನ್ನು ಎಚ್ಚರಿಸುತ್ತಿದ್ದು ಇನ್ನೂ ಮುಂದೆ ಅನೇಕ ಗಂಡಾಂತರ ಕಾದಿದೆ ಎಂದು ಒಗಟಿನ ರೂಪದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯವನ್ನು ನುಡಿಯುವುದರ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

Leave A Reply

Your email address will not be published.